ಗೌರಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಗೌರಿ' ಸಿನಿಮಾ ಹಾಡನ್ನು ಸಹೋದರಿಗೆ ಅರ್ಪಿಸಿದ ಇಂದ್ರಜಿತ್ ಲಂಕೇಶ್!

ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರಜಿತ್ ಲಂಕೇಶ್ ನನ್ನು ಗೌರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ ಲಂಕೇಶ್ ನನ್ನು ಗೌರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಈ ಯೂತ್ ಕಮರ್ಷಿಯಲ್ ಎಂಟರ್‌ಟೈನರ್, ಆಗಸ್ಟ್ 15 ರಂದು ಬಿಡುಗಡೆಗೆ ಸಿದ್ಧವಾಗಿದೆ, ಇಂದ್ರಜಿತ್ ಅವರ ದಿವಂಗತ ಸಹೋದರಿ ಗೌರಿ ಲಂಕೇಶ ಅವರಿಗೆ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿರುವುದು ಮನ ಸೆಳೆಯುತ್ತಿದೆ. 2017 ರಲ್ಲಿ ಬೆಂಗಳೂರಿನಲ್ಲಿ ಗುಂಡಿಕ್ಕಿ ಹತ್ಯೆಯಾದ ಅವರ ಹಿರಿಯ ಸಹೋದರಿ, ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.

ಇಂದ್ರಜಿತ್ ಈಗ ತಮ್ಮ ಸಹೋದರಿ ಗೌರಿಗೆ ಹೃದಯಸ್ಪರ್ಶಿಯಾಗಿ ಹಾಡೊಂದನ್ನು ಅರ್ಪಿಸಿದ್ದಾರೆ. ಸೋಮವಾರ, ನಿರ್ದೇಶಕರು ಎರಡು ಹಾಡುಗಳನ್ನು ಬಿಡುಗಡೆ ಮಾಡಿದರು, ಅವುಗಳಲ್ಲಿ ಒಂದಕ್ಕೆ ಕೆ ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ಕಾಣದ ಚಿತ್ರಗಳ ಮೂಲಕ ಗೌರಿಯ ಪ್ರಯಾಣವನ್ನು ವಿವರಿಸುತ್ತದೆ. ಜೆಸ್ಸಿ ಗಿಫ್ಟ್ ಸಂಯೋಜಿಸಿರುವ ಈ ಹಾಡನ್ನು ಕೈಲಾಶ್ ಖೇರ್ ಹಾಡಿದ್ದಾರೆ.

ಕಲ್ಯಾಣ್ ಮತ್ತು ನಾನು ಶೀರ್ಷಿಕೆ ಸಾಹಿತ್ಯವನ್ನು ರೂಪಿಸಲು ಪ್ರಾರಂಭಿಸಿದಾಗ, ನಾವು ನನ್ನ ಸಹೋದರಿಯ ಸಾಂಕೇತಿಕ ಸಂಪರ್ಕವನ್ನು ಹುಡುಕಿದೆವು. ದೃಶ್ಯಗಳು ಮತ್ತು ಸಾಲುಗಳು ಗೌರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿಯಾಗಿವೆ" ಎಂದು ಅವರು ಹೇಳಿದರು, ಚಿತ್ರವು ಗೌರಿಯ ಘಟನೆಯ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಗೌರಿಗೆ ಏನಾಯಿತು ಎಂಬುದು ಚಿತ್ರದ ಕಥಾಹಂದರದ ಭಾಗವಾಗಿದೆ ಎಂಬ ತಪ್ಪು ಕಲ್ಪನೆ ಇದೆ. ನಾನು ನಿಮಗೆ ಭರವಸೆ ನೀಡಬಯಸುತ್ತೇನೆ, ಅವರ ಕಥೆಯನ್ನು ಪ್ರಚಾರ ಉದ್ದೇಶಗಳಿಗಾಗಿ ಬಳಸುತ್ತಿಲ್ಲ. ಚಿತ್ರವು ಯೂತ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದರೂ, ಆಕೆಯನ್ನು ಗೌರವಿಸಲು ನಾನು ನನ್ನ ಸಹೋದರಿಯ ಹೆಸರನ್ನು ಇಟ್ಟಿದ್ದೇನೆ. ಆಕೆಯ ಕಥೆಯನ್ನು ಚಿತ್ರದ ನೇರ ಭಾಗವನ್ನಾಗಿ ಮಾಡಿಲ್ಲ ಎಂದು ಇಂದ್ರಜಿತ್ ಹೇಳಿದ್ದಾರೆ.

‘ಮೊನಾಲಿಸಾ’ ಚಿತ್ರದ 20ನೇ ವಾರ್ಷಿಕೋತ್ಸವಕ್ಕೆ ಧ್ಯಾನ್‍ ಮತ್ತು ಸದಾ ಅವರನ್ನು ಇಂದ್ರಜಿತ್‍ ಬೆಂಗಳೂರಿಗೆ ಕರೆಸಿದ್ದರು. ಅದೇ ಇಂದ್ರಜಿತ್‍ ನಿರ್ದೇಶನದ ಹೊಸ ಚಿತ್ರ ‘ಗೌರಿ’ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ‘ಮುದ್ದಾದ’ ಎಂಬ ಹೊಸ ಹಾಡನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಹಾಡು ಬಿಡುಗಡೆ ಮತ್ತು ‘ಮೊನಾಲಿಸಾ’ ಚಿತ್ರದ 20ನೇ ವಾರ್ಷಿಕೋತ್ಸವವನ್ನು ಒಂದೇ ವೇದಿಕೆಯಲ್ಲಿ ಆಚರಿಸಿದರು ಇಂದ್ರಜಿತ್‍.

ಈ ಸಮಾರಂಭಕ್ಕೆ ಸದಾ ಮತ್ತು ಧ್ಯಾನ್‍ ಇಬ್ಬರೂ ಬಂದಿದ್ದರು. ಜೊತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶರಣ್ ಸಹ ಇದ್ದರು. ಜೊತೆಗೆ ‘ನಾದಬ್ರಹ್ಮ’ ಹಂಸಲೇಖ ಇದ್ದರು. ಅವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡು ಬಿಡುಗಡೆಯಾಯಿತು. ‘ಮುದ್ದಾದ ನಿನ್ನ ಹೆಸರೇನು’ ಎಂದು ಶುರುವಾಗುವ ಈ ಹಾಡಿನಲ್ಲಿ ಸಮರ್ಜಿತ್‍ ಲಂಕೇಶ್‍ ಮತ್ತು ಸಾನ್ಯ ಅಯ್ಯರ್‍ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women's World Cup 2025: ಭಾರತ vs ಪಾಕಿಸ್ತಾನ ನಡುವೆ ಹ್ಯಾಂಡ್‌ಶೇಕ್ ಇಲ್ಲ; ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ಕೆ

Couple Romance: ರೈಲಿನಲ್ಲಿ ಜನರ ಎದುರೆ ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬಿಸಿ ಯುವಜೋಡಿ; ಮುಜುಗರಕ್ಕೀಡಾದ ಪ್ರಯಾಣಿಕರು, Video!

ಡೆಲಿವರಿಗೆ ಬಂದು ಎದೆ ಮುಟ್ಟಿದ Blinkit ಏಜೆಂಟ್! ಯುವತಿ ಆರೋಪವೇನು? Video Viral

Cricket: ಕೇವಲ 141 ಎಸೆತಗಳಲ್ಲಿ ಬರೊಬ್ಬರಿ 314 ರನ್ ಚಚ್ಚಿದ ಭಾರತ ಮೂಲದ ಆಸಿಸ್ ಕ್ರಿಕೆಟಿಗ Harjas Singh, ಇತಿಹಾಸ ನಿರ್ಮಾಣ!

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೀಕರ ಭೂಕುಸಿತದಲ್ಲಿ 14 ಸಾವು, ಸಿಕ್ಕಿಂ ಸಂಪರ್ಕ ಕಡಿತ

SCROLL FOR NEXT