ಮಹಾವತಾರ ನರಸಿಂಹ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ 'ಮಹಾವತಾರ ನರಸಿಂಹ' ಅಬ್ಬರ; ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿದ ಚಿತ್ರ ಗಳಿಸಿದ್ದೆಷ್ಟು?

ಭಾರತದಲ್ಲಿ ಯಶಸ್ಸು ಕಂಡ ನಂತರ, ಮಹಾವತಾರ ನರಸಿಂಹ ಚಿತ್ರವು ಜುಲೈ 31 ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಯುರೋಪಿನಾದ್ಯಂತ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಬಿಡುಗಡೆಯಾಗಿದೆ.

ಅಶ್ವಿನ್ ಕುಮಾರ್ ಅವರ 'ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿಧಾನವಾಗಿ ಉತ್ತಮ ಗಳಿಕೆ ಕಾಣುತ್ತಾ ಸಾಗಿದೆ. ಚಿತ್ರ ಬಿಡುಗಡೆಯಾದ ಎಂಟೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರವು ತೆರೆಗೆ ಬಂದ ಮೂರನೇ ದಿನದಿಂದ ಪ್ರತಿದಿನ 6 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಕಂಡಿದೆ. ಈ ಚಿತ್ರವನ್ನು ಪ್ರಸ್ತುತಪಡಿಸಿರುವ ಹೊಂಬಾಳೆ ಫಿಲ್ಮ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಚಿತ್ರ ತೆರೆಕಂಡ ಎಂಟು ದಿನಗಳಲ್ಲಿ 60 ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುವ ಮೂಲಕ ದಾಖಲೆ ಬರೆದಿರುವುದಾಗಿ ತಿಳಿಸಿದೆ.

'ದೇಶದಾದ್ಯಂತ ದೈವಿಕ ಘರ್ಜನೆ ಪ್ರತಿಧ್ವನಿಸಿದೆ. ಮಹಾವತಾರ ನರಸಿಂಹ ಚಿತ್ರವು ಎಲ್ಲ ದಾಖಲೆಗಳನ್ನು ಮೀರಿ ಘರ್ಜಿಸುತ್ತಿದೆ. ಬಿಡುಗಡೆಯಾದ ಕೇವಲ 8 ದಿನಗಳಲ್ಲಿ ₹ 60.5 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಸಾರ್ವಕಾಲಿಕ ಅನಿಮೇಟೆಡ್ ಚಿತ್ರ ಎನಿಸಿಕೊಂಡಿದೆ' ಎಂದು ಹೇಳಲಾಗಿದೆ.

ಭಾರತದಲ್ಲಿ ಯಶಸ್ಸು ಕಂಡ ನಂತರ, ಮಹಾವತಾರ ನರಸಿಂಹ ಚಿತ್ರವು ಜುಲೈ 31 ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಯುರೋಪಿನಾದ್ಯಂತ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಬಿಡುಗಡೆಯಾಗಿದೆ.

ಚಿತ್ರವು ವಿಷ್ಣುವಿನ ಕಟ್ಟಾ ಭಕ್ತ ಪ್ರಹ್ಲಾದನ ಕುರಿತಾದ ಪ್ರಸಿದ್ಧ ಹಿಂದೂ ಪುರಾಣದ ಸುತ್ತ ಸುತ್ತುತ್ತದೆ. ಅವನ ತಂದೆ ಹಿರಣ್ಯಕಶಿಪು- ಒಬ್ಬ ಬಲಿಷ್ಠ ರಾಜ ಮತ್ತು ಕಟ್ಟಾ ನಾಸ್ತಿಕ. ತನ್ನ ಮಗನ ಅಚಲ ನಂಬಿಕೆಯಿಂದ ಕೋಪಗೊಳ್ಳುತ್ತಾನೆ. ಅವನ ಕ್ರೌರ್ಯವು ಉತ್ತುಂಗಕ್ಕೇರಿದಾಗ ವಿಷ್ಣು ತನ್ನ ನರಸಿಂಹ ಅವತಾರ ತಾಳಿ ಪ್ರಹ್ಲಾದನನ್ನು ರಕ್ಷಿಸುತ್ತಾನೆ ಮತ್ತು ಕ್ರೂರ ರಾಜನನ್ನು ಹತ್ಯೆ ಮಾಡುತ್ತಾನೆ.

ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ್ದು, ಕ್ಲೀಮ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸಿದ್ದಾರೆ. ಈ ಚಿತ್ರವು ಸ್ಯಾಮ್ ಸಿಎಸ್ ಅವರ ಸಂಗೀತ ಸಂಯೋಜನೆ ಹೊಂದಿದ್ದು, ಚಿತ್ರಕಥೆಯನ್ನು ಜಯಪೂರ್ಣ ದಾಸ್ ಮತ್ತು ರುದ್ರ ಪ್ರತಾಪ್ ಘೋಷ್ ಬರೆದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ತನ್ನ ಮಹತ್ವಾಕಾಂಕ್ಷೆಯ ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್ ಎಂಬ ಪ್ರಮುಖ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಹಿಂದೂ ಪುರಾಣದ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ಆಧರಿಸಿದ ಅನಿಮೇಟೆಡ್ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ. ಈ ಸರಣಿಯ ಮೊದಲ ಚಿತ್ರ ಇದೀಗ ಬಿಡುಗಡೆಯಾಗಿದ್ದು, ಉಳಿದ ಚಿತ್ರಗಳು 2025 ಮತ್ತು 2037ರ ನಡುವೆ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಮಹಾವತಾರ ನರಸಿಂಹ ಭಾರತದಾದ್ಯಂತ 3D ಸ್ವರೂಪಗಳಲ್ಲಿ ಬಿಡುಗಡೆಯಾಗಿದ್ದು, ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT