ಮಾಸ್ತಿ  
ಸಿನಿಮಾ ಸುದ್ದಿ

ಮಾಸ್‌-ಕ್ಲಾಸ್‌ 2 ಕೆಟಗರಿಯ ಸಿನಿಮಾಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲು: ಸಂಭಾಷಣೆ ಬರಹಗಾರ ಮಾಸ್ತಿ

ಪ್ರತಿ ಚಿತ್ರದಿಂದ ಕಲಿಯುವ ಮತ್ತು ತನ್ನ ಸುತ್ತಲಿನವರಿಗೆ ಕಲಿಸುವ ವಿಶಿಷ್ಟ ಸಾಮರ್ಥ್ಯ ಅವರಲ್ಲಿದೆ. ಸಂಭಾಷಣೆಗಳು ಸಹಜ ಮತ್ತು ವಾಸ್ತವಿಕವಾಗಿವೆ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ಅವರ ಪ್ರತಿಭೆ ಅಡಗಿದೆ.

ಟಗರು, ಸಲಗ ಮತ್ತು ಇತ್ತೀಚಿನ ಕಾಟೇರ ಚಿತ್ರಗಳಲ್ಲಿ ತಮ್ಮ ತೀಕ್ಷ್ಣವಾದ ಮತ್ತು ಪ್ರಭಾವಶಾಲಿ ಸಂಭಾಷಣೆ ಬರೆಯುವ ಮೂಲಕ ಹೆಸರುವಾಸಿಯಾಗಿರುವ ಮಾಸ್ತಿ ಅವರು ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ಸಂಭಾಷಣೆ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಈ ಬಗ್ಗೆ ಕೇಳಿದರೇ ಅವರು ನಮ್ರತೆಯಿಂದಲೇ ಉತ್ತರಿಸುತ್ತಾರೆ.

ಸಂಭಾಷಣೆ ಬರಹಗಾರರಿಗೆ ಬೇಡಿಕೆ ಖಂಡಿತವಾಗಿಯೂ ಇದೆ, ಮತ್ತು ಅದರೊಂದಿಗೆ ಒಂದು ನಿರ್ದಿಷ್ಟ ಮಟ್ಟದ ಒತ್ತಡವೂ ಇರುತ್ತದೆ. ನನ್ನ ಸಂಭಾಷಣೆಗಳಿಗಾಗಿ ನಿರ್ದೇಶಕರು ಮತ್ತು ಪ್ರೇಕ್ಷಕರ ಪ್ರೀತಿಯನ್ನು ಗಳಿಸಲು ನಾನು ಶ್ರಮಿಸಿದ್ದೇನೆ. ಹಾಗೂ ಪ್ರತಿ ಚಿತ್ರದಲ್ಲೂ ಅದೇ ರೀತಿಯ ಗುಣಮಟ್ಟ ಕಾಪಾಡಿಕೊಳ್ಳುವುದು ಸವಾಲು ಎಂದಿದ್ದಾರೆ.

ಸದ್ಯ ಮಾಸ್ತಿ ಸಂಭಾಷಣೆ ಬರೆದಿರುವ ಭೀಮ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈ ಸಿನಿಮಾ ತೀರಾ ಭಿನ್ನವಾಗಿದ್ದು ಕನ್ನಡ ಚಲನಚಿತ್ರೋದ್ಯಮಕ್ಕೆ ಹೊಸ ಭರವಸೆ ಮೂಡಿಸುವ ಚಲನಚಿತ್ರವಾಗಿ ಬರಲಿದೆ. ಭೀಮನ ಸುತ್ತಲಿನ ನಿರೀಕ್ಷೆ ನನ್ನದಲ್ಲ, ಇದು ಇಡೀ ಉದ್ಯಮದ ಭರವಸೆಯ ಪ್ರತಿಬಿಂಬವಾಗಿದೆ ಎಂದಿದ್ದಾರೆ ಮಾಸ್ತಿ.

ಸಲಗ ಚಿತ್ರದ ಯಶಸ್ಸಿನ ನಂತರ ವಿಜಯ್ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ, ಹೀಗಾಗಿ ಆಕಾಶದೆತ್ತರಕ್ಕೆ ನಿರೀಕ್ಷೆಗಳಿವೆ. ಭೀಮನು ಆ ಎಲ್ಲ ನಿರೀಕ್ಷೆಗಳನ್ನು ಮೀರುತ್ತಾನೆ ಎಂದು ನಾನು ದೃಢವಾಗಿ ನಂಬುತ್ತೇನೆ. ಭೀಮಾ ಸಿನಿಮಾದಲ್ಲಿ ವಿಜಯ್ ಕುಮಾರ್ ಜೊತೆ ಕೆಲಸ ಮಾಡಿದ ಅನುಭವವನ್ನು ಮಾಸ್ತಿ ಬಿಚ್ಚಿಟ್ಟಿದ್ದಾರೆ. ತಮ್ನ ಸ್ನೇಹಿತ ಹಾಗೂ ನಿರ್ದೇಶಕ ವಿಜಯ್ ಅವರನ್ನು ಹೊಗಳಿದ್ದಾರೆ. ವಿಜಯ್ ಕೇಲಸ ಸ್ನೇಹಿತ ಮಾತ್ರವಲ್ಲ, ಗಮನಾರ್ಹ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿ ಚಿತ್ರದಿಂದ ಕಲಿಯುವ ಮತ್ತು ತನ್ನ ಸುತ್ತಲಿನವರಿಗೆ ಕಲಿಸುವ ವಿಶಿಷ್ಟ ಸಾಮರ್ಥ್ಯ ಅವರಲ್ಲಿದೆ. ಸಂಭಾಷಣೆಗಳು ಸಹಜ ಮತ್ತು ವಾಸ್ತವಿಕವಾಗಿವೆ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ಅವರ ಪ್ರತಿಭೆ ಅಡಗಿದೆ, ಈ ಗುಣಮಟ್ಟವು ಈ ಚಿತ್ರದಲ್ಲಿ ನನ್ನ ಕೆಲಸದ ಮೇಲೆ ಹೆಚ್ಚು ಪ್ರಭಾವ ಬೀರಿತು. ಭೀಮ ಎಂಬ ಶೀರ್ಷಿಕೆಯು ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿಧ್ವನಿಸುತ್ತದೆ. ಚಿತ್ರದ ಸಂಭಾಷಣೆಯನ್ನು ಸಮಕಾಲೀನ ಗ್ರಾಮ್ಯ ಮತ್ತು ಪ್ರಾದೇಶಿಕ ಆಡುಭಾಷೆಯೊಂದಿಗೆ ಮಾಸ್ತಿ ಬರೆದಿದ್ದಾರೆ.

ಸಂಭಾಷಣೆಯಲ್ಲಿ 'ಸೈಕ್,' 'ಜುಟ್ಟು,' 'ಮೀಟರ್,' ಮತ್ತು 'ಫೀಲ್ಡ್' ನಂತಹ ವಿಶಿಷ್ಟ ಪದಗಳನ್ನು ಬಳಸಲಾಗಿದೆ, ಇದು ಯುವಜನರು ಬಳಸುವ ಪ್ರಸ್ತುತ ಆಡುಭಾಷೆಯನ್ನು ಪ್ರತಿಬಿಂಬಿಸುತ್ತದೆ, ಎಂದು ಮಾಸ್ತಿ ವಿವರಿಸುತ್ತಾರೆ. ಇದರ ಶ್ರೇಯಸ್ಸು ದುನಿಯಾ ವಿಜಯ್ ಅವರಿಗೆ ಸಲ್ಲುತ್ತದೆ, ಅವರು ಸಂಭಾಷಣೆಗಳನ್ನು ಅಧಿಕೃತ ಮತ್ತು ಇಂದಿನ ಭಾಷೆಯನ್ನು ಪ್ರತಿನಿಧಿಸಬೇಕು ಎಂದು ಬಯಸಿದ್ದರು ಅದರಂತೆ ಭಾಷೆ ಬಳಕೆ ಮಾಡಲಾಗಿದೆ. ಚಿತ್ರವು ಮಾಸ್ ಡೈಲಾಗ್‌ಗಳು ಮತ್ತು ಕ್ಲಾಸಿಕ್ ಲೈನ್‌ಗಳ ಮಿಶ್ರಣವನ್ನು ಒಳಗೊಂಡಿದೆ, ಭೀಮಾ ಸಿನಿಮಾ ಖಂಡಿತವಾಗಿ ಮಾಸ್ ಎಂಟರ್‌ಟೈನರ್ ಆಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT