ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ 
ಸಿನಿಮಾ ಸುದ್ದಿ

ನಾಗ ಚೈತನ್ಯ-ಶೋಭಿತಾ ಅದ್ಧೂರಿ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡು ಶುಭ ಹಾರೈಸಿದ ನಾಗಾರ್ಜುನ!

ನಾಗ ಚೈತನ್ಯ-ಸಮಂತಾ ಅವರು ಅಕ್ಟೋಬರ್ 2021 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆಗೆ ಡೇಟಿಂಗ್ ನಲ್ಲಿರುವ ಸುದ್ದಿ ಕೇಳಿಬಂದಿತ್ತು.

ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಗುರುವಾರ ಅದ್ಧೂರಿಯಾಗಿ ನೆರವೇರಿದ್ದು, ಫೋಟೋ ಹಂಚಿಕೊಳ್ಳುವ ಮೂಲಕ ನಾಗಾರ್ಜುನ ಅವರು ಶುಭ ಹಾರೈಸಿದ್ದಾರೆ.

ಪುತ್ರನ ನಿಶ್ಚಿತಾರ್ಥ ಕುರಿತು ಫೋಟೋ ಸಹಿತ ನಟ ನಾಗಾರ್ಜುನ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ 9:42ಕ್ಕೆ ಶೋಭಿತಾ ಧೂಳಿಪಾಲರೊಂದಿಗೆ ನಮ್ಮ ಮಗ ನಾಗ ಚೈತನ್ಯ ಅವರ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾ ಧೂಳಿಪಾಲರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಜೋಡಿಗೆ ಅಭಿನಂದನೆಗಳು. ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ.

ನಾಗ ಚೈತನ್ಯ-ಸಮಂತಾ ಅವರು ಅಕ್ಟೋಬರ್ 2021 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆಗೆ ಡೇಟಿಂಗ್ ನಲ್ಲಿರುವ ಸುದ್ದಿ ಕೇಳಿಬಂದಿತ್ತು. ಆದರೆ, ಈ ಬಗ್ಗೆ ಕುಟುಂಬವಾಗಲೀ ನಾಗ ಚೈತನ್ಯವಾಗಲೀ ಸ್ಪಷ್ಟನೆ ನೀಡಿರಲಿಲ್ಲ.

ಈ ನಡುವೆ ಈ ಗುಸುಗುಸುಗಳು ನಿಜವೆಂಬಂತೆ ಇವರಿಬ್ಬರು ಒಟ್ಟಿಗೆ ಇರುವ ವೆಕೇಶನ್ ಫೋಟೋಗಳು ವೈರಲ್ ಆಗಿತ್ತು. ಇದೀಗ ಇಬ್ಬರ ನಿಶ್ಚಿತಾರ್ಥ ನೆರವೇರಿಸಿದ್ದು, ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!