ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಮ್ಮ ಮತ್ತು ನಟಿ ದೀಪಿಕಾ ದಾಸ್ (Deepika das) ನಡುವಿನ ಸಂಘರ್ಷ ಮುಂದುವರೆದಿದ್ದು, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ನಟಿ ದೀಪಿಕಾದಾಸ್ ಕಿಡಿಕಾರಿದ್ದಾರೆ.
ತಮ್ಮ ಹಿಂದಿನ ಹೇಳಿಕೆಗೆ ನಟಿ ದೀಪಿಕಾದಾಸ್ ಸಾಮಾಜಿಕ ಪೋಸ್ಟ್ ಕುರಿತು ಯಶ್ ಅವರ ತಾಯಿ ನೀಡಿದ್ದ ಪ್ರತಿಕ್ರಿಯೆಯಾಗಿ ನಟಿ ದೀಪಿಕಾದಾಸ್ ಪೋಸ್ಟ್ ಹಾಕಿದ್ದು, ಪೋಸ್ಟ್ ನಲ್ಲಿ 'ನಮ್ಮ ಹತ್ರ ಯಾರೂ ಬರೋ ಅವಶ್ಯಕತೆ ಇಲ್ಲ' ಎಂದು ಖಾರವಾಗಿ ಹೇಳಿದ್ದಾರೆ. ಈ ಬಾರಿ ನಟಿ ದೀಪಿಕಾದಾಸ್ ಯಾರ ಹೆಸರೂ ಉಲ್ಲೇಖಿಸದೇ ಟಾಂಗ್ ಕೊಟ್ಟಿದ್ದಾರೆ.
ತಮ್ಮ ಹೇಳಿಕೆಗೆ ನಟಿ ದೀಪಿಕಾದಾಸ್ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪುಷ್ಪಮ್ಮ ಪ್ರತಿಕ್ರಿಯಿ ನೀಡಿದ್ದು, 'ದೀಪಿಕಾ ದಾಸ್‌ರನ್ನು ಮೀಟ್ ಮಾಡಿ ಮಾತನಾಡುತ್ತೀನಿ ಎಂದಿದ್ದರು. ಪುಷ್ಪ ಅವರು ಮಾತನಾಡಿರೋ ಆಡಿಯೋ ವೈರಲ್ ಆದ ಬೆನ್ನಲ್ಲೇ ದೀಪಿಕಾ ದಾಸ್ ಮತ್ತೆ ಒಂದಷ್ಟು ವಿಚಾರವನ್ನ ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲೇನಿದೆ?
ಸತ್ಯವನ್ನು ತಲೆ ಮೇಲೆ ಹೊಡೆದ ಹಾಗೆ ಹೇಳುವಂಥಹ ಬುದ್ಧಿ? ಯಾರೂ ಎಲ್ಲೂ ಹೋಗಿಲ್ಲ, ಯಾರೂ ನಮ್ಮ ಹತ್ರ ಬರುವ ಅವಶ್ಯಕತೆನೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬವನ್ನು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಮೇಲೆ ನಾನು ಮಾತಾಡೋಕೆ ಇಷ್ಟಪಡಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಏನಾಗಿತ್ತು?
ಈ ಹಿಂದೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಯಶ್ ಅವರ ತಾಯಿ ಪುಷ್ಪಲತಾಗೆ ಸಂದರ್ಶಕಿ, ‘ನಿಮ್ಮ ಮುಂದಿನ ಸಿನಿಮಾಕ್ಕೆ ದೀಪಿಕಾ ದಾಸ್ ನಾಯಕಿಯಂತೆ?’ ಎಂಬ ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆಯಿಂದ ಸಿಟ್ಟಾದ ಪುಷ್ಪಲತಾ, ‘ದೀಪಿಕಾ ದಾಸ್‌ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು?, ಯಾವ ಸಾಧನೆ ಮಾಡಿದ್ದಾಳೆ? ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು, ‘ನಮ್ಮ ಸಂಬಂಧವೇ ಆದರೂ ಅವರನ್ನು ದೂರ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಬೇಕಾದರೆ ಕೇಳಿ. ದೀಪಿಕಾ ದಾಸ್ ಏನು ರಮ್ಯಾನಾ? ರಕ್ಷಿತಾನಾ? ಒಂದು ವೇಳೆ ದೊಡ್ಡದಾಗಿ ಸಾಧನೆ ಮಾಡಿದ್ದರೆ ಅವರ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಯಾಕೆ?’ ಎಂದು ಹೇಳಿದ್ದರು.
ಈ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ ನಟಿ ದೀಪಿಕಾ ದಾಸ್, 'ಸತ್ಯವನ್ನು ತಲೆ ಮೇಲೆ ಹೊಡೆದ ಹಾಗೆ ಹೇಳುವಂಥಹ ಬುದ್ಧಿ? ಯಾರೂ ಎಲ್ಲೂ ಹೋಗಿಲ್ಲ, ಯಾರೂ ನಮ್ಮ ಹತ್ರ ಬರುವ ಅವಶ್ಯಕತೆನೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬವನ್ನು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಮೇಲೆ ನಾನು ಮಾತಾಡೋಕೆ ಇಷ್ಟಪಡಲ್ಲ' ಎಂದಿದ್ದರು.