ಕನ್ನಡದ ನಟಿ ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಇದೆ. ನಟನೆಗೂ ಸೈ, ಡ್ಯಾನ್ಸ್‌ಗೂ ಜೈ ಎನ್ನುತ್ತಾ ಚಿತ್ರರಂಗದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇದೀಗ ‘ಪುಷ್ಪ 2’ ಸಿನಿಮಾದಲ್ಲಿ ಶ್ರೀಲೀಲಾ ಸೊಂಟ ಬಳುಕಿಸಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ನಟಿಯ ಅಫಿಷಿಯಲ್ ಪೋಸ್ಟರ್ ರಿಲೀಸ್ ಆಗಿದೆ.
ಪುಷ್ಪ ಮೊದಲ ಅಧ್ಯಾಯದಲ್ಲಿ ಹೂ ಅಂತಾವಾ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಹಾಕಿತ್ತು. ಸಮಂತಾ ಹಾಗೂ ಅಲ್ಲು ಅರ್ಜುನ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದ ಸಾಂಗ್ ಸಖತ್ ಸೌಂಡ್ ಮಾಡಿತ್ತು. ಡಿಎಸ್ ಪಿ ಮ್ಯೂಸಿಕ್, ಸ್ಯಾಮ್ ಕುಣಿತ ಎಲ್ಲವೂ ಮೋಡಿ ಮಾಡಿತ್ತು. ಈಗ ಪುಷ್ಪ ಸೀಕ್ವೆಲ್ ನಲ್ಲಿ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಹಾಗೂ ಐಕಾನ್ ಸ್ಟಾರ್ ಗಣೇಶ್ ಆಚಾರ್ಯ ಕೊರಿಯೋಗ್ರಫಿಗೆ ಸಖ್ಖತ್ ಹೆಜ್ಜೆ ಹಾಕಿದ್ದಾರೆ.
ನಟಿ ಶ್ರೀಲೀಲಾ ಅಭಿನಯದ ಜೊತೆಗೆ ನೃತ್ಯದಲ್ಲಿಯೂ ಪ್ರವೀಣೆ. ಆಕೆಯ ಡ್ಯಾನ್ಸ್ ಇಷ್ಟಪಡುವ ಒಂದು ವರ್ಗವಿದೆ. ಇನ್ನು ಅಲ್ಲು ಅರ್ಜುನ್ ಡ್ಯಾನ್ಸ್ ಬಗ್ಗೆ ಹೇಳೋದೇ ಬೇಡ. ಡ್ಯಾನ್ಸಿಂಗ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಇಬ್ಬರು ಜಬರ್ದಸ್ತ್ ಆಗಿ ಪುಷ್ಪ ಸೀಕ್ವೆಲ್ ವಿಶೇಷ ಹಾಡಿಗೆ ಕಾಲು ಕುಣಿಸಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ 2 ಬಹಳ ಅದ್ಧೂರಿಯಾಗಿ ತಯಾರಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಫಹಾದ್ ಫಾಸಿಲ್, ಧನಂಜಯ್, ಅನಸೂಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ಹೆಚ್ಚು ಕಡಿಮೆ ಅದೇ ತಂಡ ಸೀಕ್ವೆಲ್‌ನಲ್ಲಿ ಮುಂದುವರೆದಿದೆ. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮತ್ತೊಮ್ಮೆ ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗುತ್ತಿದೆ. ನಿನ್ನೆಯಷ್ಟೇ ಶ್ರೀಲೀಲಾ ‘ಪುಷ್ಪ 2’ ಸೆಟ್‌ನಲ್ಲಿರುವ ಫೋಟೋ ಲೀಕ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಸಿನಿಮಾದ ಮೊದಲ ಭಾಗದಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಇದೀಗ ‘ಪುಷ್ಪ 2’ನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿರೋದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಈ ಹಿಂದೆ ಸಮಂತಾ ಮಾಡಿದ್ದ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿತ್ತು. ಹಾಗಾಗಿ ಸಮಂತಾಗೆ ಕನ್ನಡದ ನಟಿ ಠಕ್ಕರ್ ಕೊಡುತ್ತಾರಾ? ಕಾಯಬೇಕಿದೆ.
ಶ್ರೀಲೀಲಾ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸುವ ಮೊದಲು, ಕನ್ನಡದಲ್ಲಿ ಕಿಸ್ ಮತ್ತು ಬೈ 2 ಲವ್‌ನಂತಹ ಚಿತ್ರಗಳೊಂದಿಗೆ ಅವರ ಸಿನಿಪಯಣ ಪ್ರಾರಂಭವಾಯಿತು, ರವಿತೇಜ, ನಂದಮೂರಿ ಬಾಲಕೃಷ್ಣ, ಮಹೇಶ್ ಬಾಬು, ಮತ್ತು ನಿತಿನ್‌ರಂತಹ ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ. ಪುಷ್ಪಾ 2 ಟ್ರೇಲರ್ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆಯಿದೆ. ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ ಪುಷ್ಪ 2: ದಿ ರೂಲ್ ಸಿನಿಾದಲ್ಲಿ ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಲಲಿದ್ದಾರೆ.