ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಅನಿರೀಕ್ಷಿತ ಯಶಸ್ಸು: ವೀಕೆಂಡ್ ನಲ್ಲಿ 2.10 ಲಕ್ಷ ಟಿಕೆಟ್ ಬುಕಿಂಗ್!

ಕಳೆದ ಎರಡು ತಿಂಗಳಿಂದ ಕನ್ನಡ ಸಿನಿಮಾದಲ್ಲಿ ಹೇಳಿಕೊಳ್ಳುವಂತ ರೀತಿಯಲ್ಲಿ ಯಾವುದೇ ಸಿನಿಮಾ ಹಿಟ್ ಆಗಿಲ್ಲ, ಆದರೆ ಇತ್ತೀಚೆಗೆ ಬಿಡುಗಡೆಯಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ  ಸಿನಿಮಾ ವೈಭವದ ದಿನಗಳನ್ನು ಮರಳಿ ತಂದಿದೆ.

ಕಳೆದ ಎರಡು ತಿಂಗಳಿಂದ ಕನ್ನಡ ಸಿನಿಮಾದಲ್ಲಿ ಹೇಳಿಕೊಳ್ಳುವಂತ ರೀತಿಯಲ್ಲಿ ಯಾವುದೇ ಸಿನಿಮಾ ಹಿಟ್ ಆಗಿಲ್ಲ, ಆದರೆ ಇತ್ತೀಚೆಗೆ ಬಿಡುಗಡೆಯಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ  ಸಿನಿಮಾ ವೈಭವದ ದಿನಗಳನ್ನು ಮರಳಿ ತಂದಿದೆ.

ಅನಿರೀಕ್ಷಿತ ವಿವಾದದ ನಡುವೆಯೇ ರಿಲೀಸ್ ಆದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜುಲೈ 21 ರಂರು ತೆರೆ ಕಂಡಿತು.

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ನಿರ್ದೇಶನದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಆಶ್ಚರ್ಯಕರ ರೀತಿಯಲಲ್ಲಿ ಯಶಸ್ಸು ಕಂಡಿದೆ. ಕಳೆದ ವೀಕೆಂಡ್ ನಲ್ಲಿ 2.10 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿ 5 ಕೋಟಿ ರು ಹಣ ಗಳಿಸಿದೆ.

ಸಿನಿಮಾ ಬಿಡುಗಡೆ ನಂತರ ಸಿನಿಮಾ ವೀಕ್ಷಿಸುತ್ತಿದ್ದವರನ್ನು ಕಂಡು ನನಗೆ ಆಶ್ಚರ್ಯ ಉಂಟಾಯಿತು, ಸಿನಿಮಾ ಕಥೆ ವರ್ಕೌಟ್ ಆಗುತ್ತದೆ ಎಂದು ನನಗೆ ತಿಳಿದಿತ್ತು. ಆದರೆ ಈ ಮಟ್ಟಿಗೆ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ, ಟಿಕೆಟ್ ಕೊಳ್ಳಲು ಜನ ಸರದಿ ಸಾಲಿನಲ್ಲಿ ನಿಂತಿದ್ದನ್ನು ನೋಡಿ ನನ್ನ ಕಣ್ಣು ತುಂಬಿ ಬಂತು ಎಂದು ನಿರ್ದೇಶಕ ನಿತಿನ್ ಭಾವುಕರಾದರು.

ಜನ ಸಂದಣಿ ಅಧಿಕರವಾಗಿದ್ದ ಕಾರಣ ವಿರೇಶ್ ಥಿಯೇಟರಿನಲ್ಲಿ ಪೊಲೀಸರ ಕಾವಲಿತ್ತು, ಜಡಿ ಮಳೆ ಕೂಡ ಅಭಿಮಾನಿಗಳ ಉತ್ಸಾಹ ತಡೆಯಲಿಲ್ಲ ಎಂದು ಹೇಳಿದ್ದಾರೆ.

ಬಿಡುಗಡೆಗೆ ಮೊದಲು, ಉದ್ಯಮದಲ್ಲಿ ಕೆಲವರು ಹಾಸ್ಟೆಲ್ ಹುಡುಗರು... ಮಲ್ಟಿಪ್ಲೆಕ್ಸ್ ಬಿಡುಗಡೆಗೆ ಅಥವಾ ಸೀಮಿತ ಪರದೆಯ OTT ಪ್ಲಾಟ್‌ಫಾರ್ಮ್‌ಗೆ ಸೂಕ್ತವಾಗಿರುತ್ತದೆ ಎಂದು ಭಾವಿಸಿದ್ದರು.

"ಆದಾಗ್ಯೂ, ರಕ್ಷಿತ್ ಶೆಟ್ಟಿ ಅವರ ಪರಮವಾ ಸ್ಟುಡಿಯೋಸ್ ಮತ್ತು ಝೀ ಸ್ಟುಡಿಯೋಸ್ ಚಿತ್ರದ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿದ್ದವು, ಇದರಿಂದಾಗಿ ಉತ್ತಮ ಸಂಖ್ಯೆಯ ಚಿತ್ರಮಂದಿರಗಳು ಲಭ್ಯವಾಗಿವೆ.

ಚಿತ್ರವು ಈ ವಾರ ಹೆಚ್ಚುವರಿ 60 ಶೋ  ಪೂರೈಸಿದೆ. ಈಗ ಹೈದರಾಬಾದ್ ಮತ್ತು ಚೆನ್ನೈನ ಕೆಲವು ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾಲಿವುಡ್‌ನ ಓಪನ್‌ಹೈಮರ್ ಮತ್ತು ಬಾರ್ಬಿಯಂತಹ ಚಿತ್ರಗಳ ಪೈಪೋಟಿಯ ಹೊರತಾಗಿಯೂ, ಹಾಸ್ಟೆಲ್ ಹುಡುಗರು... ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

"ಹಾಸ್ಟೆಲ್ ಹುಡುಗರು ಬಿಡುಗಡೆಯು ವಿಶೇಷವಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರಿಗೆ ಸಂತೋಷ ತಂದಿದೆ, ಏಕೆಂದರೆ ಇದು ಅವರ ಥಿಯೇಟರ್‌ಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದೆ" ಎಂದು ನಿತಿನ್ ಹೇಳುತ್ತಾರೆ.

ಈ ಯಶಸ್ಸು ನನ್ನಂತಹ ನಿರ್ದೇಶಕರಿಗೆ ಭರವಸೆ ನೀಡುತ್ತದೆ, ವಿಶೇಷವಾಗಿ ಜನರು ಪ್ರಯೋಗಗಳ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ. ಸಿನಿಮಾ ಕಥೆ ಸೃಜನಾತ್ಮಕ ಹಾಸ್ಯದಿಂದ ಕೂಡಿದೆ, ಕೆಲವು ಸನ್ನಿವೇಶಗಳು ಆಕರ್ಷಕವಾದ ಅಂಶಗಳಿಂದ ಕೂಡಿವೆ ಹೀಗಾಗಿ ಪ್ರೇಕ್ಷಕರ ಗಮನವನ್ನು ಹಿಡಿದಿಡುವಲ್ಲಿ ಹಾಸ್ಯ ಸನ್ನಿವೇಶಗಳು ಯಶಸ್ವಿಯಾಗಿವೆ ಎಂದು ಹೇಳಿದ್ದಾರೆ.

ನಿರ್ದೇಶನದ ಹೊರತಾಗಿ ನಿತಿನ್ ತಮ್ಮ ನಟನೆಯಿಂದಲೂ ಗಮನ ಸೆಳೆದಿದ್ದಾರೆ. “ನಾನು ಬಹಳ ಸಮಯದಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ,  ನಾನು ಕಾರ್ಪೊರೇಟ್ ಕಂಪನಿಗೆ ಸೇರಿದ ನಂತರ ನಾನು ಮಧ್ಯದಲ್ಲಿ ತ್ಯಜಿಸಿದೆ. ಆದರೆ ನನಗೆ ಯಾವಾಗಲೂ ನಟನೆಯ ಆಕಾಂಕ್ಷೆ ಇತ್ತು. ಆದರೆ, ನಾನು ಚಿಕ್ಕ ಪಾತ್ರವನ್ನು ಆಯ್ಕೆ ಮಾಡಿಕೊಂಡೆ, ಇದರಿಂದ ಎರಡನ್ನೂ ಬ್ಯಾಲೆನ್ಸ್ ಮಾಡಬಹುದು ಎಂದು ಕೊಂಡಿದ್ದೆ ಎಂದು ತಿಳಿಸಿದ್ದಾರೆ.

ಮೂರು ವರ್ಷಗಳ ಕಠಿಣ ಪರಿಶ್ರಮದ ನಂತರ, ನಿತಿನ್ ತನ್ನ ಮುಂದಿನ ಕೆಲಸವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ವಿರಾಮವನ್ನು ತೆಗೆದುಕೊಂಡರು. ನನ್ನ ಮನಸ್ಸಿನಲ್ಲಿ ಒಂದೆರಡು ವಿಚಾರಗಳಿವೆ ಮತ್ತು ನಾನು ಸ್ಕ್ರಿಪ್ಟ್ ಬರವಣಿಗೆಯಲ್ಲಿ ಕುಳಿತಾಗ ಅದನ್ನು ಹೊರ ತರುತ್ತೇನೆ.

ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಪ್ರಜ್ವಲ್ ಪಿ, ರಾಕೇಶ್ ರಾಜ್‌ಕುಮಾರ್, ಮಂಜುನಾಥ್, ತೇಜಸ್ ಮತ್ತು ಇತರರು ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಅಜನೀಶ್ ಲೋಕನಾಥ್ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT