ಯುಐ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಉಪೇಂದ್ರ ನಿರ್ದೇಶನದ 'ಯುಐ' ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ಪ್ರೊಡಕ್ಷನ್ಸ್ ಪಾಲು!

ಚಿತ್ರದ ಇತರೆ ಭಾಷೆಯ ಹಂಚಿಕೆ ಹಕ್ಕುಗಳು ಈಗಾಗ್ಲೇ ಬಹುಕೋಟಿಗೆ ಸೇಲ್ ಆಗಿದೆ, ಮಲಯಾಳಂ ಹಂಚಿಕೆ ಹಕ್ಕನ್ನ ಸಿ.ಜೆ ರಾಯ್ ಪಡೆದುಕೊಂಡ್ರೆ, ತಮಿಳಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್‌ ಫಿಲಮ್ಸ್‌ ಶನ್ ಹಂಚಿಕೆಯನ್ನ ತಮ್ಮದಾಗಿಸಿಕೊಂಡಿದೆ.

ಉಪೇಂದ್ರ ಅಭಿನಯದ UI, ಡಿಸೆಂಬರ್ 20 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಹೀಗಾಗಿ ನಿರ್ದೇಶಕರು ವಿತರಣಾ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿದ್ದಾರೆ, ಮುಂಬರುವ ತಿಂಗಳಲ್ಲಿ ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕೆಡಿ, ಟಾಕ್ಸಿಕ್ , ಮತ್ತು ವಿಜಯ್ ಅವರ ಥಲಪತಿ 69 ನಂತಹ ಸಿನಿಮಾ ನಿರ್ಮಾಣ ಮಾಡಿರುವ ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ವತಿಯಿಂದ ಕರ್ನಾಟಕದಲ್ಲಿ ಯುಐ ಸಿನಿಮಾ ವಿತರಣೆ ನಿರ್ವಹಿಸಲಿದ್ದಾರೆ. UI ತಂಡದೊಂದಿಗೆ ಸಹಕರಿಸಿರುವ ವಿತರಕರು ಸಾಧ್ಯವಾದಷ್ಟು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಿದ್ದಾರೆ .

ಚಿತ್ರದ ಇತರೆ ಭಾಷೆಯ ಹಂಚಿಕೆ ಹಕ್ಕುಗಳು ಈಗಾಗ್ಲೇ ಬಹುಕೋಟಿಗೆ ಸೇಲ್ ಆಗಿದೆ, ಮಲಯಾಳಂ ಹಂಚಿಕೆ ಹಕ್ಕನ್ನ ಸಿ.ಜೆ ರಾಯ್ ಪಡೆದುಕೊಂಡ್ರೆ, ತಮಿಳಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್‌ ಫಿಲಮ್ಸ್‌ ಹಂಚಿಕೆಯನ್ನ ತಮ್ಮದಾಗಿಸಿಕೊಂಡಿದೆ. ತೆಲುಗಿನಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ಹಂಚಿಕೆ ಹಕ್ಕುಪಡೆದುಕೊಂಡಿದೆ. ಹಿಂದಿ ಭಾಷೆಯಲ್ಲೂ ಹಂಚಿಕೆಯ ಹಕ್ಕು ಮಾರಾಟವಾಗಿದ್ದು ನಾಳೆ (ನ.25) ಘೋಷಣೆಯಾಗಲಿದೆ. 2015ರ ನಂತರ ಉಪೇಂದ್ರ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ರಿಯಲ್ ಸ್ಟಾರ್ ಉಪ್ಪಿಅವರ ಮೇಲಿನ ಕ್ರೇಜ್ ಎಂದಿಗೂ ಕಡಿಮೆ ಆಗುವುದಿಲ್ಲ. ಅದರಲ್ಲೂ ಈ ಬಾರಿ ಟೆಕ್ನಾಲಜಿಗಳನ್ನು ಬಳಸಿಕೊಂಡು ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಈ ಚಿತ್ರದ ನಿರ್ದೇಶಕರಷ್ಟೇ ಅಲ್ಲ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಲಹರಿ ಫಿಲಂಸ್‌ನ ಜಿ ಮನೋಹರ್ ನಾಯ್ಡು ಮತ್ತು ವೀನಸ್ ಎಂಟರ್‌ಟೈನರ್ಸ್‌ನ ಕೆಪಿ ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಉಪೇಂದ್ರ ಅವರೊಂದಿಗೆ, UI-ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಭಾರೀ ಕ್ರೇಜ್ ಸೃಷ್ಟಿಸಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ, ರವಿಶಂಕರ್ ಮತ್ತು ಸಾಧು ಕೋಕಿಲಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT