ಸಿನಿಮಾ ಸುದ್ದಿ

ಹಸೆಮಣೆ ಏರಲು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಜ್ಜು: ತಮ್ಮ ಬಹುಕಾಲದ ಗೆಳತಿ ಜೊತೆ ವಿವಾಹ!

Shilpa D

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್​  ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ತೆ ಅವರು ಹಸೆಮಣೆ ಏರುತ್ತಿದ್ದಾರೆ.

ವಾಸುಕಿ ವೈಭವ್  ಬಹುಕಾಲದ ಗೆಳತಿ ಬೃಂದಾ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವೆಂಬರ್​ 16ರಂದು ವಾಸುಕಿ ವೈಭವ್ ವಿವಾಹ ನೆರವೇರಲಿದೆ.  ಬೃಂದಾ ವಿಕ್ರಮ್  ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಕೇವಲ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಗಳು ನಡೆಯುತ್ತಿವೆ. ಹೆಚ್ಚು ಆಡಂಬರ ಇಲ್ಲದೇ, ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ ಅವರು ಮದುವೆ  ಆಗುತ್ತಿದ್ದಾರೆ.

ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೃಂದಾ ವಿಕ್ರಮ್​ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಶಿಕ್ಷಕಿ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಅವರು ಮಾಧ್ಯಮಗಳ ಎದುರು ಕಾಣಿಸಿಕೊಂಡಿಲ್ಲ. ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಈಗ ಅವರು ಬದುಕಿನ ಪ್ರಮುಖ ಘಟ್ಟಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ವಾಸುಕಿ ವೈಭವ್​ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ.

ಹೊಸ ಪಯಣ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು’ ಎಂದು ವಾಸುಕಿ ವೈಭವ್​ ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ವಾಸುಕಿ ವೈಭವ್​ ಅವರು ಮದುವೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕಳೆದ ವಾರವೇ ವಾಸುಕಿ ವೈಭವ್​ ಅವರ ಕುಟುಂಬದಲ್ಲಿ ಚಪ್ಪರ ಪೂಜೆ ಆರಂಭ ಆಗಿತ್ತು.

SCROLL FOR NEXT