ದರ್ಶನ್ ಮತ್ತು ದಿನಕರ್ ತೂಗುದೀಪ  
ಸಿನಿಮಾ ಸುದ್ದಿ

'ನವಗ್ರಹ' ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ ನನ್ನ ಮೊದಲ ಆಯ್ಕೆಯಾಗಿರಲಿಲ್ಲ; ಪೊಲೀಸ್ ಪಾತ್ರಕ್ಕೆ ಅರ್ಜುನ್ ಸರ್ಜಾ ಮನವೊಲಿಸಲಾಗಲಿಲ್ಲ: ದಿನಕರ್

ಚಿತ್ರದ ಮರು-ಬಿಡುಗಡೆಗೆ ತಮ್ಮ ಕುಟುಂಬದಿಂದ ವಿಶೇಷವಾಗಿ ದರ್ಶನ್ ಅವರ ಮಗ ವಿನೀಶ್ ಅವರಿಂದ ಪ್ರೋತ್ಸಾಹ ಸಿಕ್ಕಿತು. ವಿನೀಶ್ ಅವರು ಟಿವಿಯಲ್ಲಿ ಸಿನಿಮಾ ನೋಡಿ ತುಂಬಾ ಇಷ್ಟಪಡುತ್ತಿದ್ದರು.

ದರ್ಶನ್ ಅಭಿನಯದ ನವಗ್ರಹ ಚಿತ್ರ 16 ವರ್ಷಗಳ ನಂತರ ಮರು ಬಿಡುಗಡೆಗೆ ಸಿದ್ಧವಾಗಿದೆ. 2008 ರಲ್ಲಿ ತೆರೆ ಕಂಡು ಹಿಟ್ ಆಗಿದ್ದ ಸಿನಿಮಾವನ್ನು ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಿಸಿದ್ದರು. ಈ ಸಿನಿಮಾ ಇಂದಿಗೂ ಕೂಡ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನಪಡೆದಿದೆ.

ಇದೇ ಮೊದಲ ಬಾರಿಗೆ ನವಗ್ರಹ ರೀ-ರಿಲೀಸ್ ಆಗುತ್ತಿದೆ, ಈ ಸಂಬಂಧ ನಿರ್ದೇಶಕ ದಿನಕರ್ ತೂಗುದೀಪ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. "ಇದು ತೂಗುದೀಪ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗಿರುವುದರಿಂದ ಇದು ಮಹತ್ವದ್ದಾಗಿದೆ, ನಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ನನ್ನ ಸಹೋದರ ದರ್ಶನ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ ಎಂದಿದ್ದಾರೆ.

ಚಿತ್ರದ ಮರು-ಬಿಡುಗಡೆಗೆ ತಮ್ಮ ಕುಟುಂಬದಿಂದ ವಿಶೇಷವಾಗಿ ದರ್ಶನ್ ಅವರ ಮಗ ವಿನೀಶ್ ಅವರಿಂದ ಪ್ರೋತ್ಸಾಹ ಸಿಕ್ಕಿತು. ವಿನೀಶ್ ಅವರು ಟಿವಿಯಲ್ಲಿ ಸಿನಿಮಾ ನೋಡಿ ತುಂಬಾ ಇಷ್ಟಪಡುತ್ತಿದ್ದರು. ಇಂದಿನ ಯುವ ಪ್ರೇಕ್ಷಕರಿಗೆ ಈ ಸಿನಿಮಾ ಆಸಕ್ತಿದಾಯಕವಾಗಿದೆ, ನನ್ನ ಸ್ನೇಹಿತರು ವೀಕ್ಷಿಸಲು ಇದು ಉತ್ತಮ ಸಿನಿಮಾವಾಗಿರುತ್ತದೆ ಎಂದು ತಿಳಿಸಿದ್ದಾಗಿ ದಿನಕರ್ ಹೇಳಿದ್ದಾರೆ. ಈ ಚಿತ್ರವನ್ನು 2008 ರಲ್ಲಿ ಮಾಡಲ್ಪಟ್ಟಿದ್ದರೂ ಸಹ, ಇಂದಿನ ಪೀಳಿಗೆಗೆ ಸಂಪರ್ಕ ಕಲ್ಪಿಸುವ ವಿಷಯಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಚಿತ್ರವನ್ನು ಮರು ಬಿಡುಗಡೆ ಮಾಡುವುರಿಂದ ಅಂದು ಕಂಡ ಅದ್ಭುತ ಯಶಸ್ಸನ್ನು ಪುನರಾವರ್ತಿಸುತ್ತದೆ ಎಂಬ ನಿರೀಕ್ಷೆಯಿಲ್ಲ, ಆದರೆ ಹೊಸ ಪ್ರೇಕ್ಷಕರು ಅದನ್ನು ಮೆಚ್ಚುತ್ತಾರೆ ಎಂದು ದಿನಕರ್ ತಿಳಿಸಿದ್ದಾರೆ. ನಾನು ಅನೇಕ ಯುವಕರನ್ನು ಭೇಟಿಯಾಗಿದ್ದೇನೆ, ನವಗ್ರಹವು ಮೊದಲ ಬಾರಿಗೆ ಬಿಡುಗಡೆಯಾದಾಗ ಅವರು ಇನ್ನೂ ಜನಿಸಿರಲಿಲ್ಲ, ಆದರೆ ಆ ಸಿನಿಮಾವನ್ನು ಅವರೆಲ್ಲಾ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಅವರಿಗೆ ಸಿನಿಮಾ ಇಷ್ಟವಾಗಿದೆ. ಹೀಗಾಗಿ ಕೆಲವರು ಸೀಕ್ವೇಲ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.

ತರುಣ್ ಕಿಶೋರ್ ಸುಧೀರ್ ಮತ್ತು ಸೃಜನ್ ಲೋಕೇಶ್ ಸೇರಿದಂತೆ ಅನೇಕ ನಟರೊಂದಿಗೆ ನಿಕಟ ಬಾಂಧವ್ಯವನ್ನು ಹಂಚಿಕೊಂಡ ದಿನಕರ್ ಅವರಿಗೆ ಚಿತ್ರಕ್ಕಾಗಿ ಕಾಸ್ಟಿಂಗ್ ಸುಲಭವಾಗಿತ್ತು. “ಜಗ್ಗು ಪಾತ್ರಕ್ಕೆ ದರ್ಶನ್ ನನ್ನ ಮೊದಲ ಆಯ್ಕೆಯಲ್ಲ, ಆಪಾತ್ರವನ್ನು ವಿನೋದ್ ಪ್ರಭಾಕರ್ ಮಾಡಬೇಕೆಂದು ನಾನು ಬಯಸಿದ್ದೆ. ಆದರೆ, ನಾನು ವಿನೋದ್‌ಗೆ ಕಥೆಯನ್ನು ಹೇಳಿದಾಗ, ಅವರು ಅತಿಥಿ ಪಾತ್ರ ಅಥವಾ ಪೊಲೀಸ್ ಅಧಿಕಾರಿಗಿಂತ ನೆಗೆಟಿವ್ ಪಾತ್ರವನ್ನು ಮಾಡಲು ಬಯಸಿದ್ದರು. ಅವರ ಉತ್ಸಾಹ ಎಲ್ಲವನ್ನೂ ಬದಲಾಯಿಸಿತು, ಮತ್ತು ದರ್ಶನ್ ಜಗ್ಗು ಆದರು, ಮತ್ತು ವಿನೋದ್ ಟೋನಿಯಾಗಿ ಬಂದರು ಎಂದು ದಿನಕರ್ ಬಹಿರಂಗಪಡಿಸಿದರು.

ಸಿನಿಮಾದ ಪೊಲೀಸ್ ಪಾತ್ರಕ್ಕಾಗಿ ಅರ್ಜುನ್ ಸರ್ಜಾ ಅವರನ್ನು ಆಯ್ಕೆ ಮಾಡಲು ಬಯಸಿದ್ದರು. ಪಾತ್ರದ ಸಂಬಂಧ ಚರ್ಚಿಸಲು ಚೆನ್ನೈಗೆ ತೆರಳಿದ್ದೆ. "ದುರದೃಷ್ಟವಶಾತ್, ನಾನು ಅವರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ಸೌರವ್ ಆ ಪಾತ್ರವನ್ನು ನಿರ್ವಹಿಸಿದರು ಎಂದು ವಿವರಿಸಿದರು. ನವಗ್ರಹದಲ್ಲಿ ಶರ್ಮಿಳಾ ಮಾಂಡ್ರೆ, ಗಿರಿ ದಿನೇಶ್, ಧರ್ಮ ಕೀರ್ತಿರಾಜ್, ವರ್ಷ, ಕೃತಿ ಪ್ರತಾಪ್ ಸೇರಿದಂತೆ ಪ್ರತಿಭಾವಂತ ಮೇಳದ ತಾರಾಗಣವಿದೆ. ಚಿತ್ರಕ್ಕೆ ಎವಿ ಚಿಂತನ್ ಅವರ ಸಂಭಾಷಣೆ, ಎವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣ ಮತ್ತು ವಿ ಹರಿಕೃಷ್ಣ ಅವರ ಸಂಗೀತವಿದೆ.

ನವಗ್ರಹ ಫ್ರಾಂಚೈಸ್ ಮೂಲಕ ತಮ್ಮ ಹೋಮ್ ಬ್ಯಾನರ್ ಅನ್ನು ಪುನರುಜ್ಜೀವನಗೊಳಿಸುವ ಆಸೆಯಿದೆ. “ನವಗ್ರಹ ಚಿತ್ರ ಮಾಡುವಾಗ ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅಂದು ಯಾವುದನ್ನೂ ಪ್ಲಾನ್ ಮಾಡಿರಲಿಲ್ಲ ಮತ್ತು ಈಗ ಕೂಡ ಅದೇ ರೀತಿ ಆಗಲಿದೆ. ನವಗ್ರಹ 2 ಸಿನಿಮಾ ಬರಲಿದೆ ಎಂದು ನಾನು ನಂಬುತ್ತೇನೆ ಎಂದು ದಿನಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT