ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ತಂದೆ-ಮಗನ ಭಾವನಾತ್ಮಕ ಪಯಣ ವಿವರಿಸುವ ಸಿನಿಮಾ 'ಫಾದರ್ಸ್ ಡೇ'!

ಇಲೆವೆನ್ ಎಲಿಮೆಂಟ್ಸ್ ಫಿಲ್ಮ್ಸ್ ಮತ್ತು ರೆಕ್ಟ್ಯಾಂಗಲ್ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರಾಜರಾಮ್ ರಾಜೇಂದ್ರನ್ ನಿರ್ದೇಶಿಸಿದ್ದಾರೆ, ಅವರು ಈ ಹಿಂದೆ ಜಾಹೀರಾತು ತಯಾರಿಕೆಯಲ್ಲಿ ಕೆಲಸ ಮಾಡಿದ್ದರು.

'ಫಾದರ್ಸ್ ಡೇ' ಬೈಕ್ ನಲ್ಲಿ ಸವಾರಿ ನಡೆಸುವ ತಂದೆ ಮತ್ತು ಮಗನ ಭಾವನಾತ್ಮಕ ಪ್ರಯಾಣದ ಕಥೆಯನ್ನು ಹೊಂದಿರುವ ಚಿತ್ರವಾಗಿದೆ. ಆಚಾರ್ & ಕೋ ಮತ್ತು ಅನಾಮಧೇಯ ಅಶೋಕ್ ಕುಮಾರ್ ಚಿತ್ರಗಳಿಗೆ ಹೆಸರುವಾಸಿಯಾದ ನಾಯಕ ನಟ ಹರ್ಷಿಲ್ ಕೌಶಿಕ್, ಮರುಶೋಧನೆ, ನಗು, ಸುಖ-ದುಃಖ, ಜೀವನದ ಸಿಹಿ-ಕಹಿ ಸತ್ಯಗಳನ್ನು ವಿವರಿಸುವ ಕಥೆಯಾಗಿದೆ ಎನ್ನುತ್ತಾರೆ.

ಇಲೆವೆನ್ ಎಲಿಮೆಂಟ್ಸ್ ಫಿಲ್ಮ್ಸ್ ಮತ್ತು ರೆಕ್ಟ್ಯಾಂಗಲ್ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರಾಜರಾಮ್ ರಾಜೇಂದ್ರನ್ ನಿರ್ದೇಶಿಸಿದ್ದಾರೆ, ಅವರು ಈ ಹಿಂದೆ ಜಾಹೀರಾತು ತಯಾರಿಕೆಯಲ್ಲಿ ಕೆಲಸ ಮಾಡಿದ್ದರು. ರಾಜರಾಮ್ ಅವರ ಚೊಚ್ಚಲ ಚಿತ್ರವು ಹಾಸ್ಯ ಮತ್ತು ಭಾವನಾತ್ಮಕ ಕಥೆಯ ಸಮ್ಮಿಶ್ರವಾಗಿದೆ. ಆಕರ್ಷಕ ಆದರೆ ಹೃತ್ಪೂರ್ವಕ ಸಿನಿಮೀಯ ಅನುಭವವನ್ನು ನೀಡುತ್ತದೆ ಎಂದು ಹರ್ಷಿಲ್ ವಿವರಿಸುತ್ತಾರೆ.

30 ವರ್ಷಗಳ ಹಿಂದೆ ತನ್ನ ಗೆಳತಿಯನ್ನು ತ್ಯಜಿಸಿ ಈಗ ಒಂಟಿಯಾಗಿ ವಾಸಿಸುವ ಸುಧೀರ್ ಪಾತ್ರವನ್ನು ಅಜಿತ್ ಹಂದೆ ನಿರ್ವಹಿಸಿದ್ದಾರೆ. ನಾನು ನಿರ್ವಹಿಸಿದ ಅವರ ಮಗನ ಪಾತ್ರ ಸುಶಾಂತ್, ಸ್ವತಃ ತಂದೆಯಾಗುವವನಿದ್ದು, ಸುಧೀರ್ ನ ಲಕ್ಷಣಗಳನ್ನು ಹುಡುಕುತ್ತಾ ಅನಿರೀಕ್ಷಿತ ಬೈಕ್ ಪ್ರಯಾಣವನ್ನು ಪ್ರಾರಂಭಿಸುತ್ತಾನೆ ಎಂದು ಹರ್ಷಿಲ್ ಹೇಳುತ್ತಾರೆ.

ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗ್ರಾಮೀಣ ಕರ್ನಾಟಕದ ಭಾಗದಲ್ಲಿ ಸವಾರಿ ಮಾಡುವಾಗ, ಹಲವು ಜನರನ್ನು ಭೇಟಿಯಾಗುತ್ತೇವೆ, ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ತಂದೆ ಮತ್ತು ಮಗನ ನಡುವಿನ ಅಡೆತಡೆಗಳನ್ನು ಕ್ರಮೇಣ ಮುರಿಯುವ ಕ್ಷಣಗಳನ್ನು ಅನುಭವಿಸುತ್ತೇವೆ ಎಂದರು ಅಜಿತ್ ಹಂದೆ.

ಕರ್ನಾಟಕದ ಸುಂದರವಾದ ಭಾಗಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ. ಸುಧೀರ್ ಮತ್ತು ಸುಶಾಂತ್ ನಡುವಿನ ಆಳವಾದ ಬಾಂಧವ್ಯವನ್ನು ಅನ್ವೇಷಿಸುತ್ತದೆ. ರ್ಯಾಪರ್ ಮತ್ತು ಹಾಡುಗಾರ ಅಲೋಕ್ ಬಾಬು ಆರ್ ಅಲಿಯಾಸ್ ಆಲ್ ಓಕೆ ಮತ್ತು ಸಾಮ್ರಾಗ್ನಿ ಅವರು ಸಹ ನಟಿಸಿದ್ದಾರೆ. ಚಿತ್ರವು ಜೂನ್‌ನಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT