ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಮ್ಯಾಕ್ಸ್ ಹೀರೋ ಸುದೀಪ್ ಮನೆಗೆ ತೆರಳಿ ಕಿಚ್ಚನನ್ನು ಭೇಟಿಯಾಗಿ ಆಗಿದ್ದಾರೆ. ಅದಾದ ನಂತರ ಸುದೀಪ್ ಜೊತೆ ಇರುವ ಫೋಟೋ ಶೇರ್ ಮಾಡಿರುವ ಸಂದೇಶ್, ಸಂದೇಶ್ ಪ್ರೊಡಕ್ಷನ್ಸ್‌ನಿಂದ ಫೆಂಟಾಸ್ಟಿಕ್ ಸುದ್ದಿ ಬರಲಿದೆ, just wait and watch ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಸಂದೇಶ್ ಸುದೀಪ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದರು ಎಂಬ ಬಗ್ಗೆ ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಸಂದೇಶ್ ಪ್ರೊಡಕ್ಷನ್ ಸಿನಿಮಾದಲ್ಲಿ ಕಿಚ್ಚ ಅಭಿನಯಿಸುವ ಬಗ್ಗೆ ತಿಳಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿನಿಮಾದಲ್ಲಿ ಹಲವು ಬಹು ಭಾಷಾ ನಟರು ಕೂಡ ಅಭಿನಯಿಸಲಿದ್ದಾರೆ. ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಂದೇಶ್ ಉಲ್ಲೇಖಿಸಿದ್ದಾರೆ .
ಪ್ರೊಡಕ್ಷನ್ ಹೌಸ್‌ನ ಇತ್ತೀಚಿನ ಪೋಸ್ಟ್ ಇಬ್ಬರ ಕಾಂಬಿನೇಷನ್ ಸಿನಿಮಾ ಖಚಿತ ಪಡಿಸಿದೆ. ಈ ಸುದ್ದಿಯನ್ನು ಸಂದೇಶ್ ಖಚಿತ ಪಡಿಸಿದ್ದು, ಸುದೀಪ್ ಅವರ ಸಿನಿಮಾಗೆ ಹೇಮಂತ್ ಎಂ ರಾವ್ ನಿರ್ದೇಶನ ಮಾಡುವ ಸಾಧ್ಯತೆ ಬಗ್ಗೆ ಸಂದೇಶ್ ಸುಳಿವು ನೀಡಿದ್ದಾರೆ.
ನಾವು ಸುದೀಪ್ ಅವರನ್ನು ನಿರ್ದೇಶಿಸಲು ಹೇಮಂತ್ ಎಂ ರಾವ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ, ಆದರೆ ಅಧಿಕೃತವಾಗಿ ಘೋಷಣೆ ಮಾಡುವ ಮೊದಲು ನಾವು ಇನ್ನೂ ವಿವರಗಳನ್ನು ಅಂತಿಮಗೊಳಿಸಬೇಕಾಗಿದೆ ಎಂದು ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ.
ಸುದೀಪ್ ಅವರೊಂದಿಗಿನ ಹೇಮಂತ್ ಎಂ ರಾವ್ ಅವರ ಸಹಯೋಗದ ಕುರಿತು ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ, ಹೇಮಂತ್ ಶಿವರಾಜ್ ಕುಮಾರ್ ನಟನೆಯ ಮುಂದಿನ ಸಿನಿಮಾಗಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.
ಏತನ್ಮಧ್ಯೆ, ಸುದೀಪ್, ಅವರು ಈಗಷ್ಟೇ ಶೂಟಿಂಗ್ ಮುಗಿಸಿರುವ ಮ್ಯಾಕ್ಸ್ ಬಿಡುಗಡೆಯಲ್ಲಿ ನಿರತರಾಗಿದ್ದಾರೆ, ಶೀಘ್ರದಲ್ಲೇ ಚೇರನ್ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ, ನಂತರ ಅನುಪ್ ಭಂಡಾರಿ ಜೊತೆಗಿನ ಬಿಲ್ಲಾ ರಂಗ ಬಾಷಾ ಹಾಗೂ KRG ಯೊಂದಿಗೆ ಮತ್ತೊಂದು ಪ್ರಾಜೆಕ್ಟ್ ಗೂ ಸುದೀಪ್ ಸಹಿ ಹಾಕಿದ್ದಾರೆ.