ಕೋಮಲ್ ಕುಮಾರ್ ಅಭಿನಯದ ನಮೋ ಭೂತಾತ್ಮ 2 ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಕೋಮಲ್ ಕುಮಾರ್ ಅಭಿನಯದ 'ನಮೋ ಭೂತಾತ್ಮ 2' ಟೀಸರ್ ಬಿಡುಗಡೆ ಮಾಡಿದ ನಟ ಧ್ರುವ ಸರ್ಜಾ

ನಟ ಕೋಮಲ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು, ನೃತ್ಯ ನಿರ್ದೇಶಕ ಮುರಳಿ ನಿರ್ದೇಶನದ 'ನಮೋ ಭೂತಾತ್ಮ 2' ರ ಟೀಸರ್ ಅನ್ನು ನಟ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಧ್ರುವ ಸರ್ಜಾ ಅವರು ಕೋಮಲ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

ನಟ ಕೋಮಲ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು, ನೃತ್ಯ ನಿರ್ದೇಶಕ ಮುರಳಿ ನಿರ್ದೇಶನದ 'ನಮೋ ಭೂತಾತ್ಮ 2' ರ ಟೀಸರ್ ಅನ್ನು ನಟ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಧ್ರುವ ಸರ್ಜಾ ಅವರು ಕೋಮಲ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ತಾವು ಮೊದಲಿನಿಂದಲೂ ಅವರ ಅಭಿಮಾನಿಯಾಗಿದ್ದು, ಅವರ ಎಲ್ಲಾ ಚಿತ್ರಗಳನ್ನು ನೋಡಿರುವುದಾಗಿ ತಿಳಿಸಿದರು. ಚಿತ್ರದ ನಿರ್ದೇಶಕ ಮುರಳಿ ಮಾಸ್ಟರ್ ತಮ್ಮ ಚಿತ್ರಗಳಲ್ಲಿನ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದು ಅವರು ಹೇಳಿದರು.

'ಮುರಳಿ ಮಾಸ್ಟರ್ ನಿರ್ಮಿಸಿ, ನಟಿಸಿ, ನಿರ್ದೇಶಿಸಿದ 'ನಮೋ ಭೂತಾತ್ಮ' ಚಿತ್ರದ ಮೊದಲ ಭಾಗ ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. 'ಈಗ, ಹಲವು ವರ್ಷಗಳ ನಂತರ ನಮ್ಮ ಸಹಯೋಗದಲ್ಲಿ 'ನಮೋ ಭೂತಾತ್ಮ 2' ಮಾಡಲಾಗುತ್ತಿದೆ. ಚಿತ್ರದ ಮೊದಲ ಭಾಗವು ಹಾರರ್ ಆಗಿದ್ದರೆ, ಎರಡನೇ ಭಾಗದಲ್ಲಿ ಹಾಸ್ಯ ಪ್ರಕಾರವಿದೆ' ಎಂದು ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಕೋಮಲ್ ಹೇಳಿದರು.

ನಮೋ ಭೂತಾತ್ಮ ಚಿತ್ರವನ್ನು ನಿರ್ದೇಶಿಸಲು ಕೋಮಲ್ ಅವರು ನನ್ನನ್ನು 2014ರಲ್ಲಿ ಸಂಪರ್ಕಿಸಿದರು ಮತ್ತು ನಾವೀಗ 'ನಮೋ ಭೂತಾತ್ಮ 2' ಗಾಗಿ ಮತ್ತೆ ಕೆಲಸ ಮಾಡಿದ್ದೇವೆ ಎಂದು ನಿರ್ದೇಶಕ ಮುರಳಿ ಬಹಿರಂಗಪಡಿಸಿದರು. 

ಕಾಮಿಡಿ ಎಂಟರ್‌ಟೈನರ್ ಸಿನಿಮಾದಲ್ಲಿ ಲೇಖಾ ಚಂದ್ರ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ, ಗೋವಿಂದೇಗೌಡ, ಮೋನಿಕಾ ಮತ್ತು ವರುಣ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮುರಳಿ ಅವರ ಸೋದರಳಿಯ ಸಂತೋಷ್ ಶೇಖರ್ ನಿರ್ಮಾಣದ ಈ ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರತಂಡವು ಸೆನ್ಸಾರ್ ಮಂಡಳಿ ಮುಂದಿಟ್ಟಿದೆ. ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ. ಚಿತ್ರಕ್ಕೆ ಅರ್ಜುನ್ ಆಂಡ್ರ್ಯೂಸ್ ಸಂಗೀತ ಸಂಯೋಜಿಸಿದ್ದು, ಹಲ್ಲೇಶ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT