ಬೆಂಗಳೂರು: ಅಂದು ರಾತ್ರಿ ನಾನು ಆ ಅಪಘಾತದಿಂದ ಡಿಸ್ಟರ್ಬ್ ಆಗಿದ್ದೆ. ಅದನ್ನು ಅರಗಿಸಿಕೊಳ್ಳೋಕೆ ಆಗಲಿಲ್ಲ. ನಾನು ಅರ್ ಅರ್ ನಗರದಿಂದ ಕೋಣನಕುಂಟೆಗೆ ಹೋಗುವಾಗ ಅಪಘಾತವಾಗಿತ್ತು. ಕೆಲವರು ಹಿಟ್ ಅಂಡ್ ರನ್ ಅಂತ ಹೇಳಿದ್ದರು. ನಾನು ಎಲ್ಲೂ ಒಡಿಹೋಗಿರಲಿಲ್ಲ. ನಾನೆ ಅವರನ್ನು ಅಸ್ಪತ್ರೆಗೆ ಸೇರಿಸಿದ್ದೆ. ಆಕ್ಸಿಡೆಂಟ್ ಆದ ನಂತರ ನಾನೇ ನನ್ನ ಕಾರಿನ ಬಂಪರ್ ಕಿತ್ತು ಬಿಸಾಕಿದೆ ಎಂದು ಸ್ಯಾಂಡಲ್ ವುಡ್ ನಟ ನಾಗಭೂಷಣ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಟ ನಾಗಭೂಷಣ್ (Nagabhushan) ಅವರ ಕಾರು ಅಪಘಾತಕ್ಕೆ ಒಳಗಾಗಿತ್ತು. ಈ ವೇಳೆ ಮಹಿಳೆ ಮೃತಪಟ್ಟು, ಅವರ ಪತಿ ತೀವ್ರವಾಗಿ ಗಾಯಗೊಂಡಿದ್ದರು. ನಾಗಭೂಷಣ್ ಕಾರು ಕೂಡ ಸಾಕಷ್ಟು ಜಖಂಗೊಂಡಿತ್ತು. ಇತ್ತೀಚೆಗೆ ಅವರ ಕಾರಿನ ಪರಿಶೀಲನೆ ಕೂಡ ಮಾಡಲಾಗಿದೆ. ಈಗ ನಾಗಭೂಷಣ್ ಅವರು ಈ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಮಾನಸಿಕವಾಗಿ ಕುಸಿದಿದ್ದೇನೆ: ಅಪಘಾತಕ್ಕೆ ಒಳಗಾದ ನಂತರ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದೆ. ಪೊಲೀಸರಿಗೆ ನಾನೇ ಮಾಹಿತಿ ನೀಡಿದ್ದೆ. ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟರು. ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ಪ್ರಕ್ರಿಯೆ ಮುಗಿಸಿದರು. ಅವರ ಬಳಿಯವರು ಬಂದ ಬಳಿಕ ನಾನು ಆಲ್ಕೋಹಾಲ್ ಕುಡಿದಿದ್ದೆನೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿದರು. ಬ್ಲಡ್ ಟೆಸ್ಟ್ ಕೂಡ ಮಾಡಲಾಯಿತು. ಅಲ್ಲಿಯೂ ಕುಡಿದಿಲ್ಲ ಎಂದು ವರದಿ ಬಂತು ಎಂದಿದ್ದಾರೆ ನಾಗಭೂಷಣ್.
ಇದನ್ನೂ ಓದಿ: ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ್ ಗೆ ವಿಚಾರಣೆಗೆ ಹಾಜರಾಗಲು ನೊಟೀಸ್, ರಕ್ತ ಪರೀಕ್ಷೆಯಲ್ಲಿ ನೆಗೆಟಿವ್
ನಾನು ಓಡಿ ಹೋಗಿಲ್ಲ. ನನಗೆ ಆ ನೋವು ಗೊತ್ತಿದೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನ ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದೆ. ಅಪಘಾತ ಮಾಡಿದವರು ಯಾರು ಎಂದು ಈಗಲೂ ಗೊತ್ತಿಲ್ಲ. ಇಲ್ಲಿ ಅಟ್ಲೀಸ್ಟ್ ನನಗೆ ಅವಕಾಶ ಇದೆ. ಅವರ ನೋವಲ್ಲಿ ನಾನು ಭಾಗಿ ಆಗುತ್ತಿದ್ದೇನೆ. ಎಲ್ಲರ ನಗಿಸೋಕೆ ನನಗೆ ಇಷ್ಟ. ಬೇರೆಯವರಿಗೆ ದುಃಖ ಕೊಡೋಕೆ ನನಗೆ ಇಷ್ಟವಿಲ್ಲ’ ಎಂದಿದ್ದಾರೆ ನಾಗಭೂಷಣ್.