ಬೆಂಗಳೂರು: ʻನೇತ್ರಾವತಿʼ ಧಾರಾವಾಹಿ ನಟನ ವಿರುದ್ಧ ಆರೋಪ ಕೇಳಿ ಬಂದಿದೆ. ಸನ್ನಿ ಮಹಿಪಾಲ್ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಆದರೆ ಇದನ್ನು ಅಲ್ಲಗೆಳೆದ ಸನ್ನಿ ಮಹಿಪಾಲ್ ತನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿರುವುದಾಗಿ ಯುವತಿ ವಿರುದ್ಧ ಹೆಚ್.ಎ.ಎಲ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಇದುವರಗೂ ಈ ಸಂಬಂಧ ಯಾರೋಬ್ಬರು ಅಧಿಕೃತ ಮಾಹಿತಿ ದೃಢೀಕರಿಸಿಲ್ಲ.
ಕೆಲ ವರ್ಷ ಪ್ರಸಾರ ಕಂಡಿದ್ದ ‘ನೇತ್ರಾವತಿ’ ಧಾರಾವಾಹಿಯಲ್ಲಿ ಸನ್ನಿ ಮಹಿಪಾಲ್ ನಟಿಸಿದ್ದರು. ಧಾರಾವಾಹಿ ಪೂರ್ಣಗೊಂಡಿದ್ದು, ಈಗ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2024 ಜನವರಿಯಲ್ಲಿ ಯುವತಿಗೆ ಮಹಿಪಾಲ್ ಪರಿಚಯ ಆಗಿದೆ. ಸಿಕ್ಕಸಿಕ್ಕ ಯುವತಿಯರ ಜೊತೆ ಲಿವಿಂಗ್ ಟು ಗೆದರ್ ಆರೋಪ ಕೂಡ ನಟನ ವಿರುದ್ಧ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಶುರುವಾಗಿದೆ. ಬಳಿಕ ಅವರನ್ನು ಸನ್ನಿ ಪ್ರೀತಿ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಮದುವೆಯಾಗೋದಾಗಿ ನಂಬಿಸಿದ್ದರು. ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ವಿವಾಹ ಆದರು. ಸದ್ಯ ಮಹಿಳೆ ಎರಡು ತಿಂಗಳ ಗರ್ಭಿಣಿ. ಈ ಯುವತಿ ಲಾ ಸ್ಟೂಡೆಂಟ್ ಆಗಿದ್ದಳು.
ಮದುವೆಯಾದ ಬಳಿಕ ಇಬ್ಬರೂ ಒಟ್ಟಿಗೆ ಇಲ್ಲ. ಪೋಷಕರನ್ನ ಒಪ್ಪಿಸಿ ಬರುವೆ ಎಂದು ಸನ್ನಿ ಮಹಿಪಾಲ್ ತೆರಳಿದ್ದರು. ಅಷ್ಟೇ ಅಲ್ಲ, ಕೇವಲ ಸ್ನೇಹಿತೆಯ ರೀತಿ ಇರಬೇಕು ಎಂದು ಪತ್ನಿಗೆ ಮಹಿಪಾಲ್ ಷರತ್ತು ಹಾಕಿದ್ದರು. ಅದರಂತೆಯೇ ಆ ಯುವತಿ ನಡೆದುಕೊಂಡಿದ್ದಾರೆ. ಶಾಕಿಂಗ್ ಎಂದರೆ ಕೆಲವೇ ದಿನಗಳ ಹಿಂದೆ ಮಹಿಪಾಲ್ ಬೇರೆ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಲು ಅವರ ಪತ್ನಿ ಜುಲೈ 22ರಂದು ರಾತ್ರಿ ವಿಜ್ಞಾನನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಈ ವೇಳೆ ಗಲಾಟೆಯಾಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಗಲಾಟೆಯಲ್ಲಿ ಗರ್ಭಪಾತ ಆಗಿರೋದಾಗಿ ಪತ್ನಿ ಹೇಳಿಕೆ ನೀಡಿದ್ದಾರೆ. ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿದೆ ಎಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ.