ಜಗ್ಗೇಶ್ 
ಸಿನಿಮಾ ಸುದ್ದಿ

ತೋತಾಪುರಿ-2 ರಲ್ಲಿ ನಿಜವಾದ ಕಥೆ ಅಡಗಿದೆ, ಹೆಚ್ಚು ಕಾಮಿಡಿಯಿದೆ: ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಅಭಿನಯನದ ‘ತೋತಾಪುರಿ 2’ ಚಿತ್ರ ಸೆಪ್ಟೆಂಬರ್ 28 ರಂದು ತೆರೆಗೆ ಬರುತ್ತಿದ್ದು, ಇದು ಕಳೆದ ವರ್ಷ ಬಿಡುಗಡೆಯಾದ ‘ತೋತಾಪುರಿ’ ಚಿತ್ರದ ಮುಂದುವರೆದ ಭಾಗ.

ನವರಸ ನಾಯಕ ಜಗ್ಗೇಶ್ ಅಭಿನಯನದ ‘ತೋತಾಪುರಿ 2’ ಚಿತ್ರ ಸೆಪ್ಟೆಂಬರ್ 28 ರಂದು ತೆರೆಗೆ ಬರುತ್ತಿದ್ದು, ಇದು ಕಳೆದ ವರ್ಷ ಬಿಡುಗಡೆಯಾದ ‘ತೋತಾಪುರಿ’ ಚಿತ್ರದ ಮುಂದುವರೆದ ಭಾಗ.

‘ತೋತಾಪುರಿ 2’ಚಿತ್ರದ ಬಗ್ಗೆ ಮಾತನಾಡಿರುವ ನಟ ಜಗ್ಗೇಶ್ ಅವರು, ಎರಡನೇ ಭಾಗದಲ್ಲಿ ಇನ್ನೂ ಹೆಚ್ಚು ಕಾಮಿಡಿಯಿದೆ. ಮೊದಲ ಚಿತ್ರದಲ್ಲಿ ಪಾತ್ರಗಳ ಪರಿಚಯಷ್ಟೇ ಆಗಿದೆ. ಈಗ ಎರಡನೇ ಭಾಗದಲ್ಲಿ ನಿಜವಾದ ಕಥೆ ಮುಂದುವರಿಯುತ್ತದೆ. ಇಂತಹ ಕಥೆಗಳನ್ನು ಗಂಭೀರವಾಗಿ ಹೇಳಲಾಗುವುದಿಲ್ಲ. ಹೀಗಾಗಿಯೇ ನಿರ್ದೇಶಕರು ಈರೇಗೌಡ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.

ಹಾಸ್ಯವನ್ನು ಬಹುಪಾಲು ಜನ ಇಷ್ಟಪಡುತ್ತಾರೆ. ಹಾಸ್ಯವನ್ನು ಆನಂದಿಸುವ ಶೇ.85 ರಷ್ಟು ಪ್ರೇಕ್ಷಕರು ಇರುವುದರಿಂದ ನಾನು ಚಿತ್ರೋದ್ಯಮದಲ್ಲಿ ಉಳಿದಿದ್ದೇನೆ. ಸಾಂದರ್ಭಿಕ ಮತ್ತು ಸಾಮಾಜಿಕ ಸಂದೇಶ ಆಧಾರಿತ ಹಾಸ್ಯ ಎರಡರಲ್ಲೂ ಪ್ರೇಕ್ಷಕರನ್ನು ರಂಜಿಸಲು ನಾನು ಶ್ರಮಿಸುತ್ತೇನೆ ಎಂದು ಜಗ್ಗೇಶ್ ಹೇಳಿದ್ದಾರೆ.

ಜಗ್ಗೇಶ್ ಅಭಿನಯದ ತೋತಾಪುರಿ ಅಧ್ಯಾಯ 2 ಈ ವಾರ ತೆರೆಗೆ ಬರುತ್ತಿದೆ. ಚಿತ್ರಕ್ಕೆ ವಿಜಯ ಪ್ರಸಾದ್ ನಿರ್ದೇಶನ ಮಾಡಿದ್ದು, ಕೆ ಎ ಸುರೇಶ್ ನಿರ್ಮಾಣ, ಅನೂಪ್ ಸೀಳಿನ್ ಸಂಗೀತವಿದೆ. ರೊಮ್ಯಾಂಟಿಕ್ ಕಾಮಿಡಿ-ಡ್ರಾಮಾದ ಮೊದಲ ಭಾಗವು 2022 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ, ಮತ್ತು ಸುಮನ್ ರಂಗನಾಥ್, ಜೊತೆಗೆ ವೀಣಾ ಸುಂದರ್ ಮತ್ತು ಹೇಮಾ ದತ್ತಾ ಇದ್ದಾರೆ.

ಜಗ್ಗೇಶ್ ಪ್ರಕಾರ, ತೋತಾಪುರಿ ಚಾಪ್ಟರ್ 1 ಟೈಲರ್ ಜೀವನ, ಅವನ ಹೋರಾಟಗಳು ಮತ್ತು ಅವನು ಹೇಗೆ ಮೇಲೇರುತ್ತಾನೆ ಸೇರಿದಂತೆ ಅನೇಕ ಪಾತ್ರಗಳನ್ನು ಅನನ್ಯವಾಗಿ ಪರಿಚಯಿಸಿದೆ. ನಾನ್ ವೆಜ್ ರೆಸ್ಟೋರೆಂಟ್ ನಡೆಸುತ್ತಿರುವ ವ್ಯಕ್ತಿ ಧನಂಜಯ್ ಅವರ ಪರಿಚಯದೊಂದಿಗೆ ಚಿತ್ರ ಮುಕ್ತಾಯಗೊಳ್ಳುತ್ತದೆ. ಆದರೆ ತೋತಾಪುರಿ-2 ಚಿತ್ರದಲ್ಲಿ ನಿಜವಾದ ಕಥೆ ಅಡಗಿದೆ ಮತ್ತು ಎರಡನೇ ಭಾಗದಲ್ಲಿ ಇನ್ನೂ ಹೆಚ್ಚು ಕಾಮಿಡಿಯಿದೆ" ಎಂದು ಜಗ್ಗೇಶ್ ಬಹಿರಂಗಪಡಿಸಿದ್ದಾರೆ.

ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹಿರಿಯ ವ್ಯಕ್ತಿಯೊಬ್ಬರು, ಯಾವಾಗಲೂ ನನ್ನ ಚಲನಚಿತ್ರಗಳನ್ನು ನೋಡಿ ಆನಂದಿಸುವುದಾಗಿ ಹೇಳಿದರು. ನಂತರ ಅವರು ತಮ್ಮನ್ನು ತಾವು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಂದು ಪರಿಚಯಿಸಿಕೊಂಡರು. ವಿದ್ಯಾವಂತ ಪ್ರೇಕ್ಷಕರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ನನ್ನ ಸಿನಿಮಾಗಳನ್ನು ನೋಡಿ ಆನಂದಿಸುತ್ತಾರೆ. ನನ್ನ ಕೆಲಸವನ್ನು ಪ್ರಶಂಸಿಸುವ ಜಾಗತಿಕ ಪ್ರೇಕ್ಷಕರಿಗೆ ನಾನು ಕೃತಜ್ಞನಾಗಿದ್ದೇನೆ. ಅದೇ ಸಮಯದಲ್ಲಿ, ಹೊಸ ಪ್ರೇಕ್ಷಕರು ನನ್ನ ಚಿತ್ರಗಳನ್ನು ಇಷ್ಟಪಟ್ಟಾಗ, ಅದು ವಿಷಯಗಳನ್ನು ಇನ್ನಷ್ಟು ಸುಂದರಗೊಳಿಸುತ್ತದೆ” ಎಂದು ಜಗ್ಗೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT