ಮ್ಯಾಕ್ಸ್ ಚಿತ್ರ 
ಸಿನಿಮಾ ಸುದ್ದಿ

ಕಿಚ್ಚಾ ಸುದೀಪ್ ಅಭಿನಯದ Max ಚಿತ್ರ ಶೀಘ್ರ OTT ಲಗ್ಗೆ ; ಯಾವಾಗ? ಎಲ್ಲಿ?

ಕಳೆದ ಡಿಸೆಂಬರ್ 25ರಂದು ತೆರೆಗೆ ಬಂದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ನಟ ಕಿಚ್ಚಾ ಸುದೀಪ್‌ ಅಭಿನಯದ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಚಿತ್ರ ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡುತ್ತಿದೆ.

ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಆಕ್ಷನ್-ಪ್ಯಾಕ್ಡ್ ಕನ್ನಡ ಚಿತ್ರ ಮ್ಯಾಕ್ಸ್ ಶೀಘ್ರದಲ್ಲೇ ಒಟಿಟಿ ಪ್ಲಾಟ್ ಫಾರ್ಮ್ ಗೆ ಲಗ್ಗೆ ಇಡುತ್ತಿದೆ.

ಹೌದು.. ಕಳೆದ ಡಿಸೆಂಬರ್ 25ರಂದು ತೆರೆಗೆ ಬಂದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ನಟ ಕಿಚ್ಚಾ ಸುದೀಪ್‌ ಅಭಿನಯದ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಚಿತ್ರ ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡುತ್ತಿದೆ.

ಡಿಸೆಂಬರ್‌ 25ರ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಮ್ಯಾಕ್ಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ 2 ವಾರಗಳೇ ಕಳೆದರೂ ಚಿತ್ರಮಂದಿರಗಳಲ್ಲಿ ಮ್ಯಾಕ್ಸ್ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಿತ್ತು. ಇದೀಗ 10 ದಿನಗಳ ಬಳಿಕ ಈ ಸಿನಿಮಾದ ಒಟಿಟಿ ಪ್ರಸಾರದ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಎಲ್ಲಿ ಬಿಡುಗಡೆ?

ಈಗಾಗಲೇ ಜೀ5 ಸಂಸ್ಥೆ ಮ್ಯಾಕ್ಸ್‌ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಸ್ಯಾಟಲೈಟ್‌ ಹಕ್ಕುಗಳನ್ನೂ ಸಹ ಜೀ ಕನ್ನಡ ಪಡೆದುಕೊಂಡಿದೆ. ಅದರಂತೆ ಜೀ 5ನಲ್ಲಿ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಜೀ5 ಮ್ಯಾಕ್ಸ್‌ ಚಿತ್ರವನ್ನು ಸ್ಟ್ರೀಮಿಂಗ್ ಮಾಡಲು ಸಜ್ಜಾಗುತ್ತಿದೆ ಎಂಬ ವರದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ಜೀ5 ಒಟಿಟಿ ಅಧಿಕೃತ ಘೋಷಣೆ ಮಾಡಬೇಕಿದೆ.

ಯಾವಾಗ ಒಟಿಟಿಗೆ?

ಮ್ಯಾಕ್ಸ್ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ 14 ದಿನಗಳನ್ನು ಪೂರೈಸಿದ್ದು, ಥಿಯೇಟ್ರಿಕಲ್‌ ಓಟ ಮುಗಿದ ಬಳಿಕ ಒಟಿಟಿಯತ್ತ ಮುಖಮಾಡಲಿದೆ ಎನ್ನಲಾಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಜನವರಿ ಕೊನೆಯ ವಾರದಲ್ಲಿ ಅಂದರೆ ಜನವರಿ 31ರಂದು ಚಿತ್ರ ಓಟಿಟಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ ಓಟಿಟಿ ಬಿಡುಗಡೆ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT