ಮಂಗ್ಲಿ
ಮಂಗ್ಲಿ 
ಸಿನಿಮಾ ಸುದ್ದಿ

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ 'ಮಂಗ್ಲಿ'ಗೆ ಗಾಯ!

Nagaraja AB

ಹೈದರಾಬಾದ್: ಮಾಂಗ್ಲಿ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ಗಾಯಕಿ ಸತ್ಯವತಿ ರಾಥೋಡ್ ಅವರು ಭಾನುವಾರ ರಾತ್ರಿ ಶಂಶಾಬಾದ್‌ನ ತೊಂಡಪಲ್ಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಮಂಗ್ಲಿ ಅವರು ಇಬ್ಬರು ಸಹಚರರೊಂದಿಗೆ ಶಂಶಾಬಾದ್‌ನಿಂದ ನಗರಕ್ಕೆ ಹಿಂತಿರುಗುತ್ತಿದ್ದಾಗ ತೊಂಡಪಲ್ಲಿ ರಸ್ತೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಭಾರಿ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೂ ಗಾಯಗಳಾಗಿವೆ. ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕಲ್ಪಿಸಿದ್ದಾರೆ. ಆದರೂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ರಾಬರ್ಟ್ ಚಿತ್ರದ ''ಕಣ್ಣು ಹೊಡೆಯೋಕೆ'' ಸಾಂಗ್ ನಿಂದ ಕನ್ನಡ ನಾಡಿನ ಜನರಿಗೆ ಚಿರಪರಿಚಿತರಾಗಿರುವ ಮಂಗ್ಲಿ ಅವರು, ಇತ್ತೀಚಿಗೆ ತೆರೆಕಂಡು ಭರ್ಜರಿ ಯಶಸ್ಸು ಕಂಡ ಕಾಟೇರ ಚಿತ್ರದ ''ಪಸಂದಗವ್ನೆ ಹಾಡಿಗೂ ಧ್ವನಿಯಾಗಿದ್ದಾರೆ. ಈ ಸಾಂಗ್ ಕೂಡಾ ಸೂಪರ್ ಹಿಟ್ ಆಗಿತ್ತು. ಇವಷ್ಟೇ ಅಲ್ಲದೇ, ಹಲವಾರು ಕನ್ನಡ ಚಿತ್ರಗೀತೆಗಳಿಗೆ ಮಂಗ್ಲಿ ಅವರು ಹಿನ್ನೆಲೆ ಗಾಯಕರಾಗಿ ಕೆಲಸ ನಿರ್ವಹಿಸಿದ್ದಾರೆ.

SCROLL FOR NEXT