ಕಮಲ್ ಹಾಸನ್  
ಸಿನಿಮಾ ಸುದ್ದಿ

'ನಾನು ರಾಮನ ತಂದೆ ದಶರಥನ ಮಾರ್ಗ ಅನುಸರಿಸುತ್ತೇನೆ, ಅದಕ್ಕೆ ಎರಡು ಮದುವೆ ಇರಬೇಕು': ಕಮಲ್ ಹಾಸನ್

1978ರಲ್ಲಿ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದ ಅವರು 1988 ರಲ್ಲಿ ದೂರಾಗಿದ್ದರು. ಬಳಿಕ ಅದೇ ವರ್ಷ ನಟಿ ಸಾರಿಕಾ ಅವರೊಂದಿಗೆ ವಿವಾಹವಾಗಿದ್ದರು.

ನವದೆಹಲಿ: ನಟ ಕಮಲ್ ಹಾಸನ್ ತಮ್ಮ ಮುಂಬರುವ ಚಿತ್ರ 'ಥಗ್ ಲೈಫ್' ಬಿಡುಗಡೆಗೆ ಎದುರುನೋಡುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ, ತಮ್ಮ ವೈಯಕ್ತಿಕ ಜೀವನ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ.

ಪತ್ರಕರ್ತರೊಬ್ಬರು ತ್ರಿಶಾ ಅವರ ವಿವಾಹದ ಕುರಿತು ಪ್ರಶ್ನೆ ಕೇಳಿದಾಗ, 'ಅದು (ಮದುವೆ) ಸಂಭವಿಸಿದರೂ ಪರವಾಗಿಲ್ಲ ಮತ್ತು ಅದು ಸಂಭವಿಸದಿದ್ದರೂ ಪರವಾಗಿಲ್ಲ' ಎಂದು ಹೇಳಿದರು.

ಇದು ಕಮಲ್ ಹಾಸನ್ ಅವರನ್ನು ತಮ್ಮ ವೈವಾಹಿಕ ಅನುಭವಗಳ ಬಗ್ಗೆ ಚಿಂತಿಸುವಂತೆ ಮಾಡಿತು. ಈಗ ಸಂಸತ್ ಸದಸ್ಯರಾಗಿರುವ ಜಾನ್ ಬ್ರಿಟ್ಟಾಸ್ ಅವರೊಂದಿಗಿನ ಸಂದರ್ಶನದಿಂದ ಆಯ್ದ ಕೆಲವು ವಿಚಾರಗಳನ್ನು ಕಮಲ್ ಹಂಚಿಕೊಂಡಿದ್ದಾರೆ.

ಕಮಲ್ ಹಾಸನ್ ಅವರು ಎರಡು ವಿವಾಹ ವಾಗಿದ್ದು, ಇಬ್ಬರಿಂದಲೂ ವಿಚ್ಚೇದನ ಪಡೆದಿದ್ದಾರೆ. 1978ರಲ್ಲಿ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದ ಅವರು 1988 ರಲ್ಲಿ ದೂರಾಗಿದ್ದರು. ಬಳಿಕ ಅದೇ ವರ್ಷ ನಟಿ ಸಾರಿಕಾ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಾರಿಕಾ ಅವರಿಂದಲೂ ಕಮಲ್ ಹಾಸನ್ 2004ರಲ್ಲಿ ವಿಚ್ಚೇದನ ಪಡೆದಿದ್ದಾರೆ.

'ನನ್ನ ಆತ್ಮೀಯ ಸ್ನೇಹಿತ ಸಂಸದ ಬ್ರಿಟ್ಟಾಸ್ ಒಮ್ಮೆ ನನ್ನನ್ನು ಕೇಳಿದರು. ನಾನು ಒಳ್ಳೆಯ ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ, ಎರಡು ಬಾರಿ ಏಕೆ ಮದುವೆಯಾದೆ ಎಂದು ಮತ್ತು ಕುಟುಂಬದ ಖ್ಯಾತಿಗೂ ಮದುವೆಗೂ ಏನು ಸಂಬಂಧ ಎಂದು ನಾನು ಅವರನ್ನು ಕೇಳಿದೆ' ಎಂದು ಅವರು ನೆನಪಿಸಿಕೊಂಡರು.

ರಾಮನಿಗೆ ಒಬ್ಬಳೇ ಹೆಂಡತಿ ಎಂಬ ಉದಾಹರಣೆಯೊಂದಿಗೆ ಬ್ರಿಟ್ಟಾಸ್ ಕೇಳಿದಾಗ ತಾನು ಏನೆಂದು ಉತ್ತರಿಸಿದೆ ಎಂದರೆ, 'ಮೊದಲನೆಯದಾಗಿ, ನಾನು ಯಾವುದೇ ದೇವರನ್ನು ಪ್ರಾರ್ಥಿಸುವುದಿಲ್ಲ. ನಾನು ರಾಮನ ಮಾರ್ಗವನ್ನು ಅನುಸರಿಸುವುದಿಲ್ಲ. ಬಹುಶಃ ನಾನು ಅವನ ತಂದೆಯ (ಮೂರು ಹೆಂಡತಿಯರನ್ನು ಹೊಂದಿದ್ದ ದಶರಥ) ಮಾರ್ಗವನ್ನು ಅನುಸರಿಸುತ್ತೇನೆ' ಎಂದಿದ್ದೆ ಎಂದರು.

ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ 'ಥಗ್ ಲೈಫ್' ಜೂನ್ 5 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್