ಮಾನ್ವಿತಾ ಕಾಮತ್ 
ಸಿನಿಮಾ ಸುದ್ದಿ

ಲೋಹಿತ್ ಹೆಚ್ ನಿರ್ದೇಶನದ 'ಕ್ಯಾಪ್ಚರ್' ಚಿತ್ರತಂಡ ಸೇರಿಕೊಂಡ ಟಗರು ಪುಟ್ಟಿ ಮಾನ್ವಿತಾ ಕಾಮತ್!

ಟಗರು ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟಿ ಮಾನ್ವಿತಾ ಕಾಮತ್ ಕೊನೆಯ ಬಾರಿ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಲೋಹಿತ್ ಹೆಚ್ ನಿರ್ದೇಶನದ 'ಕ್ಯಾಪ್ಚರ್' ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ತೆರೆಹಂಚಿಕೊಳ್ಳಲಿದ್ದಾರೆ. 

ಟಗರು ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟಿ ಮಾನ್ವಿತಾ ಕಾಮತ್ ಕೊನೆಯ ಬಾರಿ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಲೋಹಿತ್ ಹೆಚ್ ನಿರ್ದೇಶನದ 'ಕ್ಯಾಪ್ಚರ್' ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ತೆರೆಹಂಚಿಕೊಳ್ಳಲಿದ್ದಾರೆ. 

ನಟಿ ಪ್ರಿಯಾಂಕಾ ಅವರ ಮಗಳಾಗಿ ಮಹತ್ವದ ಪಾತ್ರದಲ್ಲಿ ಮಾನ್ವಿತಾ ನಟಿಸಲಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಮಾನ್ವಿತ ಹಾರರ್ ಸಿನಿಮಾದ ಭಾಗವಾಗಿದ್ದಾರೆ. 

ಈಗಾಗಲೇ ಗೋವಾದಲ್ಲಿ ಪ್ರಿಯಾಂಕಾ ಅವರ ಜೊತೆಗಿನ ತಮ್ಮ ಭಾಗಗಳನ್ನು ಚಿತ್ರೀಕರಿಸಿರುವ ಮಾನ್ವಿತಾ, 'ಇದು ನನ್ನ ಮೊದಲ ಹಾರರ್ ಚಿತ್ರ. ಆರಂಭದಲ್ಲಿ ಈ ಪ್ರಕಾರದಲ್ಲಿ ಕೆಲಸ ಮಾಡಲು ನಾನು ಹೆದರುತ್ತಿದ್ದೆ. ಆದರೆ, ಚಿತ್ರದಲ್ಲಿನ ಪಾತ್ರ ಆಕರ್ಷಕವಾಗಿರುವುದರಿಂದ ಈ ಪಾತ್ರವನ್ನು ನಾನು ಒಪ್ಪಿಕೊಂಡೆ. ನಾವು ಗೋವಾದಲ್ಲಿ 15 ದಿನಗಳ ಚಿತ್ರೀಕರಣ ಮುಗಿಸಿದ್ದೇವೆ ಮತ್ತು ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ನಟಿಸಿದ್ದು ತುಂಬಾ ಚೆನ್ನಾಗಿತ್ತು' ಎಂದಿದ್ದಾರೆ.

ಕ್ಯಾಪ್ಟರ್ ಸಿನಿಮಾದ ಪೋಸ್ಟರ್

'ಶೂಟಿಂಗ್ ಮಾಡುವಾಗ ಎಲ್ಲವೂ ಚೆನ್ನಾಗಿತ್ತು. ಆದರೆ, ನಾನು ಮನೆಗೆ ಹಿಂದಿರುಗಿದಾಗ ಸ್ವಲ್ಪ ಮಟ್ಟಿಗೆ ಭಯವಾಯಿತು' ಎಂದು ಅವರು ಹೇಳುತ್ತಾರೆ.

ಮಮ್ಮಿ- ಸೇವ್ ಮಿ ಮತ್ತು ದೇವಕಿ ನಂತರ ಪ್ರಿಯಾಂಕಾ ಮತ್ತು ಲೋಹಿತ್ ಎಚ್ ನಡುವಿನ ಮೂರನೇ ಸಿನಿಮಾ ಕ್ಯಾಪ್ಚರ್ ಆಗಿದ್ದು, ನಿರ್ದೇಶಕರೊಂದಿಗೆ ಮಾನ್ವಿತಾ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ.

ಇಡೀ ಸಿನಿಮಾವನ್ನು ಸಿಸಿಟಿವಿಯ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದೆ ಎಂಬುದು ಚಿತ್ರದ ವಿಶೇಷವಾಗಿದ್ದು, ಇದು ಸಾಕಷ್ಟು ಕುತೂಹಲವನ್ನು ಉಂಟುಮಾಡುತ್ತದೆ. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲನೆಯದು.

ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ರವಿರಾಜ್ ಅವರು ಕ್ಯಾಪ್ಚರ್ ಅನ್ನು ನಿರ್ಮಿಸಿದ್ದಾರೆ. ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ