ಚಿಕ್ಕಣ್ಣ 
ಸಿನಿಮಾ ಸುದ್ದಿ

'ಉಪಾಧ್ಯಕ್ಷ' ಮೂಲಕ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ, ಹೆಚ್ಚಿಗೆ ಇನ್ನೇನು ಬೇಕು: ನಟ ಚಿಕ್ಕಣ್ಣ

'ಉಪಾಧ್ಯಕ್ಷ' ಚಿತ್ರದೊಂದಿಗೆ ಹೀರೋ ಆಗಿರುವ ಹಾಸ್ಯನಟ ಚಿಕ್ಕಣ್ಣ, ಆಂತರಿಕವಾಗಿ ಈಗಲೂ ಹಾಸ್ಯನಟನೇ ಎಂದು ಹೇಳುತ್ತಾರೆ."ನಾನು ಹಾಸ್ಯದ ಮೂಲಕ ಮನರಂಜಿಸುವ ಅದೇ ಚಿಕ್ಕಣ್ಣ. ಆದರೆ, ಹಾಡುಗಳು, ಆಕ್ಷನ್ ಮತ್ತು ಹೆಚ್ಚಿನ ಮನರಂಜನೆಯ ಅಂಶಗಳೊಂದಿಗೆ ನಾಯಕ ನಟ ಪಾತ್ರ ಬಂದಿದೆ ಎಂದು ತಿಳಿಸಿದರು.

'ಉಪಾಧ್ಯಕ್ಷ' ಚಿತ್ರದೊಂದಿಗೆ ಹೀರೋ ಆಗಿರುವ ಹಾಸ್ಯನಟ ಚಿಕ್ಕಣ್ಣ, ಆಂತರಿಕವಾಗಿ ಈಗಲೂ ಹಾಸ್ಯನಟನೇ ಎಂದು ಹೇಳುತ್ತಾರೆ. "ನಾನು ಹಾಸ್ಯದ ಮೂಲಕ ಮನರಂಜಿಸುವ ಅದೇ ಚಿಕ್ಕಣ್ಣ. ಆದರೆ, ಹಾಡುಗಳು, ಆಕ್ಷನ್ ಮತ್ತು ಹೆಚ್ಚಿನ ಮನರಂಜನೆಯ ಅಂಶಗಳೊಂದಿಗೆ ನಾಯಕ ನಟ ಪಾತ್ರ ಬಂದಿದೆ. ಇದು ಅಧ್ಯಕ್ಷ ಚಿತ್ರದ ಮುಂದುವರಿದ ಭಾಗವಾಗಿದ್ದು, ಆ ಚಿತ್ರದಲ್ಲಿ ಶರಣ್ ಜೊತೆಗೆ ನಿರ್ವಹಿಸಿದ ಉಪಾಧ್ಯಕ್ಷ ಪಾತ್ರವನ್ನು ಇಲ್ಲಿಯೂ ನಿರ್ವಹಿಸಿದ್ದೇನೆ. ಪಾತ್ರವು ಇಲ್ಲಿಯೂ ಮುಂದುವರಿಯುತ್ತದೆ ಎಂದು ಅವರು ಹೇಳಿದರು. 

250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯನಟನಾಗಿ ಕೆಲಸ ಮಾಡಿ, ಈಗ ನಾಯಕ ನಟನಾಗಿ ಅಭಿನಯಿಸಿದ್ದೇನೆ. ಸಿನಿಮಾದ ಭಾಗವಾಗಬೇಕೆಂದು ನಾನು ಕನಸು ಕಂಡಿರಲಿಲ್ಲ. ಆದರೆ ಸಿನಿಮಾ ನನ್ನನ್ನು ಕರೆಯಿತು. ಆರಂಭದಲ್ಲಿ ಅದರಲ್ಲಿ ಉಳಿಯುವುದು ಕಷ್ಟವೆನಿಸಿತು. ಆದರೆ, ನನ್ನ ಊಹೆಗಳು ತಪ್ಪಿದವು ಮತ್ತು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ  ಉತ್ತಮ ಪಾತ್ರಗಳನ್ನು ಮಾಡಿದ್ದೇನೆ. ಅದನ್ನು ಜನರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಹಾಸ್ಯನಟನಾಗಿ, ನನಗೆ ಮಾರುಕಟ್ಟೆ ಇದೆ. ಆದರೆ  ಮೇಲೆಳಲು ಬಯಸುವ ಹಂತ ಬರುತ್ತದೆ. ಉಪಾಧ್ಯಕ್ಷ ಅದಕ್ಕೆ ತಿರುವು ನೀಡಿದೆ. ಅಧ್ಯಕ್ಷ ಹಿಟ್ ಚಿತ್ರದ ಯಶಸ್ಸಿನ ಸೂತ್ರವನ್ನು ಮುಂದುವರಿಸಲು ಬಯಸುತ್ತೇನೆ. ಜನರು ಈ ಪಾತ್ರವನ್ನು ಸ್ವೀಕರಿಸುವ ವಿಶ್ವಾಸವಿದೆ ಎಂದರು. 

'ಹಾಸ್ಯನಟ ಟ್ಯಾಗ್ ಕಳೆದುಕೊಳ್ಳುವುದಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿಕ್ಕಣ್ಣ ಇಲ್ಲ ಅಂದ್ರು. ಏಕೆಂದರೆ ನಾನು ಹೀರೋ ಆಗಿದ್ದರೂ, ಜನರನ್ನು ನಗಿಸುತ್ತೇನೆ, ಹಾಗಾಗಿ ಹಾಸ್ಯನಟ ಟ್ಯಾಗ್ ನ್ನು ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.
ನಿರ್ಮಾಪಕರಾದ ಡಿಎನ್ ಸಿನಿಮಾಸ್‌ನ ಸ್ಮಿತಾ ಉಮಾಪತಿ ಅವರೊಂದಿಗೆ ಉಪಾಧ್ಯಕ್ಷ ಕನಸನ್ನು ಹಂಚಿಕೊಂಡೆ. ಚಂದ್ರಮೋಹನ್ ಬರೆದ ಕಥೆ ನಿರ್ಮಾಪಕರಿಗೆ ಇಷ್ಟವಾಗಿ, ಹಿರೋ ಆಗಲು ಇದು ಸರಿಯಾದ ಸಮಯ ಅನಿಸಿತು.  52 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಚಿತ್ರಕ್ಕಾಗಿ ರಾಜ್ಯಾದ್ಯಂತ ಪ್ರಯಾಣಿಸಿದ್ದು, ನಿರ್ಮಾಣ ಸಂಸ್ಥೆ ಯಾವುದೇ ಹಂತದಲ್ಲೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ಮಾಹಿತಿ ನೀಡಿದರು. 

ನಿರ್ದೇಶಕ ಅನಿಲ್ ಕುಮಾರ್  ನನ್ನ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ರಾಂಬೊ 2 ಅನ್ನು ಮಾಡಿದ ನಿರ್ದೇಶಕರಾಗಿದ್ದು, ಅವರ ನೆರವಿನಿಂದ ಸಿನಿಮಾವನ್ನು ಸಂಪೂರ್ಣವಾಗಿ ಮನರಂಜನೆಯನ್ನಾಗಿ ಮಾಡುವಲ್ಲಿ ದೊಡ್ಡ ಪ್ಲಸ್ ಆಯಿತು. ಹಿರೋ ಆಗಿ ಬದಲಾದ ಎಲ್ಲಾ ಹಾಸ್ಯನಟರು ಯಶಸ್ವಿಯಾಗಲು ಸಾಧ್ಯವಿಲ್ಲ. ಜನರು ನನ್ನನ್ನು ಹೇಗೆ ಇಷ್ಟಪಡುತ್ತಾರೆ ಎಂಬುದು ಗೊತ್ತಿದೆ. ನನ್ನ ವೀಕ್ಷಕರನ್ನು ಕಳೆದುಕೊಳ್ಳಲು ಇಷ್ಟಪಡಲ್ಲ. ಅದೇ ರೀತಿಯ ಸ್ವಾಗತ ಸಿಗುತ್ತದೆ ಎಂಬ ಭರವಸೆ ಇದೆ ಎನ್ನುತ್ತಾರೆ. 

ಚಿಕ್ಕಣ್ಣ, ಮಲೈಕಾ ವಸುಪಾಲ್

ಡಾ.ಸೂರಿ, ತರುಣ್ ಸುಧೀರ್, ಎಜಿ ಅರ್ಜುನ್ ಅಂತಹ ನಿರ್ದೇಶಕರು ಸ್ಕ್ರೀಪ್ಟ್ ನೋಡಿದ್ದು, ಸಲಹೆ ನೀಡಿದ್ದಾರೆ. ಯಶ್ ಕೂಡಾ ಸ್ಕ್ರೀಪ್ಟ್ ನೋಡಿದ್ದು, ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಕೂಡಾ ಇಷ್ಟಪಟಿದ್ದು, ಸಲಹೆ ನೀಡಿದ್ದಾರೆ. ದರ್ಶನ್ ಅವರ ಕಾಟೇರ ಚಿತ್ರದ ಕಾರ್ಯಕ್ರಮದಲ್ಲಿ ನನ್ನ ಚಿತ್ರದ ಬಗ್ಗೆ ಮಾತನಾಡಿದ್ದು, ಪ್ರೋತ್ಸಾಹಿಸುವಂತೆ ಕೋರಿದೆ. ಶಿವರಾಜ್ ಕುಮಾರ್ ಟ್ರೈಲರ್ ಲಾಂಚ್ ಮಾಡಿದ್ದಾರೆ. ಉಪೇಂದ್ರ, ಸುದೀಪ್, ಧ್ರುವ ಸರ್ಜಾ ಚಿತ್ರದ ಬಗ್ಗೆ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ, ದುನಿಯಾ ವಿಜಯ್, ಪ್ರೇಮ್, ಅಭಿಷೇಕ್ ಅಂಬರೀಷ್, ಮತ್ತಿತರರು ಮಾತನಾಡಿದ್ದಾರೆ. ನನ್ನಗೆ ಎಲ್ಲಾರಿಂದಲೂ ಭರ್ಜರಿ ಸ್ವಾಗತ ಸಿಕ್ಕಿದ್ದು, ಹೆಚ್ಚಿಗೆ ಕೇಳುವುದಿಲ್ಲ ಎಂದರು. 

ಉಪಾಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣ ಜೊತೆಗೆ ಮಲೈಕಾ ವಸುಪಾಲ್ ಜೋಡಿಯಾಗಿ ನಟಿಸಿದ್ದು, ಸಾಧುಕೋಕಿಲ, ಧರ್ಮಣ್ಣ ಕಡೂರು, ಶಿವರಾಜ್ ಕೆಆರ್ ಪೇಟೆ ಮತ್ತಿತರರ ತಾರಾಬಳಗವಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಶರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT