ಹೃತಿಕಾ, ಪುನೀತ್ ರಾಜ್‌ಕುಮಾರ್, ಸುಘೋಷ್ 
ಸಿನಿಮಾ ಸುದ್ದಿ

'ಅಪರೂಪ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಡಿರುವ 'ಯು ಆರ್ ಮೈ ಕರೀನಾ' ಮೋಡಿ ಮಾಡಿದೆ: ನಿರ್ದೇಶಕ ಮಹೇಶ್ ಬಾಬು

ಪ್ರೇಮಕಥೆಗಳತ್ತ ಒಲವು ಹೊಂದಿರುವ ಮತ್ತು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ನಿರ್ದೇಶಕ ಮಹೇಶ್ ಬಾಬು ಸಾರಥಿ ಅವರ ಇತ್ತೀಚಿನ ಚಿತ್ರ ‘ಅಪರೂಪ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರ ಜುಲೈ 14 ರಂದು ಕರ್ನಾಟಕದಾದ್ಯಂತ ತೆರೆಕಾಣಲಿದೆ.

ಪ್ರೇಮಕಥೆಗಳತ್ತ ಒಲವು ಹೊಂದಿರುವ ಮತ್ತು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ನಿರ್ದೇಶಕ ಮಹೇಶ್ ಬಾಬು ಸಾರಥಿ ಅವರ ಇತ್ತೀಚಿನ ಚಿತ್ರ ‘ಅಪರೂಪ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರ ಜುಲೈ 14 ರಂದು ಕರ್ನಾಟಕದಾದ್ಯಂತ ತೆರೆಕಾಣಲಿದೆ.

ಸೌಂಡ್‌ಟ್ರಾಕ್‌ ಅನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದು, ಒಂದು ನಿರ್ದಿಷ್ಟ ಹಾಡು ಇದೀಗ ಎಲ್ಲರ ಗಮನ ಸೆಳೆದಿದೆ. ಈ ಹಾಡನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದು, ಚಿತ್ರಕ್ಕೆ ವಿಶೇಷವಾದ ಆಕರ್ಷಣೆಯನ್ನು ನೀಡಿದೆ. 'ಯು ಆರ್ ಮೈ ಕರೀನಾ' ಎಂಬ ಶೀರ್ಷಿಕೆಯ ಈ ಟಪಾಂಗುಚ್ಚಿ ಹಾಡು ಪುನೀತ್ ರಾಜ್‌ಕುಮಾರ್ ಹಾಡಿರುವ ಕೊನೆಯ ಹಾಡಾಗಿದೆ. ಪ್ರಜ್ವಲ್ ಪೈ ಸಂಗೀತವಿರುವ ಈ ಚಿತ್ರಕ್ಕೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ ಮತ್ತು ಸಂಗೀತಾ ರವೀಂದ್ರನಾಥ್ ಕೂಡ ಹಾಡಿದ್ದಾರೆ.

'ಅಪರೂಪ'ವನ್ನು ಸಮಕಾಲೀನ ಪ್ರೇಮಕಥೆ ಎನ್ನುವ ನಿರ್ದೇಶಕರು, ವಿಶಿಷ್ಟ ನಿರೂಪಣೆಯಿಂದಾಗಿ ಚಿತ್ರವು ಹಲವಾರು ಸವಾಲುಗಳನ್ನು ಒಡ್ಡಿದೆ ಎಂದು ಹಂಚಿಕೊಳ್ಳುತ್ತಾರೆ. ಈ ಹಿಂದೆ ನಿರ್ದೇಶಕರ 'ಅತಿರಥ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಂಡ್ಯದ ಸುಘೋಷ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಖ್ಯಾತ ನಟಿ ಅಮಾನಿ ಅವರ ಸೊಸೆ ಹೃತಿಕಾ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಅಶೋಕ್, ಅರುಣಾ ಬಾಲರಾಜ್, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ವಿಜಯ್ ಚೆಂಡೂರ್, ಕಡ್ಡಿಪುಡಿ ಚಂದ್ರು ಮತ್ತು ಮೋಹನ್ ಜುನೇಜಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮತ್ತು ಕಾಶ್ಮೀರದಂತಹ ಸ್ಥಳಗಳಲ್ಲಿ ಛಾಯಾಗ್ರಾಹಕ ಸೂರ್ಯಕಾಂತ್ ಅವರು ಅಪರೂಪವನ್ನು ಚಿತ್ರೀಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video