ನಟ ಸತೀಶ್ ನೀನಾಸಂ ತಮ್ಮ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಮುಂಬರುವ ಸಸ್ಪೆನ್ಸ್ ಥ್ರಿಲ್ಲರ್ ವೃತ್ತವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ. ‘ವೃತ್ತ’ ಹೆಸರಿನ ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾವನ್ನು ಸಹ ಹೊಸಬರ ತಂಡವೇ ಕಟ್ಟಿದೆ. ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಹೊಸಬರ ಪ್ರತಿಭೆ ಮೇಲೆ ನಂಬಿಕೆ ಇಟ್ಟು ನಟ ಸತೀಶ್ ನೀನಾಸಂ ಅವರು ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದಿದ್ದಾರೆ.
‘ವೃತ್ತ’ ಸಿನಿಮಾವನ್ನು ಮುಗಿಸಿರುವ ಯುವ ತಂಡ ಮಾಡಿ ಟೀಸರ್ ಸಹ ಬಿಡುಗಡೆ ಮಾಡಿದ್ದಾರೆ. ಸಿನಿಮಾ ತಂಡದ ಮೇಲೆ ನಂಬಿಕೆ ಇರಿಸಿರುವ ನಟ ನೀನಾಸಂ ಸತೀಶ್ ‘ವೃತ್ತ’ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ. ಸಿನಿಮಾ ಟೀಸರ್, ಟ್ರೇಲರ್ ನೋಡಿ ಮೆಚ್ಚಿಕೊಂಡಿರುವ ನೀನಾಸಂ ಸತೀಶ್, ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೂ ಬಂದಿದ್ದ ಸತೀಶ್, ಹೊಸಬರ ತಂಡವಾಗಿದ್ದರೂ ಸಹ ಚೆನ್ನಾಗಿಯೇ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ ಎಂದರು. ಟೀಸರ್ ಅನ್ನು ಸಹ ಬಹುವಾಗಿ ಮೆಚ್ಚಿಕೊಂಡರು.
‘ವೃತ್ತ’ ಸಿನಿಮಾವನ್ನು ಲಿಖಿಕ್ ಕುಮಾರ್ ಎಸ್ ನಿರ್ದೇಶನ ಮಾಡಲಿದ್ದಾರೆ. ಲಕ್ಷ್ಯ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಟಿ ಶಿವಕುಮಾರ್ ‘ವೃತ್ತ’ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಒಂದು ಪಾತ್ರದ ಸುತ್ತ ಸುತ್ತುವ ಕತೆಯಾಗಿದೆ. ಸಿನಿಮಾಕ್ಕೆ ಸಿಂಕ್ರೋನೈಸ್ ಮಾಡಿದ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಯೋಗೀಶ್ ಗೌಡ ಅವರು ಈ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ಶಂಕರ್ ರಾಮನ್ ಅವರ ಸಂಭಾಷಣೆ, ಗೌತಮ್ ಕೃಷ್ಣ ಅವರ ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್ ಎಸ್ ಅವರ ಸಂಗೀತ ಚಿತ್ರಕ್ಕಿದೆ.
ಸತೀಶ್ ನೀನಾಸಂ ಅವರ ಬೆಂಬಲಕ್ಕೆ ನಿರ್ದೇಶಕ ಲಿಕಿತ್ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ, ಚಿತ್ರದ ಬಿಡುಗಡೆಗೆ ತಂಡದ ಸಿದ್ಧತೆಯನ್ನು ಸೂಚಿಸಿದ್ದಾರೆ. ಈವೆಂಟ್‌ನಲ್ಲಿ, ಸತೀಶ್, "ನಾನು ಈ ಯೋಜನೆಯನ್ನು ಬೆಂಬಲಿಸುತ್ತಿದ್ದೇನೆ ಏಕೆಂದರೆ ಇದು ಹೊಸಬರನ್ನು ಒಳಗೊಂಡಿಲ್ಲ, ಆದರೆ ಇದು ನಿಜವಾಗಿಯೂ ಉತ್ತಮವಾಗಿದೆ" ಎಂದು ಹೇಳಿದರು. ಸದ್ಯದಲ್ಲೇ ಚಿತ್ರದ ಟ್ರೇಲರ್ ಲಾಂಚ್ ಮಾಡಲು ಚಿತ್ರತಂಡ ತಯಾರಿ ನಡೆಸಿದ್ದು, ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ.