'ಕೌಸಲ್ಯ ಸುಪ್ರಜಾ ರಾಮಾ' ಯಶಸ್ವಿ ಚಿತ್ರ ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ ಅವರು ಮತ್ತೊಂದು ಚಿತ್ರಕ್ಕೆ ಕೈಜೋಡಿಸಿದ್ದು, ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣ ಪ್ರಾರಂಭಿಸಿದೆ.
ಫಾದರ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಶಶಾಂಕ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರದ ಮೊದಲ ಹಂತದ ಚಿತ್ರೀಕಱಣ ಆರಂಭವಾಗಿದ್ದು, ಚಿತ್ರ, ತಾರಾಗಣ ಹಾಗೂ ಸಿಬ್ಬಂದಿಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ, ಶಶಾಂಕ್ ಅವರೊಂದಿಗೆ ಚಿತ್ರ ಮಾಡುತ್ತಿರುವ ಕುರಿತು ಡಾರ್ಲಿಂಗ್ ಕೃಷ್ಣ ದೃಢಪಡಿಸಿದ್ದಾರೆ.
ಈ ವರೆಗೂ ಪ್ರೀತಿ ಹಾಗೂ ಕೌಟುಂಬಿಕ ಚಿತ್ರಗಳನ್ನು ನೀಡಿರುವ ಶಶಾಂಕ್ ಅವರು ಈ ಬಾರಿ ಥ್ರಿಲ್ಲರ್ ಚಿತ್ರವೊಂದನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.
ಚಿತ್ರ ತಂಡ ಚಿತ್ರದ ಹೆಸರನ್ನು ಅಧಿಕೃತವಾಗಿ ಹೇಳದಿದ್ದರೂ. ಬ್ರ್ಯಾಟ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.