ಸಾರಿಕಾ ರಾವ್ ಮತ್ತು ಅಂಕುಶ್ ರಜತ್ ನಟಿಸಿರುವ ಮಂಜೇಶ್ ಭಾಗವತ್ ಅವರ ಮುಂಬರುವ ಚಿತ್ರ 'ಸಹಾರಾ' ಕ್ರಿಕೆಟ್ ಆಧಾರಿತ ಚಿತ್ರವಾಗಿದ್ದು, ಜೂನ್ 7 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಚಿತ್ರದ ಮೊದಲ ಸಿಂಗಲ್ 'ಒಂದೂ ಶಕ್ತಿಯು' ಅನ್ನು ಬಿಡುಗಡೆ ಮಾಡಿದ್ದಾರೆ.
ಭಾವನಾತ್ಮಕ ಮತ್ತು ಅಗತ್ಯ ಕಮರ್ಷಿಯಲ್ ಅಂಶಗಳೊಂದಿಗೆ ಕ್ರೀಡೆ ಆಧರಿತ ಸಿನಿಮಾವನ್ನು ನಿರ್ಮಿಸುವುದು ಸವಾಲಿನ ಕೆಲಸ ಎಂದ ಗಣೇಶ್, 'ಈ ಪ್ರಕಾರದ ಚಿತ್ರವನ್ನು ನಿರ್ಮಿಸುವ ಬಗ್ಗೆ ಚಿತ್ರರಂಗದೊಳಗೆ ಬೇಡಿಕೆಯಿದೆ ಎಂದು ಸ್ವತಃ ಕ್ರಿಕೆಟ್ ಉತ್ಸಾಹಿಯಾಗಿ, ಹಲವಾರು ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ನಟ ಹೇಳಿದರು.
'ಹಾಡಿನ ಬಿಡುಗಡೆಗೆ ಸಾಕ್ಷಿಯಾದ ನಂತರ, ನಿರ್ದೇಶಕ ಮಂಜೇಶ್ ಭಾಗವತ್ ಅವರು ಅತ್ಯುತ್ಸಾಹದಿಂದಲೇ ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂಬುದು ನನಗೆ ಸ್ಪಷ್ಟವಾಯಿತು. ಅವರ ಕ್ರೀಡೆಯ ಮೇಲಿನ ಪ್ರೀತಿಯನ್ನು ಇದು ತೋರಿಸುತ್ತದೆ' ಎಂದ ಗಣೇಶ್, ಸಹಾರಾ ಪಾತ್ರದಲ್ಲಿ ಸಾರಿಕಾ ರಾವ್ ಅವರ ಅಭಿನಯವನ್ನು ಶ್ಲಾಘಿಸಿದರು. ವೃತ್ತಿಪರ ಕ್ರಿಕೆಟಿಗಳಾಗುವ ತನ್ನ ಕನಸನ್ನು ಮುಂದುವರಿಸಲು ಎದುರಾಗುವ ಹಲವಾರು ಅಡೆತಡೆಗಳನ್ನು ಜಯಿಸುವ ಹಳ್ಳಿ ಹುಡುಗಿ ಜಯಶ್ರೀ ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ಚಲನಚಿತ್ರವು ವಿವರಿಸುತ್ತದೆ.
ಸಾರಿಕಾ ರಾವ್ ಅವರು ಚಿತ್ರದಲ್ಲಿ ಲೆಗ್ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲು ವೃತ್ತಿಪರ ಕ್ರಿಕೆಟ್ ಆಟಗಾರರ ಮಾರ್ಗದರ್ಶನದಲ್ಲಿ ತಿಂಗಳುಗಟ್ಟಲೆ ಕಠಿಣ ತರಬೇತಿ ಪಡೆದಿದ್ದಾರೆ. ಚಿತ್ರದಲ್ಲಿ ನಟಿ ಸುಧಾರಾಣಿ ಅವರು ಕ್ರಿಕೆಟ್ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಮಂಜುನಾಥ್ ಹೆಗ್ಡೆ, ಕುರಿ ಸುನೀಲ್ ಮತ್ತು ಮಂಜುಳಾ ರೆಡ್ಡಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ಆಂಟೋನಿ ರುತ್ ವಿನ್ಸೆಂಟ್ ಛಾಯಾಗ್ರಹಣ ಮಾಡಿದ್ದಾರೆ. ಸಹಾರಾ ಚಿತ್ರವನ್ನು ಶಿವಕುಮಾರ್ ಮಾದಯ್ಯ ನಿರ್ಮಿಸಿದ್ದಾರೆ ಮತ್ತು ಕೆಆರ್‌ಜಿ ಸ್ಟುಡಿಯೋಸ್ ವಿತರಿಸಿದೆ.