ರಾಕುಲ್ ಪ್ರೀತ್ ಸಿಂಗ್ 
ಸಿನಿಮಾ ಸುದ್ದಿ

ಜನರ ಬಳಿ ಹಣವಿಲ್ಲ, ಅದಕ್ಕೇ ನನ್ನ ಸಿನಿಮಾ ಫ್ಲಾಪ್ ಆಗ್ತಿದೆ: ರಾಕುಲ್ ಪ್ರೀತ್ ಸಿಂಗ್

ನಟಿ ರಾಹುಲ್ ಪ್ರೀತ್ ಸಿಂಗ್ ಅವರಿಗೆ ಬಾಲಿವುಡ್​ ಮತ್ತು ಟಾಲಿವುಡ್​ನಲ್ಲಿಯೂ ಯಾಕೋ ಟೈಮ್ ಸರಿ ಇಲ್ಲ. ಅವರ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆದರೆ ಅದಕ್ಕೆ ಅವರು ಕೊಟ್ಟ ಕಾರಣ ಮಾತ್ರ ನಗು ತರಿಸುವಂತಿದೆ.

ನಟಿ ರಾಹುಲ್ ಪ್ರೀತ್ ಸಿಂಗ್ ಅವರಿಗೆ ಬಾಲಿವುಡ್​ ಮತ್ತು ಟಾಲಿವುಡ್​ನಲ್ಲಿಯೂ ಯಾಕೋ ಟೈಮ್ ಸರಿ ಇಲ್ಲ. ಅವರ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆದರೆ ಅದಕ್ಕೆ ಅವರು ಕೊಟ್ಟ ಕಾರಣ ಮಾತ್ರ ನಗು ತರಿಸುವಂತಿದೆ.

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯ ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಾಕುಲ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಆದರೇ ಯಾವುದೇ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ.

ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ಸರಣಿ ಸೋಲಿನ ಬಗ್ಗೆ ನಟಿ ರಾಕುಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ ಬಾಲಿವುಡ್‌ಗೆ ಹಾರುತ್ತಿದ್ದಂತೆ ರಾಕುಲ್ ಸಿನಿಮಾಗಳು ನೆಲಕಚ್ಚಿವೆ.

ಹಿಂದಿಯಲ್ಲಿ ರಾಕುಲ್ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬಂದರೂ ಬಾಕ್ಸ್ ಆಫೀಸ್ ನಲ್ಲಿ ರಾಕುಲ್ ಸಿನಿಮಾಗಳು ಕಮಾಯಿ ಮಾಡಲು ವಿಫಲವಾಗಿವೆ.

ರಾಕುಲ್ ಪ್ರೀತ್ ಸಿಂಗ್

ಇತ್ತೀಚೆಗಷ್ಟೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕುಲ್ ಪ್ರೀತ್ ಸಿಂಗ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಬಾಕ್ಸ್ ಆಫೀಸ್ ಸಂಖ್ಯೆ ಎಷ್ಟು ಪ್ರಮುಖವಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಕುಲ್ ಜನರ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಹಣವಿಲ್ಲದ ಕಾರಣ ಜನರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಪ್ರತಿವಾರ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕೆಲವೊಮ್ಮೆ ಎರಡು ಚಿತ್ರಗಳು ಬಿಡುಗಡೆಯಾಗುತ್ತವೆ. ಪ್ರತಿ ಚಿತ್ರಕ್ಕೂ ಪ್ರೇಕ್ಷಕರು ಬಂದು ನೋಡುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಇದು ದುಬಾರಿ ವಿಚಾರ’ಎಂದು ಹೇಳಿದರು. ಇದು ಕೇವಲ ಒಂದು ಅಂಶ ಅಷ್ಟೇ ಎಂದಿರುವ ರಾಕುಲ್ ಪ್ರೀತ್ ಪ್ರೇಕ್ಷಕರು ನಿಮ್ಮ ಚಿತ್ರವನ್ನು ನೋಡಿಲ್ಲ ಎಂದರೆ ಅದು ಕೆಟ್ಟ ಸಿನಿಮಾ ಎಂದು ಅರ್ಥವಲ್ಲ, ಆದರೆ ಚಲನಚಿತ್ರ ವೀಕ್ಷಣೆ ದುಬಾರಿ ವ್ಯವಹಾರವಾಗಿರುವುದರಿಂದ ಆಗಿರಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್