ಬ್ಲಿಂಕ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಹಾಫ್ ಸೆಂಚುರಿ ಬಾರಿಸಿದ 'ಬ್ಲಿಂಕ್': ಒಟಿಟಿಯಲ್ಲೂ ಚಿತ್ರಕ್ಕೆ ಮೆಚ್ಚುಗೆ

ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್‌ ಟ್ರಾವೆಲ್‌ ಸಿನಿಮಾ “ಬ್ಲಿಂಕ್‌” ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದ್ದು, ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಬೆಂಗಳೂರು: ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್‌ ಟ್ರಾವೆಲ್‌ ಸಿನಿಮಾ “ಬ್ಲಿಂಕ್‌” ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದ್ದು, ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಅಮೇಜಾನ್ ಪ್ರೈಮ್ ಒಟಿಟಿಗೆ ಎಂಟ್ರಿ ಕೊಟ್ಟ 4 ದಿನದಲ್ಲಿಯೇ ಚಿತ್ರವು 10 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಸಿನಿಮಾದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರು ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎಂಬ ಅಪವಾದದ ನಡುವೆ ʻಬ್ಲಿಂಕ್ʼ ಆಫ್ ಸೆಂಚುರಿ ಬಾರಿಸಿರುವುದು ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಈ ಕ್ಷಣಗಳನ್ನು ಚಿತ್ರತಂಡ ಮಾಧ್ಯಮದವರೊಟ್ಟಿಗೆ ಹಂಚಿಕೊಂಡಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರವಿಚಂದ್ರ ಎ ಜೆ ಮಾತನಾಡಿ, ಸಿನಿಮಾ ಈ ಲೆವೆಲ್‌ಗೆ ಆಗುತ್ತದೆ ಎಂದುಕೊಂಡಿರಲಿಲ್ಲ. ಮನೆಯವರು ಖುಷಿಯಾಗಿದ್ದಾರೆ. ತಂಡ ಖುಷಿಯಾಗಬೇಕು ಎಂದರೆ ಅಂದುಕೊಂಡಿರುವ ದುಡ್ಡು ಬರಬೇಕು. ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ. ಅವರಿಗೆಲ್ಲಾ ಮುಂದೆ ಒಳ್ಳೆ ಸಿನಿ ಕರಿಯರ್ ಸಿಗಬೇಕು. ಆದಷ್ಟು ಬೇಗ ತೆಲುಗಿಗೂ ಡಬ್ ಮಾಡಿಸುತ್ತೇವೆ. ತಮಿಳು ಡಬ್ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಿನಿಮಾಗೆ ಭಾಷೆಯ ಎಲ್ಲೆ ಇಲ್ಲ ಎಂದು ಹೇಳಿದರು.

ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ʻಬಹಳ ಖುಷಿಯಾಗುತ್ತಿದೆ. ಎಷ್ಟೋ ವರ್ಷಗಳ ನಂತರ ಹೊಸಬರ ತಂಡ 50 ದಿನಗಳ ಕಾಲ ಸಿನಿಮಾವನ್ನು ಥಿಯೇಟರ್‌ನಲ್ಲಿ ಉಳಿಸಿಕೊಂಡಿದ್ದೇವೆ. ನಮಗೆ ನಂಬಲು ಆಗುತ್ತಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಬಹಳಷ್ಟು ಹೋರಾಟ ಮಾಡಿದ್ದೆವು. ನಾವು ಜನರನ್ನು ಕರೆದುಕೊಂಡು ಥಿಯೇಟರ್ ತುಂಬಿಸುತ್ತಿದ್ದೇವೆ ಎಂದು ಒಂದಷ್ಟು ಜನ ಮಾತಾನಾಡಿಕೊಂಡರು. ಹಾಗೇ ಹೇಳಿದವರಿಗೆ ಉತ್ತರ 50 ದಿನ. ಸಿನಿಮಾ ಅಷ್ಟು ಕೋಟಿ ಮಾಡಬೇಕು. ಇಷ್ಟು ಕೋಟಿ ಮಾಡಬೇಕು ಎನ್ನುವುದು ನನ್ನ ತಲೆಯಲ್ಲಿ ಇರಲಿಲ್ಲ. ನಿರ್ಮಾಪಕರು ಗೆಲ್ಲಬೇಕು. ನಿಲ್ಲಬೇಕು ಅನ್ನುವುದಷ್ಟೇ ಇತ್ತು. ಹಾಕಿದ ಬಂಡವಾಳ ವಾಪಸ್ ಬರುವುದರಲ್ಲಿದೆ. ಹೀಗಾಗಿ ಖುಷಿ ಇದೆ ಎಂದು ಭಾವಿಸಿದ್ದೇನೆ. ಈ ಗೆಲುವಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.

ಶ್ರೀನಿಧಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಜನರ ಉತ್ತಮ ಪ್ರತಿಕ್ರಿಯೆಯಿಂದ ಸಂತೋಶವಾಗುತ್ತಿದೆ. ಇದು ಚಿತ್ರದ ಯಶಸ್ಸಿಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.

‘ಬ್ಲಿಂಕ್’ ಚಿತ್ರಕ್ಕೆ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದು, ರವಿಚಂದ್ರ ಎ.ಜೆ. ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದರೆ, ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!