ಪ್ರಭಾಸ್ ಆದಿಪುರುಷ ಚಿತ್ರದ ಫೋಸ್ಟರ್ 
ಸಿನಿಮಾ ಸುದ್ದಿ

"ಆದಿಪುರುಷ" ಚಿತ್ರದ ಕರ್ನಾಟಕ ವಿತರಣೆ ಹಕ್ಕು KRG Studios ಪಾಲು

ಕೆಜಿಎಫ್ ಚಾಪ್ಟರ್ 1 ಮತ್ತು  ಚಾಪ್ಟರ್ 2, ಕಾಂತಾರ, 777 ಚಾರ್ಲಿ, ಗಂಧದ ಗುಡಿ, ವಕೀಲ್ ಸಾಬ್ ಮತ್ತು ದಸರಾದಂತಹ ದೊಡ್ಡ ಚಿತ್ರಗಳ ಯಶಸ್ವಿ ವಿತರಣೆ ನಂತರ ಇದೀಗ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದ ಕರ್ನಾಟಕದ ಹಕ್ಕುಗಳನ್ನು ಕೆಆರ್‌ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.

ಕೆಜಿಎಫ್ ಚಾಪ್ಟರ್ 1 ಮತ್ತು  ಚಾಪ್ಟರ್ 2, ಕಾಂತಾರ, 777 ಚಾರ್ಲಿ, ಗಂಧದ ಗುಡಿ, ವಕೀಲ್ ಸಾಬ್ ಮತ್ತು ದಸರಾದಂತಹ ದೊಡ್ಡ ಚಿತ್ರಗಳ ಯಶಸ್ವಿ ವಿತರಣೆ ನಂತರ ಇದೀಗ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದ ಕರ್ನಾಟಕದ ಹಕ್ಕುಗಳನ್ನು ಕೆಆರ್‌ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.

ಹೊಂಬಾಳೆ ಫಿಲಂಸ್‌ನ ಕಾರ್ಯಕಾರಿ ನಿರ್ಮಾಪಕ ಮತ್ತು ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ  ಈ ಸಾಹಸದ ಬಗ್ಗೆ ಅತ್ಯುತ್ಸಾಹ ವ್ಯಕ್ತಪಡಿಸಿದ್ದಾರೆ.“ಆದಿಪುರುಷದ ವಿತರಣೆಯ ಹಕ್ಕುಗಳನ್ನು ಪಡೆದುಕೊಂಡಿರುವುದಕ್ಕೆ ಥ್ರಿಲ್ ಆಗಿದ್ದೇವೆ. ಈ ಕಾಲಾತೀತ ಮತ್ತು ಭವ್ಯವಾದ ಪೌರಾಣಿಕ ಚಲನಚಿತ್ರವನ್ನು ಕರ್ನಾಟಕದ ಪ್ರೇಕ್ಷಕರಿಗೆ ತರಲು ಇದು ಒಂದು ಗೌರವವಾಗಿದೆ ಎಂದಿದ್ದಾರೆ. 

ಈ ಚಿತ್ರ ಪ್ರಭಾಸ್ ಮತ್ತು ಯುವಿ ಕ್ರಿಯೇಷನ್ಸ್ ಜೊತೆಗಿನ ನಮ್ಮ ಯಶಸ್ವಿ ಸಹಯೋಗವನ್ನು ಬಲಪಡಿಸುತ್ತದೆ. ವಿತರಣ ಹಕ್ಕು ಸಿಕ್ಕಿರುವುದು ನಮ್ಮ ವೀಕ್ಷಕರಿಗೆ ವೈವಿಧ್ಯಮಯ ಮತ್ತು ಆಕರ್ಷಕವಾದ ಸಿನಿಮೀಯ ಅನುಭವಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದ್ದಾರೆ. 

ರಾಮಾಯಣ ಆಧರಿಸಿದ ಆದಿಪುರುಷ ಸಿನಿಮಾವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. T-Series ಮತ್ತು Retrophiles ನಿರ್ಮಿಸಿರುವ ಈ ಚಿತ್ರವು ಜೂನ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಗೆ ಸೇರಿದಂತೆ ದೊಡ್ಡ ತಾರಾಗಣವಿದೆ ಮತ್ತು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಡಬ್ಬಿಂಗ್ ಆವೃತ್ತಿಗಳು ಇತರ ಭಾಷೆಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT