ಎಡಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಂಗಡಿಯಿಂದ ತಿಂಡಿ ಖರೀದಿಸುತ್ತಿರುವುುದು, ಬಲಚಿತ್ರದಲ್ಲಿ ಬಳ್ಳಾರಿಗೆ ಭೇಟಿ ನೀಡಿದ್ದ ಸಂದರ್ಭ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

'ನಾರ್ಮಲ್ ಆಗಿರೋದನ್ನೇ ಈಗ ಜನ ಸಿಂಪ್ಲಿಸಿಟಿ ಅಂತ ಕರೀತಾರೆ, ಅದ್ಕೆ ಏನು ಹೇಳೋಣ': ನಟ ಯಶ್

ನಾನು ರಾಜಕೀಯಕ್ಕೆ ಬರಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದ ರಾಕಿಂಗ್ ಸ್ಟಾರ್

ಬಳ್ಳಾರಿ: ರಾಕಿಂಗ್ ಸ್ಟಾರ್ ಯಶ್ ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ನಡೆದ ಮಂಗಳಕರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಎಸ್ಎಸ್ ರಾಜಮೌಳಿ ಅವರು ತಮ್ಮ ಪತ್ನಿ ರಮಾ ಅವರೊಂದಿಗೆ ಭಾಗಿಯಾಗಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವೇಳೆ ನಟ ಯಶ್ ಹಳದಿ ಕುರ್ತಾ-ಪೈಜಾಮಾ, ತಲೆಗೆ ಓಂ ಬರಹ ವಿನ್ಯಾಸದ ಶಾಲು ಧರಿಸಿ ಆಗಮಿಸಿ ಅಭಿಮಾನಿಗಳಿಗೆ ಖುಷಿ ನೀಡಿದರು.

ನಟ ಯಶ್‌ ಹಾಗೂ ನಿರ್ದೇಶಕ ರಾಮಮೌಳಿ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಳನ್ನು ಭೇಟಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅವರೊಂದಿಗೆ ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಯಶ್ ಬೆಂಗಾವಲು ವಾಹನ ಅಭಿಮಾನಿಯೊಬ್ಬನ ಕಾಲಿನ ಮೇಲೆ ಹರಿದು ಗಾಯಗೊಂಡ ಘಟನೆ ಕೂಡ ನಡೆಯಿತು.

ರಾಜಕೀಯಕ್ಕೆ ಬರಲ್ಲ: ಕಳೆದ ಬಾರಿ ಲೋಕಸಭೆ ಚುನಾವನೆಯಲ್ಲಿ ಯಶ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಪರ ಸಕ್ರಿಯವಾಗಿ ನಟ ದರ್ಶನ್ ಜೊತೆಗೆ ಪ್ರಚಾರ ನಡೆಸಿದ್ದರು. ಈ ಬಾರಿಯೂ ಯಶ್ ಚುನಾವಣೆ ಪ್ರಚಾರಕ್ಕೆ ಬರುತ್ತಾರಾ ಎಂದು ಇತ್ತೀಚೆಗೆ ಸುಮಲತಾಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದರು. ಆಗ ನಾನಿನ್ನೂ ಯಶ್ ಜೊತೆ ಮಾತುಕತೆ ನಡೆಸಿಲ್ಲ ಎಂದು ಸುಮಲತಾ ಹೇಳಿದ್ದರು.

ಇದೀಗ ಬಳ್ಳಾರಿಗೆ ಭೇಟಿ ನೀಡಿದ್ದ ಯಶ್ ಗೆ ಮಾಧ‍್ಯಮಗಳು ಮತ್ತೆ ರಾಜಕೀಯ ಎಂಟ್ರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತುಸು ಬೇಸರ ಮತ್ತು ಕೋಪದಿಂದಲೇ ಉತ್ತರಿಸಿದ ನಟ ಯಶ್ ಈಗ ಆ ವಿಷಯ ಬೇಕಾ ಎಂದು ಕೇಳಿದರು. ಮಾಧ್ಯಮ ಪ್ರತಿನಿಧಿಗಳು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷದ ಪರ ಕೆಲಸ ಮಾಡುತ್ತೀರಿ ಎಂದು ಕೇಳಿದಾಗ, ನಾನು ರಾಜಕೀಯಕ್ಕೆ ಬರಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದಲ್ಲಿ ಈ ಬಾರಿ ತೊಡಗಿಸಿಕೊಳ್ಳುವುದಿಲ್ಲ ಎಂದು ಸಂದೇಶ ನೀಡಿದ್ದಾರೆ.

ಸಹಜವಾಗಿರೋದನ್ನೇ ಸಿಂಪ್ಲಿಸಿಟಿ ಅಂತಾರೆ: ಇತ್ತೀಚೆಗೆ ಯಶ್ ಕುಟುಂಬ ಜೊತೆ ಭಟ್ಕಳದ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ಅಲ್ಲಿ ಸಣ್ಣ ಅಂಗಡಿಯೊಂದರಿಂದ ಚಾಕಲೇಟ್, ಕ್ಯಾಂಡಿ ಖರೀದಿಸಿದ ಫೋಟೋ ಬಹಳ ವೈರಲ್ ಆಗಿತ್ತು. ನೀವು ಬಹಳ ಸಿಂಪಲ್ ಎಂದು ಜನ ಮಾತಾಡಿಕೊಳ್ತಿದ್ದಾರಲ್ಲ ಎಂದು ಕೇಳಿದಾಗ, ಏನ್ರಿ ಸಿಂಪಲ್, ನಾವು 15 ವರ್ಷದಿಂದ ಅಲ್ಲಿಗೆ ಹೋಗುತ್ತಿದ್ದೇವೆ, ಅದೇ ಅಂಗಡಿಗೆ 10-12 ವರ್ಷದಿಂದ ಹೋಗುತ್ತಿದ್ದೇವೆ. ಫೋಟೋ ಆಚೆ ಬಂದಿದೆ. ನನ್ನ ಮಕ್ಕಳು ತಿಂಡಿ ಕೇಳಿದ್ರು, ಅಂಗಡಿಯಲ್ಲಿ ತಿಂಡಿ ಕೊಡಿಸಿದೆ ಅಷ್ಟೆ ಎಂದರು.

ಲಕ್ಷುರಿ ಕಾರಲ್ಲಿ, ಫ್ಲೈಟಲ್ಲಿ ಓಡಾಡುತ್ತೇವೆ, ಇನ್ನೇನು ಸಿಂಪ್ಲಿಸಿಟಿ, ನಾರ್ಮಲ್ ಆಗಿ ಲೈಫ್ ಲೀಡ್ ಮಾಡೋದನ್ನೇ ಜನ ಸಿಂಪ್ಲಿಸಿಟಿ ಅಂತ ಕರೀತಾರೆ ಈಗ, ಅದ್ಕೆ ಏನು ಹೇಳೋಣ, ನಾವು ಬೆಳೆದಿರೋದೆ ಹಾಗೆ, ಅದ್ರಲ್ಲಿ ಏನು ಸಿಂಪ್ಲಿಸಿಟಿ ಇದೆ,ಫೈವ್ ಸ್ಟಾರ್ ಹೊಟೇಲ್ ಗೆ ಹೋಗ್ತೀವಿ, ಮನುಷ್ಯ ಎಲ್ಲಾ ಥರದ ಜೀವನ ನೋಡ್ಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT