ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ 
ಸಿನಿಮಾ ಸುದ್ದಿ

Bigg Boss Kannada 12: ಗೆಳೆಯನನ್ನೇ ನಾಮಿನೇಟ್ ಮಾಡಿದ ಕಾವ್ಯ; ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ; ಹೊರ ಹೋಗೋದ್ಯಾರು?

ಬಿಗ್‌ ಬಾಸ್‌ ಮನೆಯಲ್ಲಿ ಬೆಸ್ಟ್‌ ಫ್ರೆಂಡ್‌ ಆಗಿದ್ದ ಗಿಲ್ಲಿಯನ್ನೇ ಕಾವ್ಯಾ ಶೈವ ಅವರು ನಾಮಿನೇಟ್ ಮಾಡಿ, ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಕಾವ್ಯ ಅವರ ನಾಮಿನೇಷನ್‌ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ.

ಬೆಂಗಳೂರು: ಬಿಗ್‌ ಬಾಸ್‌ ಹೌಸ್‌ ‘ವಿಲನ್‌’ ಹೌಸ್ ಆಗಿ ಬದಲಾಗಿದ್ದು, ಈ ನಡುವಲ್ಲೇ ಮನೆಯಲ್ಲಿ ಕೆಲ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ.

ಬಿಗ್‌ ಬಾಸ್‌ ಮನೆಯಲ್ಲಿ ಬೆಸ್ಟ್‌ ಫ್ರೆಂಡ್‌ ಆಗಿದ್ದ ಗಿಲ್ಲಿಯನ್ನೇ ಕಾವ್ಯಾ ಶೈವ ಅವರು ನಾಮಿನೇಟ್ ಮಾಡಿ, ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಕಾವ್ಯ ಅವರ ನಾಮಿನೇಷನ್‌ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ.

ಕಾವ್ಯ ಅವರು ರಜತ್‌ ಹಾಗೂ ಗಿಲ್ಲಿಯನ್ನು ನಾಮಿನೇಟ್‌ ಮಾಡಿದ್ದಾರೆ. ʻಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೊ ಅನ್ನಿಸುತ್ತಿದೆʼ ಎಂದು ಹೇಳಿದ್ದಾರೆ.

ಇದಕ್ಕೆ ರಜತ್‌ ಕೋಪಗೊಂಡು, ಈ ಮನೆಯಲ್ಲಿ ʻತಮಾಷೆನೇ ಮಾಡಬಾರದಾ?ತಲೆ ಏನಾದರೂ ಕೆಟ್ಟು ಹೋಗಿದ್ಯಾʼ ಎಂದು ಕೂಗಾಡಿದ್ದಾರೆ. ಇದೇ ವೇಳೆ ಧ್ರುವಂತ್‌ ಹಾಗೂ ರಜತ್‌ ನಡುವೆ ಮಾತಿನ ಚಕಮಕಿ ನಡೆದಿದೆ.

ಧ್ರುವಂತ್‌ ಅವರು ಇದೇನು ಲಾಸ್ಟ್‌ ಸೀಸನ್‌ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ, ನಾನು ಧ್ರುವಂತ್ ಎಂದು ಹೇಳಿದ್ದಾರೆ. ಇದು ರಜತ್‌ಗೆ ಕೋಪ ತರಿಸುವಂತೆ ಮಾಡಿದ್ದು, ಧ್ರುವಂತ್‌ ಮೇಲೆ ಹರಿಹಾಯ್ದಿದ್ದಾರೆ. ಈ ವೇಳೆ ಇಬ್ಬರು ಹೊಡೆದಾಡಲು ಹೋಗಿದ್ದು, ಮನೆ ಮಂದಿ ಮಧ್ಯ ಪ್ರವೇಶಿಸಿ, ಮಾತಿನಲ್ಲಿ ಬಗೆಹರಿಸಿಕೊಳ್ಳುವಂತೆ ಮಾಡಿದ್ದಾರೆ. ನಂತರ ಏನಾಗಿದೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದರ ಪ್ರೋಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ ರೂ.3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..!

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: ಪೆಟ್ರೋಲ್-ಡೀಸೆಲ್ ಬಳಿಕ CNG ದರವೂ ಹೆಚ್ಚಳ..!

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಹಿಜಾಬ್ ನಿಷೇಧ ಹಿಂಪಡೆದ ಸರ್ಕಾರ: ನ್ಯಾಯಾಂಗಕ್ಕೆ ಮಾಡಿದ ಅವಮಾನ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಕರೆಯದ ಕಾರ್ಯಕ್ರಮಕ್ಕೆ ಹೆಂಗಪ್ಪ ಬರಲಿ: ಪಿತೂರಿ ಮಾಡುವುದನ್ನು ಬಿಟ್ಟು ಬೆಳೆಯುವವರನ್ನು ಪ್ರೋತ್ಸಾಹಿಸಿ; ಜೆಸಿ ಮಾಧುಸ್ವಾಮಿ

SCROLL FOR NEXT