ಹೊಸ ಚಿತ್ರದಲ್ಲಿ ಶಿವಣ್ಣ ಮತ್ತು ಗಣೇಶ್ 
ಸಿನಿಮಾ ಸುದ್ದಿ

ಸೂರಪ್ಪ ಬಾಬು ನಿರ್ಮಾಣದ ಹೊಸ ಸಿನಿಮಾದಲ್ಲಿ ಶಿವಣ್ಣ-ಗಣೇಶ್; ನಿರ್ದೇಶಕ ಕೆ.ಎಸ್ ರವಿಕುಮಾರ್ ಆ್ಯಕ್ಷನ್ ಕಟ್!

ಕನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸದ್ದಿಲ್ಲದೇ ರೂಪುಗೊಳ್ಳುತ್ತಿದೆ. ಶಿವರಾಜ್ ಕುಮಾರ್ ಮತ್ತು ಗಣೇಶ್  ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ. 'ಕೋಟಿಗೊಬ್ಬ 3' ಸಿನಿಮಾ ಬಳಿಕ ಸೂರಪ್ಪ ಬಾಬು ಮತ್ತೆ ಹೊಸ ಸಿನಿಮಾಗಾಗಿ ಕೈ ಹಾಕಿದ್ದಾರೆ.

ಕನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸದ್ದಿಲ್ಲದೇ ರೂಪುಗೊಳ್ಳುತ್ತಿದೆ. ಶಿವರಾಜ್ ಕುಮಾರ್ ಮತ್ತು ಗಣೇಶ್  ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ. 'ಕೋಟಿಗೊಬ್ಬ 3' ಸಿನಿಮಾ ಬಳಿಕ ಸೂರಪ್ಪ ಬಾಬು ಮತ್ತೆ ಹೊಸ ಸಿನಿಮಾಗಾಗಿ ಕೈ ಹಾಕಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬು ಹೊಸ ಸಿನಿಮಾದ ಬಗ್ಗೆ ಕೆಲವು ದಿನಗಳಿಂದ ಸುದ್ದಿ ಓಡಾಡುತ್ತಲೇ ಇತ್ತು. ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಮಾಡೋಕೆ ಮುಂದಾಗಿದ್ದಾರೆ. ಶಿವಣ್ಣ ಹಾಗೂ ಗಣೇಶ್ ಇಬ್ಬರೂ ಒಪ್ಪಿದ್ದಾರಂತೆ ಅನ್ನೋ ಸುದ್ದಿಯೀಗ ಪಕ್ಕಾ ಆಗಿದೆ.

ತಮಿಳಿನ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇವರು ಶಿವರಾಜ್‌ಕುಮಾರ್‌ ಹಾಗೂ ಗಣೇಶ್‌ ಜೊತೆಯಾಗಿ ನಟಿಸುತ್ತಿರುವ ಸಿನಿಮಾಗೆ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ.

ಸೂರಪ್ಪ ಬಾಬು ಈ ಹಿಂದೆ ಕೆಎಸ್ ರವಿಕುಮಾರ್ ಜೊತೆ ಕೋಟಿಗೊಬ್ಬ 2 ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಎರಡನೇ  ಪ್ರಾಜೆಕ್ಟ್. ಇದು ಶಿವರಾಜಕುಮಾರ್ ಅವರೊಂದಿಗೆ ನಿರ್ಮಾಪಕರ ಎರಡನೇ ಸಿನಿಮಾ ಇದಾಗಿದೆ, ಆದರೆ ಗಣೇಶ್ ಜೊತೆ ಇದು ಮೊದಲನೆಯ ಸಿನಿಮಾವಾಗಿದೆ.

ಇಬ್ಬರು ಸ್ಟಾರ್‌ಗಳನ್ನು ಒಳಗೊಂಡಿರುವ ಪ್ರಾಜೆಕ್ಟ್  ನಿರ್ಮಾಣ ಮಾಡಲು  ನನಗೆ ಸಂತೋಷವಾಗಿದೆ, ಹಿರಿಯ ನಿರ್ದೇಶಕರು ನಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದಲ್ಲಿಯೇ ಬರಲಿದೆ ಎಂದು  ಸೂರಪ್ಪ ಬಾಬು ಹೇಳುತ್ತಾರೆ.

ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಚಿತ್ರವು ಇನ್ನೂ ಪ್ರಾಥಮಿಕ ಹಂತದಲ್ಲಿದೆ, ಇಬ್ಬರು ನಟರು ತಮ್ಮ ಪ್ರಸ್ತುತ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ ನಂತರ ಜೂನ್‌ನಲ್ಲಿ ಶೂಟಿಂಗ್ ಆರಂಭವಾಗಲಿದೆ.  ಚಿತ್ರದ ಮುಹೂರ್ತದ ದಿನಾಂಕದಂದು ತಾರಾಗಣ ಮತ್ತು ಉಳಿದ ವಿವರಗಳನ್ನು ಬಹಿರಂಗ ಪಡಿಸಲಾಗುವುದು.

ಶಿವರಾಜ್‌ಕುಮಾರ್, ತಮಿಳಿನಲ್ಲಿ ರಜನಿಕಾಂತ್ ಅಭಿನಯದ ಜೈಲರ್ ಮತ್ತು ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಅವರ ಎರಡು ಯೋಜನೆಗಳ ಹೊರತಾಗಿ, ಶ್ರೀನಿ ಅವರ ಘೋಸ್ಟ್ ಮತ್ತು ಯೋಗರಾಜ್ ಭಟ್ ಅವರ ಕರಟಕ ಧಮನಕದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಾಲಿನಲ್ಲಿ ಅರ್ಜುನ್ ಜನ್ಯ ಅವರ ಸಿನಿಮಾ ಕೂಡ ಇದೆ.

ಇನ್ನೊಂದೆಡೆ ಗಣೇಶ್ ಬಾನದಾರಿಯಲ್ಲಿ ಬಿಡುಗಡೆಗೆ ಕಾಯುತ್ತಿದ್ದಾರೆ. ನಟ ಚೇತನ್ ಕುಮಾರ್ ಜೊತೆ ಕೈಜೋಡಿಸುವ ಬಗ್ಗೆಯೂ ಸುದ್ದಿಯಿದೆ. ಇದು ಇನ್ನೂ ಅಧಿಕೃತವಾಗಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT