ಉಪಾಧ್ಯಕ್ಷ ನಟಿ ಮಲೈಕಾ ವಸುಪಾಲ್ 
ಸಿನಿಮಾ ಸುದ್ದಿ

ಕಿರುತೆರೆ ಅಥವಾ ಹಿರಿತೆರೆ, ಎಲ್ಲಾ ಕಡೆ ಪಾತ್ರದ ಅಭಿನಯ ಮುಖ್ಯ: ನಟಿ ಮಲೈಕಾ ವಸುಪಾಲ್

ನಟಿ ಮಲೈಕಾ ವಸುಪಾಲ್ 'ಉಪಾಧ್ಯಕ್ಷ' ಮೂಲಕ ಮೊದಲ ಬಾರಿಗೆ ಹಿರಿತೆರೆ ಪ್ರವೇಶಿಸಿದ್ದಾರೆ. ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣದೊಂದಿಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಲೈಕಾ, ಈಗ ಹಿರಿತೆರೆ ನಟಿಯಾಗುವ ತನ್ನ ದೀರ್ಘಕಾಲದ ಕನಸನ್ನು ಬಿಚ್ಚಿಟ್ಟಿದ್ದಾರೆ. ಆರಂಭಿಕ ದಿನಗಳಿಂದಲೂ ನಟನೆ ಅವರ ಕನಸಾಗಿತ್ತಂತೆ.

ನಟಿ ಮಲೈಕಾ ವಸುಪಾಲ್ 'ಉಪಾಧ್ಯಕ್ಷ' ಮೂಲಕ ಮೊದಲ ಬಾರಿಗೆ ಹಿರಿತೆರೆ ಪ್ರವೇಶಿಸಿದ್ದಾರೆ. ಇದಕ್ಕಾಗಿ ಅತ್ಯುತ್ಸಾಹ ಹಾಗೂ ಬದ್ಧತೆ ಪ್ರದರ್ಶಿಸಿದ್ದಾರೆ. ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣದೊಂದಿಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಲೈಕಾ, ಈಗ ಹಿರಿತೆರೆ ನಟಿಯಾಗುವ ತನ್ನ ದೀರ್ಘಕಾಲದ ಕನಸನ್ನು ಬಿಚ್ಚಿಟ್ಟಿದ್ದಾರೆ. ಆರಂಭಿಕ ದಿನಗಳಿಂದಲೂ ನಟನೆ ಅವರ ಕನಸಾಗಿತ್ತಂತೆ.

ಪ್ರಶಸ್ತಿ ಕಾರ್ಯಕ್ರಮಗಳು ಮತ್ತು ವೀಕೆಂಡ್ ವಿತ್ ರಮೇಶ್, ನಲ್ಲಿ ಸಾಧಕರನ್ನು ಕಣ್ಣಾರೆ ಕಂಡಿದ್ದು, ಹಿರಿತೆರೆಗೆ ಬರಲು ಪ್ರೇರಣೆ ನೀಡಿತು. ಹೆತ್ತವರ ಇಚ್ಛೆ ಮತ್ತು ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸುವ ಮೂಲಕ, ಈಗ ನನ್ನ ಕನಸುಗಳನ್ನು ಈಡೇರಿಸುವ ಸರದಿ ನನ್ನದು ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಉಪಾಧ್ಯಕ್ಷ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಅನಿಲ್ ಕುಮಾರ್ ಅವರ ನಿರ್ದೇಶನ, ಡಿಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸ್ಮಿತಾ ಉಮಾಪತಿ ನಿರ್ಮಿಸಿರುವ ಚಿತ್ರದಲ್ಲಿ ಹಾಸ್ಯನಟ ಚಿಕ್ಕಣ್ಣ ಅವರಿಗೆ ಮಲೈಕಾ ಜೋಡಿಯಾಗಿದ್ದಾರೆ.

ತನ್ನ ಮೊದಲ ಚಿತ್ರಕ್ಕಾಗಿ ಕ್ಯಾಮೆರಾ ಎದುರಿಸಲು  ಧಾರಾವಾಹಿಗಳಲ್ಲಿನ ತನ್ನ ಅನುಭವ ನೆರವಾಗಿದ್ದನ್ನು  ಮಲೈಕಾ ಒಪ್ಪಿಕೊಳ್ಳುತ್ತಾಳೆ. ಹಿಟ್ಲರ್ ಕಲ್ಯಾಣದಲ್ಲಿನ ನನ್ನ ಪಾತ್ರವು ಇನ್ನೂ ಮಾತನಾಡುತ್ತಿದೆ. ಹಿರಿತೆರೆಗೆ ಪ್ರವೇಶ ಒಂದು ದೊಡ್ಡ ಹೆಜ್ಜೆಯಾಗಿದೆ. ಆದರೆ ಧಾರಾವಾಹಿ ಮಾಡುವುದರಿಂದ ಕಲಿತ ನಟನಾ ಕೌಶಲ್ಯವು ನನಗೆ ಸುಲಭವಾಗಿಸಿದೆ.  ಇದು ಕಿರುತೆರೆ ಅಥವಾ ದೊಡ್ಡ ಪರದೆ ಮೇಲೆ ಕೆಲಸ ಮಾಡುವ ಬಗ್ಗೆ ಅಲ್ಲ. ಎಲ್ಲೆಡೆ ಪಾತ್ರ ಅಭಿನಯ ಇರುತ್ತದೆ. ಕ್ಯಾಮೆರಾ ಎದುರಿಸುವಲ್ಲಿ ನೀವು ಎಷ್ಟು ವಿಶ್ವಾಸ ಹೊಂದಿದ್ದೀರಿ ಎಂಬುದು ಮುಖ್ಯವಾಗಿರುತ್ತದೆ. ಧಾರಾವಾಹಿಗಳಿಗೆ ಕಥೆ ಅಗತ್ಯವಿದೆ. ಅದು ದೊಡ್ಡ ಪರದೆಗೆ ಸೀಮಿತವಾಗಿದೆ. ಇದು ಉಪಾಧ್ಯಕ್ಷನಲ್ಲಿ ಕೆಲಸ ಮಾಡುವಾಗ ನಾನು ಅರಿತುಕೊಂಡ ವಿಷಯ ಎಂದರು. 

ಮೊದಲ ಬಾರಿಗೆ ಹಾಸ್ಯ ಪ್ರಧಾನ ಪಾತ್ರದಲ್ಲಿ ತೊಡಗಿಸಿಕೊಂಡಿರುವ ಮಲೈಕಾ, ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕಾಮಿಡಿ ಸೆನ್ಸ್ ಒಂದು ಪ್ರಮುಖ ಸಾಧನವಾಗಿದೆ. 250 ಚಿತ್ರಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿ ಈಗ ಹಿರೋ ಆಗಿರುವ ಚಿಕ್ಕಣ್ಣ ಅವರೊಂದಿಗೆ ಆಫ್ ಸ್ಕ್ರೀನ್ ನಲ್ಲಿ ಕೆಲಸ ಮಾಡುವುದಕ್ಕೆ ಆರಂಭದಲ್ಲಿ ಹೆದರಿಕೆ ಇತ್ತು. ಆದರೆ ಅದನ್ನು ನಿಬಾಯಿಸಿದ್ದೇನೆ. ಅದರಲ್ಲೂ ನನ್ನ ಮೊದಲ ಸಿನಿಮಾದಲ್ಲಿಯೇ ನಾಯಕನಿಗೆ ಸರಿಸಮಾನವಾದ ಪಾತ್ರ ಸಿಕ್ಕಿರುವುದು ದೊಡ್ಡ ಅನುಕೂಲ. ಚಿಕ್ಕಣ್ಣ ಜೊತೆಗೆ ರವಿಶಂಕರ್ ಮತ್ತು ಸಾಧು ಕೋಕಿಲ ಅವರಂತಹ ನಟರೊಂದಿಗೆ ಕೆಲಸ ಮಾಡುವ ಅವಕಾಶವೂ ನನಗೆ ಸಿಕ್ಕಿತು ಎಂದು ಅವರು ಹಂಚಿಕೊಂಡರು.

 ಇತರ ಚಲನಚಿತ್ರೋದ್ಯಮಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವ ಬಗ್ಗೆ ಯೋಚಿಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಲೈಕಾ“ನನಗೆ ತೆಲುಗು ಚಿತ್ರಗಳು ಮತ್ತು ಧಾರಾವಾಹಿಗಳಿಂದ ಆಫರ್‌ಗಳು ಬಂದಿವೆ. ಆದಾಗ್ಯೂ, ನನಗೆ ಭಾಷೆ ತಿಳಿದಿಲ್ಲದ ಕಾರಣ ಅವುಗಳನ್ನು ನಿರಾಕರಿಸಿದೆ ಮತ್ತು ನಿಜವಾದ ನಟನೆಗೆ ಸಂಪೂರ್ಣ ಮುಳುಗುವಿಕೆಯ ಅಗತ್ಯವಿದೆ ಎಂದು ನಂಬುತ್ತೇನೆ. ಭಾಷೆ ಕಲಿಯಬಹುದಾದರೂ, ಉಪಾಧ್ಯಕ್ಷನ ಬಿಡುಗಡೆಗಾಗಿ ಕಾಯುತ್ತಿದ್ದು,  ಇಲ್ಲಿಯೇ ನನ್ನ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇನೆ ಎಂದು ಅವರು ಮಾತು ಮುಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT