ಬೆಂಗಳೂರು: ಜೀ ಕನ್ನಡ ವಾಹಿನಿಯ ನಿರೂಪಕಿ ಅನುಶ್ರೀ ಮದುವೆ ಆಗುತ್ತಿರುವ ವಿಷಯ ಬಹಿರಂಗಗೊಂಡಿತ್ತು. ಇದೀಗ ಮದುವೆ ದಿನಾಂಕ ಫಿಕ್ಸ್ ಆಗಿದ್ದು ಆಗಸ್ಟ್ 28ರಂದು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ. ಆಗಸ್ಟ್ 28ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಬೆಳಗ್ಗೆ 10:56 ರ ಶುಭ ಮೂಹೂರ್ತದಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದೆ. ಇತ್ತೀಚೆಗೆ ಅನುಶ್ರೀ ಹಾಗೂ ರೋಷನ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅನುಶ್ರೀ ಮದುವೆ ವಿಚಾರ ಮುನ್ನಲೆಗೆ ಬಂದಿತ್ತು.