ಸಿನಿಮಾ ಸುದ್ದಿ

''ಡೇರ್ ಡೆವಿಲ್ ಮುಸ್ತಾಫಾ" ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಒತ್ತಾಯ

Nagaraja AB

ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾಗಿರುವ ಕನ್ನಡದ ''ಡೇರ್ ಡೆವಿಲ್ ಮುಸ್ತಾಫಾ"ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ.

ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬರಹಾಧಾರಿತ ಶಶಾಂಕ್ ನಿರ್ದೇಶನದ "ಡೇರ್ ಡೆವಿಲ್ ಮುಸ್ತಾಫಾ"ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಚಿಂತಕ ಪ್ರೊಫೆಸರ್ ನಟರಾಜ್ ಹುಳಿಯಾರ್ ನೇತೃತ್ವದ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ನಿರ್ದೇಶಕ ಶಶಾಂಕ್, ಚಿತ್ರಕಥೆ ಲೇಖಕ ಅನಂತ್ ಮತ್ತಿತರರು ಈ ತಂಡದಲ್ಲಿದ್ದರು.

‘ಡೇರ್‌ ಡೆವಿಲ್‌ ಮುಸ್ತಾಫಾʼ ಸಿನಿಮಾ ಬಿಡುಗಡೆಯಾಗಿ ಮೂರು ವಾರ ಕಳೆದರೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್ ದರ ಕಡಿತಗೊಳಿಸುವ ಬಗ್ಗೆ ಚಿತ್ರತಂಡ ನಿರ್ಧಾರ ಕೈಗೊಂಡಿತ್ತು. ಸಿಂಗಲ್ ಸ್ಕ್ರೀನ್​ಗಳಲ್ಲಿ ಕೇವಲ 50 ಹಾಗೂ 75 ರುಪಾಯಿ ಟಿಕೆಟ್ ದರ ನಿಗದಿಪಡಿಸಿದ್ದರೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಕೇವಲ 99 ರೂಪಾಯಿಗಳಲ್ಲಿ ಸಿನಿಮಾ ಟಿಕೆಟ್ ಲಭ್ಯವಾಗುತ್ತಿದೆ.

ಈ ಸಿನಿಮಾದಲ್ಲಿ ಹಿರಿಯ ನಟ ಮಂಡ್ಯ ರಮೇಶ್‌, ನಾಗಭೂಷನ್‌ ಪೂರ್ಣಚಂದ್ರ ಮೈಸೂರು, ಸುಂದರ್‌ ವೀಣಾ, ಯುವ ಪ್ರತಿಭೆ ಶಿಶಿರ್‌ ಬೈಕಾಡಿ ಮತ್ತಿತರರ ತಾರಾಬಳಗವಿದೆ.  ನವನೀತ್‌ ಶ್ಯಾಮ್‌ ಸಂಗೀತ ಸಂಯೋಜಿಸಿರುವ ಚಿತ್ರವನ್ನು ಡಾಲಿ ಫಿಕ್ಚರ್ಸ್‌ ಬ್ಯಾನರ್‌ನಡಿಯಲ್ಲಿ ಪ್ರಸ್ತುತಪಡಿಸಲಾಗಿದೆ.

SCROLL FOR NEXT