ನೀನಾಸಂ ಸತೀಶ್ 
ಸಿನಿಮಾ ಸುದ್ದಿ

'ಪೆಪೆ' ನಿರ್ದೇಶಕ ಶ್ರೀಲೇಶ್ ನಾಯರ್ ಜೊತೆ ನೀನಾಸಂ ಸತೀಶ್ ಮುಂದಿನ ಸಿನಿಮಾ!

ಪೆಪೆ ನಿರ್ದೇಶಕ ಶ್ರೀಲೇಶ್ ನಾಯರ್ ಜೊತೆ ನೀನಾಸಂ ಸತೀಶ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿದ್ದಾರೆ.

ಪೆಪೆ ನಿರ್ದೇಶಕ ಶ್ರೀಲೇಶ್ ನಾಯರ್ ಜೊತೆ ನೀನಾಸಂ ಸತೀಶ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿದ್ದಾರೆ.

ಸದ್ಯ ಸತೀಶ್  ಅಶೋಕ ಬ್ಲೇಡ್, ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಮೊದಲ ದ್ವಿಭಾಷಾ ಚಿತ್ರವಾಗಿದೆ, ಪೆಪೆ ನಿರ್ದೇಶಕ ಶ್ರೀಲೇಶ್ ನಾಯರ್ ಸಿನಿಮಾಗೆ ಸತೀಶ್ ಗ್ರೀನ್ ಸಿಗ್ನಲ್ ತೋರಿದ್ದಾರೆ.

ಶ್ರೀಲೇಶ್ ನಾಯರ್

ಕಥೆ ಕೇಳಿದ ಸತೀಶ್ ತುಂಬಾ ಇಂಪ್ರೆಸ್ ಆಗಿದ್ದಾರೆ, ನೈಜತೆಗೆ ಹತ್ತಿರವಾದ ಕತೆ ಇದಾಗಿದೆ ಎಂದು ಹೇಳಿದ್ದಾರೆ. ಚಿತ್ರದ ಶೂಟಿಂಗ್ ಆರಂಭವಾದ ನಂತರ ಉಳಿದ ವಿವರಗಳನ್ನು ಬಹಿರಂಗಗೊಳಿಸಲಾಗುವುದು ಎಂದು ತಿಳಿದುಬಂದಿದೆ.

‘ಅಶೋಕ ಬ್ಲೇಡ್‌ ಸಿನಿಮಾದ ಚಿತ್ರೀಕರಣ ಶೇ.80ರಷ್ಟು ಮುಗಿದಿದೆ. ಇದರ ಕಥೆ 70ರ ದಶಕದಲ್ಲಿ ಪ್ರಾರಂಭವಾಗಿ 2022ರವರೆಗೂ ಟ್ರಾವೆಲ್‌ ಮಾಡುತ್ತದೆ. ಹಾಗಾಗಿ 70ರ ದಶಕವನ್ನು ಮೊದಲ ಭಾಗದಲ್ಲಿ ಮತ್ತು 2022ರ ಕಥೆಯನ್ನು ಎರಡನೇ ಭಾಗದಲ್ಲಿ ಮಾಡಲು ನಿರ್ಧಾರ ಮಾಡಿದ್ದೇವೆ. ಕೆಲವು ಸಿನಿಮಾಗಳನ್ನು ನೋಡಿದರೆ ಪೂರ್ತಿ ಕಥೆಯನ್ನು ಇನ್ನೊಂದು ಭಾಗದಲ್ಲಿ ಮಾಡಬಹುದಿತ್ತು ಎನಿಸತ್ತದೆ. ಅಂತಹ ಒಂದು ಕಥೆ ಅಶೋಕ ಬ್ಲೇಡ್‌ ಸಿನಿಮಾದ್ದು. ಹಾಗಾಗಿ ಇದನ್ನು ಎರಡು ಭಾಗದಲ್ಲಿ ಮಾಡಲಾಗುತ್ತಿದೆ.

ವಿನಯ್ ರಾಜಕುಮಾರ್ ನಟನೆಯ ಪೆಪೆ ಸಿನಿಮಾವನ್ನು ಶ್ರೀಲೇಶ್ ನಿರ್ದೇಶಿಸಿದ್ದಾರೆ. ಸದ್ ಈ ಸಿನಿಮಾ  ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ತಯಾರಕರು ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT