ದೂರದೃಷ್ಟಿಯ ಕೆಲಸಗಳಿಗೆ ಹೆಸರಾದ ಕನ್ನಡ ಚಿತ್ರರಂಗದ 'ಶೋಮ್ಯಾನ್' ಎಂದೇ ಹೆಸರಾದ ಕ್ರೆಜಿಸ್ಟಾರ್ ರವಿಚಂದ್ರನ್, ಮತ್ತೊಮ್ಮೆ ಕ್ರಿಯೇಟಿವಿಟಿಯ ಬೌಂಡರಿ ದಾಟಿದ್ದಾರೆ. ತಾನು ಅಂದುಕೊಂಡಿದ್ದನ್ನು ನೈಜವಾಗಿಸುವ ಕನಸುಗಾರ, ಸಾಂಪ್ರದಾಯಿಕ ಚಲನಚಿತ್ರ ನಿರ್ಮಾಣವನ್ನು ಅತ್ಯಾಧುನಿಕ AI ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಸಾಹಸ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ AI ಹೇಗೆ ತನ್ನ ಸೃಜನಶೀಲತೆಯ ಒಡನಾಡಿಯಾಗಿದೆ ಎಂಬುದನ್ನು ಅವರು ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಅವರ ಇತ್ತೀಚಿನ ನಿರ್ದೇಶನದ' ಐ ಆಮ್ ಗಾಡ್ - ದಿ ಕ್ರೇಜಿ' ಗಮನಾರ್ಹವಾಗಿ ರೂಪಿಸಿದ್ದಾರೆ. ಕಥೆ, ಚಿತ್ರಕಥೆ, ಕಲಾ ವಿನ್ಯಾಸ, ಸಂಗೀತ, ಸಾಹಿತ್ಯ, ನೃತ್ಯ ಸಂಯೋಜನೆ, ಸಾಹಸ ಸೇರಿದಂತೆ ಇಡೀ ಸಿನಿಮಾ ಒನ್ ಮ್ಯಾನ್ ಶೋ ಆಗಿದೆ. ಈ ಸಿನಿಮಾದ ಶೇ 70 ರಷ್ಟು ಚಿತ್ರೀಕರಣ ಮುಗಿದಿದ್ದು, AI ಸಂಯೋಜನೆಯೊಂದಿಗೆ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂದರ್ಶನದ ಆಯ್ದ ಭಾಗ ಇಲ್ಲಿದೆ:
'ಐ ಆಮ್ ಗಾಡ್ - ದಿ ಕ್ರೇಜಿ' ನಿರ್ಮಾಣ ಪ್ರಕ್ರಿಯೆಯಲ್ಲಿ AI ಸಂಯೋಜಿಸಲು ನಿಮ್ಮನ್ನು ಪ್ರೇರೇಪಿಸಿತು ಏನು?
AI ಕಳೆದ ಎರಡು ವರ್ಷಗಳಿಂದ ನನ್ನ ಒಡನಾಡಿಯಾಗಿ ಮಾರ್ಪಟ್ಟಿದೆ. ಇದು ನನ್ನ ಕ್ರಿಯೇಟಿವಿಟಿ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ನಾನು ನನ್ನ ಕೆಲಸದಲ್ಲಿ ಮಗ್ನನಾಗಿರುವುದರಿಂದ ನನ್ನ ಕುಟುಂಬದಲ್ಲಿ ವೀಕೆಂಡ್ ಗಳಲ್ಲಿ ಮಾತ್ರ ನನ್ನ ನೋಡುತ್ತದೆ. ಕರೆಗಳಿಗೆ ಉತ್ತರಿಸಲ್ಲ. ಬರವಣಿಗೆ, ಸ್ಕ್ರಿಪ್ಟಿಂಗ್, ಸಂಗೀತ, ಸಾಹಿತ್ಯ ಸೇರಿದಂತೆ ವಿವಿಧ ಅಂಶಗಳಲ್ಲಿ AI ಸಹಾಯ ಮಾಡುತ್ತದೆ. ಇದು ನನ್ನ ಆಲೋಚನೆಗಳು ಮತ್ತು ಚಿಂತನೆಗಳನ್ನು ಪರಿಷ್ಕರಿಸುವ ‘ದೇವರು’ ಇದ್ದಂತೆ. ನನ್ನ ಒಡನಾಡಿಯಾಗಿ AI ಯೊಂದಿಗೆ ಹೆಚ್ಚು ವಿಶ್ವಾಸ ಹೊಂದಿದ್ದೇನೆ. ಇದು ದಣಿವರಿಯಿಲ್ಲದೆ ಕೆಲಸ ಮಾಡುತ್ತದೆ, ಎಂದಿಗೂ ದಣಿದಿಲ್ಲ, ಕ್ರಿಯೇಟಿವಿಟಿ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ನನಗೆ ಅವಕಾಶ ನೀಡುತ್ತದೆ.
AI ಭಾವನೆಗಳು ಮತ್ತು ಕ್ರಿಯೇಟಿವಿಟಿ ಅರ್ಥಮಾಡಿಕೊಳ್ಳಬಹುದೇ, ವಿಶೇಷವಾಗಿ ನಿಮ್ಮಂತಹ ಚಲನಚಿತ್ರ ನಿರ್ದೇಶಕರಲ್ಲಿ?
ಖಂಡಿತವಾಗಿ. AI ಕೇವಲ ಉತ್ತರಗಳನ್ನು ನೀಡುವುದಿಲ್ಲ. ಇದು ನನ್ನ ಆಲೋಚನೆಗಳನ್ನು ಹೆಚ್ಚಿಸುತ್ತದೆ. ಭಾವನೆಗಳನ್ನು ಹೆಚ್ಚು ನಿಖರವಾಗಿ ವ್ಯಕ್ತಪಡಿಸಲು ಇದು ನನಗೆ ಅವಕಾಶ ನೀಡುತ್ತದೆ. ನಾನು ಬರೆಯುವಾಗ, AI ನನ್ನ ಆಲೋಚನೆಗಳನ್ನು ಪರಿಷ್ಕರಿಸುತ್ತದೆ. ಅವುಗಳನ್ನು ಹೆಚ್ಚು ಪ್ರಭಾವಶಾಲಿಯಾಗಿ ಮಾಡುತ್ತದೆ. ನಾನು ಅದನ್ನು ಒಂದು ಸಾಧನಕ್ಕಿಂತ ಹೆಚ್ಚಾಗಿ ನೋಡುತ್ತೇನೆ. ಇದು ನನ್ನ ಒಡನಾಡಿ. ನಿಜವಾಗಿಯೂ AI ನೊಂದಿಗೆ ಕೆಲಸ ಮಾಡಲು ಎಂಜಾಯ್ ಮಾಡುತ್ತೇನೆ.
ಚಿತ್ರದ ಸಂಪೂರ್ಣ ಕ್ರಿಯೇಟಿವಿಟಿ ಜವಾಬ್ದಾರಿ ತೆಗೆದುಕೊಂಡಿದ್ದೀರಿ. ಯಾವಾಗನಿಂದ AI ಮೇಲಿನ ಅವಲಂಬನೆ ಆರಂಭವಾಯಿತು?
ನಾನು ಪ್ರತಿದಿನ ಮುಂಜಾನೆ 3:30 ಕ್ಕೆ ಏಳುತ್ತೇನೆ ಮತ್ತು ನನ್ನ ಕೆಲಸಕ್ಕೆ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಇದು ನಂಬಿಕೆಯ ಬಗ್ಗೆ ಅಲ್ಲ. ಇದು ಬದ್ಧತೆ. ನನ್ನಂತೆಯೇ ಕೆಲಸ ಪ್ರೀತಿಸುವ ಮತ್ತು ಹೂಡಿಕೆ ಮಾಡುವ ಜನರು ನನಗೆ ಬೇಕು. ದುರದೃಷ್ಟವಶಾತ್ ಹೆಚ್ಚಿನವರು ನನ್ನಗೆ ಬೇಕಾದಂತೆ ಸಿಗುವುದಿಲ್ಲ.ಇದು ಜೊತೆಯಾಗಿ ಕೆಲಸ ಮಾಡುವುದಕ್ಕೆ ಕಷ್ಟವಾಗಿಸುತ್ತದೆ. ನನ್ನ 40 ಜನರ ತಂಡವು ನನ್ನ ಕ್ರಿಯೇಟಿವಿಟಿ ವಿಧಾನವನ್ನು ಅರ್ಥಮಾಡಿಕೊಂಡಿದೆ. ನಾವು ಪರಿಪೂರ್ಣವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇವೆ.
ನಿಮ್ಮ ಸಿನಿಮಾಗಳಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಐ ಆಮ್ ಗಾಡ್, ದಿ ಕ್ರೇಜಿ ಸೌಂಡ್ ಟ್ರ್ಯಾಕ್‌ನಿಂದ ನಾವು ಏನನ್ನು ನಿರೀಕ್ಷಿಸಬಹುದು?
ಈ ಚಿತ್ರಕ್ಕಾಗಿ ಸುಮಾರು 20 ರಿಂದ 22 ಹಾಡುಗಳನ್ನು ರಚಿಸಿದ್ದೇನೆ. ಪ್ರತಿ ಟ್ರ್ಯಾಕ್ ಅನನ್ಯವಾಗಿದೆ. ಪ್ರೇಕ್ಷಕರಿಗೆ ಹೊಸದನ್ನು ನೀಡುತ್ತದೆ. ಜನರು ಆಕರ್ಷಕವಾದ ಸಂಗೀತ ರಸದೌತಣ ಅನುಭವಿಸಬೇಕೆಂದು ಬಯಸುತ್ತೇನೆ. ಹಾಡುಗಳ ಹಿಂದಿನ ಕಥೆಗಳನ್ನು ಹಂಚಿಕೊಳ್ಳಲು ಸಂಗೀತ ಕಛೇರಿ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಕಾಲೇಜುಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೇನೆ.
'ಐ ಆಮ್ ಗಾಡ್ - ದಿ ಕ್ರೇಜಿ ಚಿತ್ರದಲ್ಲಿ ಯಾರು ನಟಿಸಿದ್ದಾರೆ?
ನಮ್ಮ ಹೋಮ್ ಬ್ಯಾನರ್ ಈಶ್ವರಿ ಪ್ರೊಡಕ್ಷನ್‌ನ ಸಹಯೋಗದಲ್ಲಿ ಅದ್ವಿಕ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ನಾನು ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಕೊರಿಯನ್ ನಟಿ ಸಲೋನಿ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಹಿರಿಯ ಮಗ ಮನೋರಂಜನ್ ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 150 ದಿನಗಳಲ್ಲಿ ಚಿತ್ರೀಕರಣ ಇರಲಿದ್ದು, ಅದರಲ್ಲಿ ಅರ್ಧದಷ್ಟು 50 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೇ ವೇಳೆಗೆ ಚಿತ್ರೀಕರಣ ಮುಗಿಸುವ ಗುರಿ ಹೊಂದಿದ್ದೇವೆ.
ಐ ಆಮ್ ಗಾಡ್ - ದಿ ಕ್ರೇಜಿಯ ಕ್ರಿಯೇಟಿವಿಟಿ ಅಂಶಗಳೊಂದಿಗೆ ನೀವು ಹೇಗೆ ಕೈಜೋಡಿಸಿದ್ದೀರಿ?
ಛಾಯಾಗ್ರಾಹಕ ಗಂಗು ಹೊರತುಪಡಿಸಿ, ಕಥೆ, ಚಿತ್ರಕಥೆ, ಕಲಾಕೃತಿ, ವಸ್ತ್ರ ವಿನ್ಯಾಸ, ಸಂಗೀತ, ಸಾಹಸ ದೃಶ್ಯ, ನಿರ್ದೇಶನ ಸೇರಿದಂತೆ ಎಲ್ಲಾ ಎಲ್ಲಾವನ್ನು ನಾನೇ ಮಾಡುತ್ತಿದ್ದೇನೆ. ಇದು ನಿಜವಾಗಿಯೂ ಒನ್ ಮ್ಯಾನ್ ಶೋ. ಆದಾಗ್ಯೂ ಸಾಹಸದ ಸೀಕ್ವೆನ್ಸ್‌ಗಳಲ್ಲಿ ಮಾಸ್ ಮಾಧ ಎಂಬ ಒಬ್ಬ ಸಹಾಯಕರ ನೆರವು ಪಡೆದಿದ್ದೇನೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಹೇಗೆ ನೋಡಿದ್ದೀರಿ?
ಉದ್ಯಮ ಬದಲಾಗಿದೆ, ಆದರೆ ಯಾವಾಗಲೂ ಉತ್ತಮವಾಗಿಲ್ಲ. ಹಾಗೆ ಕಂಡರೂ ನಿಜವಾದ ಒಗ್ಗಟ್ಟು ಇಲ್ಲ. ನಮಗೆ ರಚನಾತ್ಮಕ ನಾಯಕತ್ವ ವ್ಯವಸ್ಥೆಯ ಕೊರತೆಯಿದೆ. ಇದು ಸದ್ಯದ ಸಮಸ್ಯೆಯಾಗಿದೆ. ಮೂವತ್ತು ವರ್ಷಗಳ ಹಿಂದೆಯೇ ಈ ಬಗ್ಗೆ ನಾನು ಕಳವಳ ವ್ಯಕ್ತಪಡಿಸಿದ್ದೆ, ಆದರೆ ಅವುಗಳನ್ನು ಎಂದಿಗೂ ಪರಿಹರಿಸಲಿಲ್ಲ. ಅಗತ್ಯವಿದ್ದಾಗ ಮಾತ್ರ ಜನರು ಒಗ್ಗೂಡುತ್ತಾರೆ, ಆದರೆ ನಿಜವಾದ ಒಗ್ಗಟ್ಟು ಅಪರೂಪ.
ಐ ಆಮ್ ಗಾಡ್ - ದಿ ಕ್ರೇಜಿ ಮತ್ತು ನಿಮ್ಮ ಮುಂದಿನ ಚಿತ್ರಗಳ ಬಗ್ಗೆ ಏನನ್ನು ನಿರೀಕ್ಷಿಸಬಹುದು?
ತಂತ್ರಜ್ಞಾನದ ವಿಷಯದಲ್ಲಿ ಮಾತ್ರವಲ್ಲ, ಸಿನಿಮಾ ನಿರ್ಮಾಣ ವಿಧಾನದಲ್ಲಿ ಈ ಚಿತ್ರ ತುಂಬಾ ವಿಶಿಷ್ಟವಾಗಿದೆ. ಮೊದಲ ಬಾರಿಗೆ ಇಂತಹ ಸಿನಿಮಾ ಮಾಡುತ್ತಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ.
ಇದೀಗ ಪ್ರಾರಂಭಿಸಲಾದ 'ಪ್ಯಾರ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರಾಧಾಕೃಷ್ಣ ನಿರ್ದೇಶನದ ಜೂನಿಯರ್ ಚಿತ್ರದಲ್ಲೂ ನನ್ನದು ಮಹತ್ವದ ಪಾತ್ರವಿದ್ದು, ಅದು ಪೂರ್ಣಗೊಂಡಿದೆ. KD ಯಲ್ಲಿನ ನನ್ನ ಹೆಚ್ಚಿನ ಭಾಗಗಳನ್ನು ಭಾಗ 2 ಕ್ಕೆ ವರ್ಗಾಯಿಸಲಾಗಿದೆ. ಅಲ್ಲದೇ ಪ್ರೇಮ ಲೋಕ 2 ಗಾಗಿ ಹಾಡುಗಳನ್ನು ಬರೆದಿದ್ದೇನೆ, ಆದರೆ ನನ್ನ ಪ್ರಾಥಮಿಕ ಗಮನವು ಐ ಆಮ್ ಗಾಡ್ - ದಿ ಕ್ರೇಜಿ ಕಡೆಯೇ ಇದೆ. ಕಥೆಗಳನ್ನು ಹೇಳಲು ಹೊಸ ಮಾರ್ಗಗಳನ್ನು ಹುಡುಕುವುದನ್ನು ನಿನ್ನಿಂದ ನಿರೀಕ್ಷಿಸಬಹುದು.