ಮಾರಕಾಸ್ತ್ರ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಮಾಲಾಶ್ರೀ ನಟನೆಯ 'ಮಾರಕಾಸ್ತ್ರ' ತೆಲುಗು ಆವೃತ್ತಿ 'ಮರಣಾಯುಧಂ' ಈ ವಾರ ಬಿಡುಗಡೆ!

ಮಾಲಾಶ್ರೀ ಮುಖ್ಯಭೂಮಿಕೆಯ 'ಮಾರಕಾಸ್ತ್ರ' ಚಿತ್ರ ಕಳೆದ ವರ್ಷ ತೆರೆಕಂಡು ಕನ್ನಡಿಗರ ಮನ ಗೆದ್ದಿತ್ತು. ಇದೀಗ ಇದೇ ಚಿತ್ರ ತೆಲುಗಿನಲ್ಲೂ ನಿರ್ಮಾಣ ಆಗಿದ್ದು, 'ಮರಣಾಯುಧಂ' ಎಂದು ಶೀರ್ಷಿಕೆ ಇಡಲಾಗಿದೆ.

ಮಾಲಾಶ್ರೀ ಮುಖ್ಯಭೂಮಿಕೆಯ 'ಮಾರಕಾಸ್ತ್ರ' ಚಿತ್ರ ಕಳೆದ ವರ್ಷ ತೆರೆಕಂಡು ಕನ್ನಡಿಗರ ಮನ ಗೆದ್ದಿತ್ತು. ಇದೀಗ ಇದೇ ಚಿತ್ರ ತೆಲುಗಿನಲ್ಲೂ ನಿರ್ಮಾಣ ಆಗಿದ್ದು, 'ಮರಣಾಯುಧಂ' ಎಂದು ಶೀರ್ಷಿಕೆ ಇಡಲಾಗಿದೆ.

ಗುರುಮೂರ್ತಿ ಸುನಾಮಿ ನಿರ್ದೇಶನದ ಮತ್ತು ಕೋಮಲಾ ನಟರಾಜ ನಿರ್ಮಿಸಿದ ಮಾಲಾಶ್ರೀ ಅವರ ಆ್ಯಕ್ಷನ್ ಸಿನಿಮಾ 'ಮಾರಕಾಸ್ತ್ರ' ಕಳೆದ ವರ್ಷ ಬಿಡುಗಡೆಯಾಯಿತು, ಆದರೆ ಗಲ್ಲಾಪೆಟ್ಟಿಗೆಯಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ನಿರ್ದೇಶಕರು ಇದನ್ನು ತೆಲುಗಿನಲ್ಲಿ 'ಮರಣಾಯುಧಂ' ಎಂದು ಡಬ್ ಮಾಡಿ ಏಪ್ರಿಲ್ 19 ರಂದು ಬಿಡುಗಡೆ ಮಾಡಿದ್ದಾರೆ. ಸುಮಾರು 26 ನಿಮಿಷಗಳ ದೃಶ್ಯಗಳಿಗೆ ಕತ್ತರಿ ಹಾಕಿದ ನಂತರ, ಚಿತ್ರವು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆರೆ ಕಂಡಿದೆ.

ಎಡಿಟ್ ಮಾಡಿದ ಕನ್ನಡ ಆವೃತ್ತಿಯನ್ನು ಏಪ್ರಿಲ್ 26 ರಂದು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮಾಲಾಶ್ರೀ ಜೊತೆಗೆ ಚಿತ್ರದಲ್ಲಿ ಆನಂದ್ ಆರ್ಯ, ಹರ್ಷಿಕಾ ಪೂಣಚ್ಚ, 'ಉಗ್ರಂ' ಮಂಜು, ನಟರಾಜ್, ಅಯ್ಯಪ್ಪ ಪಿ ಶರ್ಮಾ ಮುಂತಾದವರು ನಟಿಸಿದ್ದಾರೆ.

ಮಾರಕಾಸ್ತ್ರ ಚಿತ್ರವನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದೆವು. ಆ ಸಮಯದಲ್ಲಿ ಭಾರತ-ಪಾಕ್ ಮ್ಯಾಚ್, ಹಬ್ಬಗಳು ಬಂದವು. ಹಾಗಾಗಿ ಹೆಚ್ಚಿನ ವೀಕ್ಷಕರಿಗೆ ನಮ್ಮ ಸಿನಿಮಾ‌ ನೋಡಲು ಆಗಲಿಲ್ಲ. ಆದರೆ ಚಿತ್ರ ನೋಡಿದ ತೆಲುಗು ವಿತರಕರಾದ ವೆಂಕಟೇಶ್ ರಾವ್ ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿ ಎಂದರು. ಮಾರಕಾಸ್ತ್ರ ಈಗ ಮಾರಣಾಯುಧಂ ಎಂಬ ಹೆಸರಿನಿಂದ ಇದೇ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಇದೇ ಶನಿವಾರ 27ರಂದು ಪೌರ ಕಾರ್ಮಿಕರು ಸೇರಿದಂತೆ ಅನೇಕ ಶ್ರಮಿಕ ವರ್ಗದವರಿಗೆ ಒಂದು ಉಚಿತ ಪ್ರದರ್ಶನದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಆರಂಭದಲ್ಲಿ ಸಿನಿಮಾ ಮಾಡಲು ಮಾಲಾಶ್ರೀ ಹಿಂಜರಿದರು. ಅಂತಿಮವಾಗಿ ಸಿನಿಮಾ ಮಾಡಲು ಒಪ್ಪಿಕೊಂಡರು, ನಿರ್ದೇಶಕರ ಉತ್ಸಾಹವನ್ನು ಹೊಗಳಿದ ಅವರು ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT