ಹೈಡ್ & ಸೀಕ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಅನೂಪ್ ರೇವಣ್ಣ, ಧನ್ಯಾ ರಾಮ್‌ಕುಮಾರ್ ಅಭಿನಯದ 'ಹೈಡ್ & ಸೀಕ್' ಬಿಡುಗಡೆ ದಿನಾಂಕ ಘೋಷಣೆ

ಸಿವಿಲ್ ಇಂಜಿನಿಯರ್ ಆಗಿರುವ ಪುನೀತ್ ನಾಗರಾಜ್ ಅವರು ದಶಕವನ್ನು ಸಹಾಯಕ ನಿರ್ದೇಶಕರಾಗಿ ಕಳೆದರು. ಇದೀಗ ಅವರು ಹೈಡ್ & ಸೀಕ್ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅನೂಪ್ ರೇವಣ್ಣ ಮತ್ತು ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿವಿಲ್ ಇಂಜಿನಿಯರ್ ಆಗಿರುವ ಪುನೀತ್ ನಾಗರಾಜ್ ಅವರು ದಶಕವನ್ನು ಸಹಾಯಕ ನಿರ್ದೇಶಕರಾಗಿ ಕಳೆದರು. ಇದೀಗ ಅವರು ಹೈಡ್ & ಸೀಕ್ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದ್ದು, ಅನೂಪ್ ರೇವಣ್ಣ ಮತ್ತು ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅನೂಪ್ ಅವರ ತಂದೆ ಎಚ್‌ಎಂ ರೇವಣ್ಣ, ರಾಮಲಿಂಗಾ ರೆಡ್ಡಿ ಮತ್ತು ವಿಶ್ವನಾಥ್ ಸೇರಿದಂತೆ ರಾಜಕಾರಣಿಗಳು ಮತ್ತು ಹಿರಿಯ ಪ್ರಾಧ್ಯಾಪಕ ಡಾ. ಕೆ ರವಿ ಸೇರಿದಂತೆ ಇತರರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿದೆ. ಚಿತ್ರವು ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪುನೀತ್ ನಾಗರಾಜ್, ಹೈಡ್ & ಸೀಕ್ ಅಪಹರಣದ ಸುತ್ತ ಕೇಂದ್ರೀಕೃತವಾಗಿರುವ ಕಾಲ್ಪನಿಕ ಕಥೆಯಾಗಿದೆ. ಎಲ್ಲವೂ ಒಂದು ವಾರದೊಳಗೆ ನಡೆಯುತ್ತದೆ. 'ಅಪಹರಣಕಾರರ ಗ್ಯಾಂಗ್ ಅವರ ನಡುವೆ ನಿಗೂಢವಾಗಿ ಇರುವ ವ್ಯಕ್ತಿಯೊಂದಿಗೆ ಕಾರ್ಯನಿರ್ವಹಿಸುವ ಜಗತ್ತನ್ನು ಚಿತ್ರ ತೆರೆದಿಡುತ್ತದೆ'. ಅನೂಪ್ ಅವರ ಪಾತ್ರವು ಈ ಗ್ಯಾಂಗ್‌ನ ಸದಸ್ಯರಲ್ಲಿ ಒಬ್ಬರಾಗಿದ್ದು, ಚಿತ್ರದ ನಿರೂಪಣೆಯು ಅವರ ಸಂಘಟನೆಯ ಸಂಕೀರ್ಣತೆಗಳು ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಪರಿಶೋಧಿಸುತ್ತದೆ ಎನ್ನುತ್ತಾರೆ.

ವಸಂತರಾವ್ ಎಂ ಕುಲಕರ್ಣಿ ನಿರ್ಮಿಸಿರುವ ಹೈಡ್ & ಅಂಡ್ ಸೀಕ್ ಚಿತ್ರದಲ್ಲಿ ಬಾಲರಾಜವಾದಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಜಗ್ಗಿ, ಅರವಿಂದ್ ರಾವ್, ಕೃಷ್ಣ ಹೆಬ್ಬಾಳೆ ಮತ್ತು ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ರಿಜೋ ಪಿ ಜಾನ್ ಛಾಯಾಗ್ರಹಣ, ಸ್ಯಾಂಡಿ ಆಡಂಕಿ (ಕಿಲ್ಲಿಂಗ್ ವೀರಪ್ಪನ್) ಸಂಗೀತ ಸಂಯೋಜಿಸಿದ್ದು, ಮಧು ತುಂಬಕೆರೆ ಸಂಕಲನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

SCROLL FOR NEXT