ಸಿನಿಮಾ ಸುದ್ದಿ

ಪ್ರಭಾಸ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಜಪಾನ್‌ನಲ್ಲಿ ಬಿಡುಗಡೆಗೆ ಸಜ್ಜು!

Ramyashree GN

ಹೈದರಾಬಾದ್: 'ಸಲಾರ್: ಭಾಗ 1 - ಕದನ ವಿರಾಮ' ಚಿತ್ರವು ಈ ಬೇಸಿಗೆಯಲ್ಲಿ ಜಪಾನಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಚಿತ್ರವನ್ನು ಜಪಾನಿನ ಚಲನಚಿತ್ರ ವಿತರಣಾ ಕಂಪನಿ 'ಟ್ವಿನ್' ದ್ವೀಪ ರಾಷ್ಟ್ರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದೆ.

'ಸಲಾರ್ ಈ ಬೇಸಿಗೆಯಲ್ಲಿ ಜಪಾನ್‌ನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟ್ವಿನ್ 2 ಮೂಲಕ ಚಿತ್ರ ತೆರೆಕಾಣುತ್ತಿದೆ' ಎಂದು ಚಿತ್ರತಂಡ ಶನಿವಾರ 'ಸಲಾರ್'ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಇದರೊಂದಿಗೆ ಸಲಾರ್ ಮಾರ್ಚ್ 7 ರಂದು ಲ್ಯಾಟಿನ್ ಅಮೆರಿಕದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಾಯಕರಾಗಿ ನಟಿಸಿರುವ 'ಸಲಾರ್: ಭಾಗ 1 - ಕದನ ವಿರಾಮ' ಡಿಸೆಂಬರ್ 22 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ. ಚಿತ್ರವು ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 650 ಕೋಟಿ ರೂ. ಗಳಿಕೆ ಕಂಡಿದೆ.

ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ನಡೆಯುವ ಈ ಚಿತ್ರವು ದೇವ (ಪ್ರಭಾಸ್) ಮತ್ತು ವರ್ಧ (ಪೃಥ್ವಿರಾಜ್) ಎಂಬ ಇಬ್ಬರು ಸ್ನೇಹಿತರ ಸುತ್ತ ಸುತ್ತುತ್ತದೆ.

ಚಿತ್ರದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ.

SCROLL FOR NEXT