ಕಾಟೇರ ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

ಬಾಕ್ಸ್‌ ಆಫಿಸ್‌ನಲ್ಲಿ ನಿಲ್ಲದ ದರ್ಶನ್ ಅಬ್ಬರ: ಮೂರನೇ ವಾರವೂ 'ಕಾಟೇರ' ಭರ್ಜರಿ ಪ್ರದರ್ಶನ, ಸದ್ಯ ಗಳಿಸಿರುವುದೆಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅಭಿನಯದ ಕಾಟೇರ ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಾಟೇರ ಕ್ರೇಜ್ ಹೆಚ್ಚುತ್ತಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಕಾಟೇರ ಯಶಸ್ವಿಯಾಗಿದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅಭಿನಯದ ಕಾಟೇರ ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಾಟೇರ ಕ್ರೇಜ್ ಹೆಚ್ಚುತ್ತಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಕಾಟೇರ ಯಶಸ್ವಿಯಾಗಿದೆ. 

ಚಿತ್ರ ಬಿಡುಗಡೆಯಾಗಿ ಎರಡು ವಾರ ಕಳೆದಿದ್ದು, ಮೂರನೇ ವಾರವೂ ಅದ್ಧೂರಿಯಾಗಿ ಮುನ್ನುಗ್ಗುತ್ತಿರುವ ಕಾಟೇರ ಇದೀಗ ಹೊಸ ದಾಖಲೆ ಬರೆದಿದೆ. ಚಿತ್ರ ಸದ್ಯ ಬಿಡುಗಡೆಯಾದ ಎರಡನೇ ವಾರಕ್ಕೆ ಬರೋಬ್ಬರಿ 157.42 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ. 

ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಇದೀಗ ರಿಲೀಸ್ ಆದ ಎರಡನೇ ವಾರಕ್ಕೆ ಕಾಟೇರ ಸಿನಿಮಾ ಮತ್ತಷ್ಟು ಗಳಿಕೆ ಕಂಡಿದೆ. ಕಾಟೇರ ಚಿತ್ರ 2 ನೇ ವಾರದಲ್ಲಿ 462 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟು 416 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. 

ಇತ್ತೀಚೆಗಷ್ಟೇ (ಜನವರಿ 6) ಕಾಟೇರ ಸಿನಿಮಾ ದುಬೈನಲ್ಲಿ ಬಿಡುಗಡೆಯಾಗಿತ್ತು ಮತ್ತು ದುಬೈನಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಚಿತ್ರತಂಡ ದುಬೈಗೆ ಭೇಟಿ ನೀಡಿತ್ತು. 

ಸದ್ಯ ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದ್ದು, ಗೋವಾ, ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಬಿಡುಗಡೆ ಆಗಿದೆ. ಅಲ್ಲಿಯೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರಗಳತ್ತ ಆಗಮಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 world cup: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; ಬೆಥೆಲ್ ಶತಕ ವ್ಯರ್ಥ; ಆಂಗ್ಲರ ಮಣಿಸಿದ ಭಾರತ ಫೈನಲ್ಸ್ ಗೆ ಲಗ್ಗೆ

GSDPಯಲ್ಲಿ ಕರ್ನಾಟಕವನ್ನೂ ಮೀರಿಸಿದ ಉತ್ತರ ಪ್ರದೇಶ: ದೇಶದ ಅತಿ ದೊಡ್ಡ ಆರ್ಥಿಕತೆ ಇರುವ ರಾಜ್ಯ ಯಾವುದು?

ಮಧ್ಯಪ್ರಾಚ್ಯ ಸಂಘರ್ಷ: ಅಚ್ಚರಿ ಮೂಡಿಸಿದ ಜೈಶಂಕರ್- ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತುಕತೆ

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

ಅಸ್ಸಾಂನಲ್ಲಿ ರಾಡಾರ್ ಸಂಪರ್ಕದಿಂದ ವಾಯುಪಡೆಯ Sukhoi 30 ನಾಪತ್ತೆ

SCROLL FOR NEXT