ಸೂರ್ಯ ವಸಿಷ್ಟ, ಶ್ರುತಿ ಹರಿಹರನ್ 
ಸಿನಿಮಾ ಸುದ್ದಿ

ಸೂರ್ಯ ವಸಿಷ್ಟ, ಶ್ರುತಿ ಹರಿಹರನ್ ಅಭಿನಯದ 'ಸಾರಾಂಶ' ಶೀಘ್ರದಲ್ಲೇ ತೆರೆಗೆ

ತಮಸ್ಸು, ಲೂಸಿಯಾ, ಯು-ಟರ್ನ್, ಬದ್ಮಾಶ್, ಗಂಟುಮೂಟೆ, ಮತ್ತು ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸೂರ್ಯ ವಸಿಷ್ಟ ಅವರು ಸಾರಾಂಶ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿದ್ದಾರೆ.

ತಮಸ್ಸು, ಲೂಸಿಯಾ, ಯು-ಟರ್ನ್, ಬದ್ಮಾಶ್, ಗಂಟುಮೂಟೆ, ಮತ್ತು ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸೂರ್ಯ ವಸಿಷ್ಟ ಅವರು ಸಾರಾಂಶ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿದ್ದಾರೆ.

ಸಾರಂಶ ಚಿತ್ರವು ಫೆಬ್ರವರಿ 15 ರಂದು ತೆರೆಗೆ ಬರಲಿದೆ. ಬಿಡುಗಡೆಗೆ ಮುಂಚಿತವಾಗಿ, ನಿರ್ಮಾಪಕರು ಚಿತ್ರದ ಹಾಡನ್ನು  ರಿಲೀಸ್ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಶಕ ಹೇಮಂತ್ ಎಂ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಟ್ರೇಲರ್ ಬಿಡುಗಡೆ ಮಾಡಿದರು. ಹಾಡಿನ ಗುಣಮಟ್ಟವನ್ನು ಮತ್ತಷ್ಟು ಶ್ಲಾಘಿಸಿದರು ಮತ್ತು ತಂಡಕ್ಕೆ ಶುಭ ಹಾರೈಸಿದರು.

ಸಾರಾಂಶ ಒಂದು ಎಮೋಶನಲ್ ಸಿನಿಮಾವಾಗಿದೆ, ಟ್ರೇಲರ್ ಪ್ರತಿ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ನಿರ್ದೇಶಕ ಸೂರ್ಯ ವಸಿಷ್ಠ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಾರಾಂಶ ಸಿನಿಮಾ ಈ ದಿನಮಾನಕ್ಕೆ ಅತ್ಯಂತ ಅಪರೂಪ ಎನಿಸುವ ಗುಣಹೊಂದಿರುವ ಚಿತ್ರ.  ತೇಜಸ್ವಿ ಮತ್ತು ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾವಿ ಎಂಬ ಪಾತ್ರದಲ್ಲಿ ಎದುರಾಗಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್‌ ಟ್ರೇಲರ್‌ನಲ್ಲಿದೆ.

ಶ್ವೇತಾ ಗುಪ್ತಾ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹೊಂದಿರುವ ಪುಸ್ತಕ ಪ್ರಕಾಶಕರ ಪಾತ್ರದಲ್ಲಿ ನಟಿಸಿದ್ದಾರೆ. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಅಡಿಯಲ್ಲಿ ರವಿ ಕಶ್ಯಪ್ ಮತ್ತು ಆರ್ ಕೆ ನಲ್ಲಂ ಅವರು ಸಾರಾಂಶ ಸಿನಿಮಾ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಸೂರ್ಯ ವಸಿಷ್ಟ ಜೊತೆಗೆ ಅಪರಾಜಿತ್ ಅವರ ಹಿನ್ನೆಲೆ ಸಂಗೀತವಿದೆ. ಉದಿತ್ ಹರಿತಾಸ್ ಸಂಗೀತ ನಿರ್ದೇಶನ ಹಾಗೂ ಪ್ರದೀಪ್ ನಾಯಕ್ ಸಂಕಲನವಿದೆ. ಚಿತ್ರದಲ್ಲಿ ಆಸಿಫ್ ಕ್ಷತ್ರಿಯ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್ ಮತ್ತು ಪೃಥ್ವಿ ಬನವಾಸಿ ಕೂಡ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!