ನಟ ತಿಲಕ್ 
ಸಿನಿಮಾ ಸುದ್ದಿ

ಪ್ರತಿಯೊಬ್ಬ ನಟನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಬೇಕು ಮತ್ತು ಹೊಸ ದೃಷ್ಟಿಕೋನ ನೀಡಬೇಕು: ತಿಲಕ್

ವಿಭಿನ್ನ ಪಾತ್ರಗಳಲ್ಲಿ ನಟಿಸಿಕೊಂಡು ಬಂದಿರುವ ನಟ ತಿಲಕ್ ಶೇಖರ್ ಪ್ರತಿ ಚಿತ್ರದಲ್ಲಿ ಬದಲಾವಣೆಯನ್ನು ಇಷ್ಟಪಡುತ್ತಾರೆ. ಚಿತ್ರದ ಸೆಟ್ ನಲ್ಲಿ ಕಳೆಯುವುದೆಂದರೆ ಅವರಿಗೆ ಖುಷಿಯಂತೆ.

ವಿಭಿನ್ನ ಪಾತ್ರಗಳಲ್ಲಿ ನಟಿಸಿಕೊಂಡು ಬಂದಿರುವ ನಟ ತಿಲಕ್ ಶೇಖರ್ ಪ್ರತಿ ಚಿತ್ರದಲ್ಲಿ ಬದಲಾವಣೆಯನ್ನು ಇಷ್ಟಪಡುತ್ತಾರೆ. ಚಿತ್ರದ ಸೆಟ್ ನಲ್ಲಿ ಕಳೆಯುವುದೆಂದರೆ ಅವರಿಗೆ ಖುಷಿಯಂತೆ.

ನಟನೆ ನನ್ನ ನಿಜವಾದ ಕ್ಷೇತ್ರ, ವೃತ್ತಿಬದುಕು ಎಂದು ಬಹಳ ಬೇಗ ಅರಿತುಕೊಂಡ ತಿಲಕ್ ಸಿನಿಮಾದಲ್ಲಿನ ಅವರ ಪಯಣವು ಕಾಲ್ಪನಿಕ ಕಥೆಗಿಂತ ಬಹಳ ದೂರವಂತೆ. ಸಿನಿಮಾದಲ್ಲಿ ಬೆಳವಣಿಗೆ ಕಾಣಲು ಕಠಿಣ ಪರಿಶ್ರಮ, ತಾಳ್ಮೆ ಮತ್ತು ಬಹಳ ಮುಖ್ಯ ”ಎಂದು 60 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ತಿಲಕ್ ಗೆ ಚೆನ್ನಾಗಿ ಮನದಟ್ಟಾಗಿದೆ. ಪ್ರಶಾಂತ್ ನೀಲ್ ಅವರ ಉಗ್ರಂನಲ್ಲಿ ವಿಲನ್ ಪಾತ್ರ ಮಾಡಿ ಹೆಸರು ಗಳಿಸಿದ್ದರು. 

ತಿಲಕ್ ಅವರ ಇತ್ತೀಚಿನ ಕೊನೆಯ ಚಿತ್ರಗಳೆಂದರೆ ಇರುವುದುದೆಲ್ಲವ ಬಿಟ್ಟು ಮತ್ತು ರತ್ನನ್ ಪ್ರಪಂಚ. ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಚಿತ್ರದಲ್ಲಿ ಅತಿಥಿ ಪಾತ್ರ. ಸ್ವಲ್ಪ ವಿರಾಮ ನಂತರ ಈಗ ಅವರ ಮುಂದಿನ ಚಿತ್ರ ದ್ವಂದ್ವ ಬಿಡುಗಡೆಗೆ ಕಾಯುತ್ತಿದ್ದು, ಇದು ಈ ವಾರ ಬಿಡುಗಡೆಯಾಗಲಿದೆ.

ದ್ವಂದದಲ್ಲಿ ನಾಯಕನಾಗಿ ನಟಿಸಿರುವ ತಿಲಕ್, ದ್ವಂದ್ವ ಪರಿಕಲ್ಪನೆಯಿಂದ ದ್ವಂದ್ವ ತನ್ನ ಹೆಸರನ್ನು ಪಡೆದುಕೊಂಡಿದೆ, ಅಲ್ಲಿ ಚಿತ್ರದ ಪ್ರತಿಯೊಂದು ಪಾತ್ರವು ಪ್ರೇಕ್ಷಕರ ದೃಷ್ಟಿಕೋನವನ್ನು ಅವಲಂಬಿಸಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳನ್ನು ಹೊಂದಿರುತ್ತದೆ. ಇದೊಂದು ಪೊಲಿಟಿಕಲ್ ಡ್ರಾಮಾ, ವೈಜ್ಞಾನಿಕ ಕಾದಂಬರಿ ಮತ್ತು ಥ್ರಿಲ್ಲರ್ ಆಗಿದೆ. 

ಕಾಮನ್‌ಮ್ಯಾನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಮಹೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಸಿಯಾ ಫಿರ್ದೋಸ್, ನಯನಾ ಶೋಬ್ರಾಜ್, ದಿನೇಶ್ ಮತ್ತು ಬಾಲ ರಾಜವಾಡಿ ಮಹತ್ವದ ಪಾತ್ರಗಳಲ್ಲಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ವಹಿಸುತ್ತಿದ್ದು, ರಿಷಿಕೇಶ್ ಛಾಯಾಗ್ರಹಣವನ್ನು ವಹಿಸಿಕೊಂಡಿದ್ದಾರೆ.

ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ನಿರ್ದೇಶಕ ಭರತ್ ಎಲ್ ಅವರ ಕೆಲಸವನ್ನು ತಿಲಕ್ ಹೊಗಳುತ್ತಾರೆ. “ಕಾರ್ಪೊರೇಟ್ ಹಿನ್ನೆಲೆಯಿಂದ ಬಂದಿರುವ ಭರತ್, ತಮ್ಮ ಮೊದಲ ಚಿತ್ರದಲ್ಲೇ ಚಲನಚಿತ್ರ ನಿರ್ಮಾಣಕ್ಕೆ ಹೊಸ ದೃಷ್ಟಿಕೋನವನ್ನು ಪರಿಚಯಿಸಿದ್ದಾರೆ. ದ್ವಂದ್ವ ಅವರೊಂದಿಗೆ, ಅವರು ಹೈಪರ್ಥೈಮೆಸಿಯಾ ಪರಿಕಲ್ಪನೆಯನ್ನು ಪರಿಶೋಧಿಸುತ್ತಾರೆ.

ಇದರಲ್ಲಿ ನನ್ನ ಪಾತ್ರ ನ್ಯೂರೋಸರ್ಜನ್. ಇಲ್ಲಿ ಚಿಕಿತ್ಸೆಗೆ ಬಂದ ವ್ಯಕ್ತಿಯನ್ನು ಕಾಪಾಡುವಲ್ಲಿ ನಾನು ಯಶಸ್ವಿಯಾಗಿದ್ದೇನೆಯೇ ಎಂಬುದು ಚಿತ್ರದ ತಿರುಳು' ಎಂದು ತಿಲಕ್ ವಿವರಿಸುತ್ತಾರೆ. “ದ್ವಂದ್ವದಲ್ಲಿ ಭರತ್ ಅವರಂತಹ ಹೊಸಬರೊಂದಿಗೆ ಕೆಲಸ ಮಾಡುವುದು ಉತ್ತಮ ಅನುಭವ. ನಿರ್ದೇಶಕರ ಆತ್ಮವಿಶ್ವಾಸವನ್ನು ನಾನು ತುಂಬಾ ಮೆಚ್ಚಿದೆ. ನಟರಾಗಿ, ನಾವು ವಿಭಿನ್ನ ಪ್ರಕಾರಗಳನ್ನು ಅನ್ವೇಷಿಸಬೇಕು. ಹೊಸ ದೃಷ್ಟಿಕೋನಗಳನ್ನು ನೀಡಬೇಕು ಎಂದು ನಾನು ನಂಬುತ್ತೇನೆ. ಅಂತಿಮವಾಗಿ, ಅಂತಿಮ ತೀರ್ಪು ನೀಡುವುದು ಪ್ರೇಕ್ಷಕರಿಗೆ ಬಿಟ್ಟದ್ದು, ಎನ್ನುತ್ತಾರೆ ತಿಲಕ್. 

ತಿಲಕ್ ಅವರು ನಟನಾಗಿ ನಿರಂತರವಾಗಿ ತಮ್ಮನ್ನು ತಾವು ಸವಾಲಿಗೆ ಒಡ್ಡಿಕೊಳ್ಳುವುದನ್ನು ಪಾತ್ರಗಳ ವೈವಿಧ್ಯತೆ, ತೂಕಕ್ಕೆ ಇಷ್ಟಪಡುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT