ಮಾಲಾಶ್ರೀ ಮತ್ತು ಭವ್ಯಾ 
ಸಿನಿಮಾ ಸುದ್ದಿ

'ತಾಯಿನೆ ದೇವರಾ' ಸಿನಿಮಾ ಮೂಲಕ ಮತ್ತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಾಲಾಶ್ರೀ

ಕಳೆದ ಎಂಟು ವರ್ಷದಿಂದ ಉದ್ಯಮದಿಂದ ದೂರ ಇದ್ದೆ. ಈಗ ಮತ್ತೆ ಸಿನಿಮಾಕ್ಕೆ ರಚನೆ,ಚಿತ್ರಕಥೆ ಬರೆದು ಶ್ರೀ ಸಾಯಿಶಕ್ತಿ ಸಿನಿ ಕಂಬೈನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದೇನೆ.

ಪ್ರಪಂಚದಲ್ಲಿ ತಾಯಿಯನ್ನು ದೇವರಿಗೆ ಹೋಲಿಸುತ್ತಾರೆ. ಅಂತಹುದೇ ಅಂಶಗಳನ್ನಿಟ್ಟುಕೊಂಡು 'ತಾಯಿನೇ ದೇವರ?’ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ ಇತ್ತೀಚಿಗೆ ಮುಹೂರ್ತ ಸಮಾರಂಭ ನಡೆಯಿತು.

ಇನ್ನು ಚಿತ್ರದ ಬಗ್ಗೆ ಮಾತನಾಡಿದ ಸಾಯಿ ಸತೀಶ್ ತೋಟಯ್ಯ, ಸಿನಿಮಾರಂಗದಲ್ಲಿ 16 ವರ್ಷ ಅನುಭವ ಹೊಂದಿದ್ದೇನೆ. ಕಳೆದ ಎಂಟು ವರ್ಷದಿಂದ ಉದ್ಯಮದಿಂದ ದೂರ ಇದ್ದೆ. ಈಗ ಮತ್ತೆ ಸಿನಿಮಾಕ್ಕೆ ರಚನೆ,ಚಿತ್ರಕಥೆ ಬರೆದು ಶ್ರೀ ಸಾಯಿಶಕ್ತಿ ಸಿನಿ ಕಂಬೈನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದೇನೆ. ಮನೆಯಲ್ಲಿ ಅಮ್ಮ, ಮಗಳ ಪ್ರೇರಣೆ ಇಟ್ಟುಕೊಂಡು ಕಥೆ ಬರೆದೆ. ವಾಸ್ತವವಾಗಿ ಎಲ್ಲರ ಮನೆಯಲ್ಲಿ ಏನು ನಡೆಯುತ್ತದೆ. ಅದನ್ನೇ ತೋರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ತಾಯಿಯೇ ದೇವರ ಕಥೆ ನನ್ನ ತಾಯಿ ಮತ್ತು ಮಗಳಿಂದ ಪ್ರೇರಿತವಾಗಿದೆ. ಪ್ರತಿಭಾವಂತ ನಿರ್ದೇಶಕರಿಗೆ ನಾನು ಅವಕಾಶಗಳನ್ನು ನೀಡುತ್ತೇನೆ, ಚಿತ್ರವು ಮೂವರು ತಾಯಂದಿರ ಸುತ್ತ ಸುತ್ತುತ್ತದೆ, ಭವ್ಯಾ ಅವರು ಮಹತ್ವದ ಪಾತ್ರದಲ್ಲಿದ್ದಾರೆ. ಮಾಲಾಶ್ರೀ ಪ್ರಭಾವಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಜಿ ಸಚಿವ ಎಚ್‌ಎಂ ರೇವಣ್ಣ ಅವರ ಪುತ್ರಿ ಅನ್ವಿತಾ ಮೂರ್ತಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇವರ ಜೊತೆಗೆ ದೊಡ್ಡಣ್ಣ, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಬಾಲರಾಜ್, ಸ್ವಾತಿ ಗುರುದತ್, ರೇಖಾದಾಸ್, ಅಪೂರ್ವ, ಜೀವಿತಾ ಪ್ರಕಾಶ್, ರಾಜ್ ಮನೀಷ್, ಗಣೇಶ್ ಮುಂತಾದ ಖ್ಯಾತ ನಟರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ನಾಲ್ಕು ಹಾಡುಗಳನ್ನು ಒಳಗೊಂಡಿರುತ್ತದೆ ಮತ್ತು ಬೆಂಗಳೂರು, ಮಂಗಳೂರು ಮತ್ತು ಚಿಕ್ಕಮಗಳೂರು ಮುಂತಾದ ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT