ಬೆಂಗಳೂರು: ಪಾಪ ಪಾಂಡು ಹಾಗೂ ಗಿಣಿರಾಮದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ನಯನಾ ನಾಗರಾಜ್ ಅವರನ್ನು ಕಿರುತೆರೆಯ ಎಲ್ಲಾ ಕಾರ್ಯಕ್ರಮಗಳಿಂದ ಬ್ಯಾನ್ ಮಾಡಲಾಗಿದೆ.
ಗಿಣಿರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಯನಾ ನಾಗರಾಜ್ ಅವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್ ಮಾಡಲಾಗಿದೆಯಂತೆ. ಈ ವಿಚಾರವನ್ನು ಸ್ವತಃ ನಯನಾ ನಾಗರಾಜ್ ಇತ್ತೀಚಿಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾವು ನಟಿಸುತ್ತಿದ್ದ ಧಾರಾವಾಹಿ ತಂಡದಲ್ಲಿ ವ್ಯಕ್ತಿಯೊಬ್ಬನಿ೦ದ ಮಾನಸಿಕ ಹಿಂಸೆಯಾಗುತ್ತಿತ್ತು. ಆತನ ಕಮೆಂಟ್‌ಗೆ ಎದುರೇಟು ಕೊಟ್ಟಿದ್ದಕ್ಕೆ ಆತ ಒಂದು ವರ್ಷ ನನ್ನ ಬದುಕನ್ನು ನರಕ ಮಾಡಿದ. ಹೀಗಾಗಿ ಆತನ ಮೇಲೆ ವಾಹಿನಿಗೆ ದೂರು ನೀಡಿದೆ. ಇದರಿಂದ ಹಿಂಸೆ ಇನ್ನಷ್ಟು ಜಾಸ್ತಿ ಆಯ್ತು. ಬಳಿಕ ಧಾರಾವಾಹಿ ಬಿಡುವ ನಿರ್ಧಾರ ಮಾಡಿದೆ. ಕೊನೆಗೆ ಧಾರಾವಾಹಿ ಕಥೆ ಅಂತ್ಯಗೊಳಿಸಲಾಯಿತು.
ಇದರಿಂದ ತಮ್ಮ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತು ಎಂದು ಆರೋಪಿಸಿ ನನ್ನ ವಿರುದ್ಧ ದೂರು ನೀಡಿದರು. ಇದೇ ಕಾರಣದಿಂದ ನಾನು ಧಾರಾವಾಹಿ ಮಾಡದಂತೆ ನಿಷೇಧ ವಿಧಿಸಲಾಯಿತು ಎಂದು ನಟಿ ನಯನಾ ಹೇಳಿಕೊಂಡಿದ್ದಾರೆ.