ರಾಮ್ ಚರಣ್ 
ಸಿನಿಮಾ ಸುದ್ದಿ

ಸಾವರ್ಕರ್ ಜನ್ಮ ದಿನದಂದೇ ರಾಮ್ ಚರಣ್ ಚೊಚ್ಚಲ ನಿರ್ಮಾಣದ 'ದಿ ಇಂಡಿಯಾ ಹೌಸ್' ಸಿನಿಮಾ ಘೋಷಣೆ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ವಿ ಮೆಗಾ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಮೆಗಾ ಸ್ಟಾರ್ ಕುಡಿಗೆ ಗೆಳೆಯ ಯುವಿ ಕ್ರಿಯೇಷನ್ ವಿಕ್ರಮ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ.

ಗ್ಲೋಬಲ್ ಸ್ಟಾರ್ ರಾಮ್ ಚರಣ್ ವಿ ಮೆಗಾ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಮೆಗಾ ಸ್ಟಾರ್ ಕುಡಿಗೆ ಗೆಳೆಯ ಯುವಿ ಕ್ರಿಯೇಷನ್ ವಿಕ್ರಮ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡಲಿದೆಂದು ಪ್ರಾರಂಭಿಸಿರುವ ವಿ ಮೆಗಾ ಪಿಕ್ಚರ್ಸ್ ಜೊತೆ ಅಭಿಷೇಕ್ ಅಗರ್ ವಾಲ್ ಕೈ ಜೋಡಿಸಿದ್ದಾರೆ.

ದಿ ಕಾಶ್ಮೀರಿ ಫೈಲ್ಸ್, ಕಾರ್ತಿಕೇಯ ಸಿನಿಮಾದಂತಹ ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ಕೊಟ್ಟಿರುವ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ಹಾಗೂ ರಾಮ್ ಚರಣ್ ಸಾರಥ್ಯದ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿವೆ.

ಈ ಎರಡು ಸಂಸ್ಥೆಗಳ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಕುತೂಹಲಕ್ಕೀಗ ತೆರೆ ಬಿದ್ದಿದೆ. ವಿ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ನ ಚೊಚ್ಚಲ ಸಿನಿಮಾ ವೀರ ಸಾವರ್ಕರ್ 140ನೇ ಜನ್ಮೋತ್ಸವದ ಶುಭ ಸಂದರ್ಭದಲ್ಲಿ ಘೋಷಣೆ ಮಾಡಲಾಗಿದೆ. ಪವರ ಪ್ಯಾಕ್ಡ್ ವಿಡಿಯೋ ಮೂಲಕ ರಾಮ್ ತಮ್ಮ ನಿರ್ಮಾಣದ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ವಿ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ಜಂಟಿಯಾಗಿ ದಿ ಇಂಡಿಯನ್ ಹೌಸ್ ಎಂಬ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕೇಯ, ಕಾರ್ತಿಕೇಯ-೨ ನಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳ ಡೈನಾಮಿಕ್ ಹೀರೋ ನಿಖಿಲ್ ಸಿದ್ದಾರ್ಥ್ ನಾಯಕನಾಗಿ ದಿ ಇಂಡಿಯನ್ ಹೌಸ್ ನಲ್ಲಿ ಬಣ್ಣ ಹಚ್ಚಿದ್ದು, ಬಾಲಿವುಡ್ ದಂತಕಥೆ ಅನುಪಮ್ ಕೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿ ಇಂಡಿಯಾ ಹೌಸ್‌ಗೆ ಕ್ಯಾಮೆರಾನ್ ಬ್ರೈಸನ್ ಅವರ ಛಾಯಾಗ್ರಹಣವಿದೆ. ಉಳಿದ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯ ವಿವರಗಳನ್ನು ನಿರ್ದೇಶಕರು ಇನ್ನೂ ಬಹಿರಂಗಪಡಿಸಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ