ರಚನಾ ಇಂದರ್ 
ಸಿನಿಮಾ ಸುದ್ದಿ

'ತೀರ್ಥರೂಪ ತಂದೆಯವರಿಗೆ' ಚಿತ್ರದಲ್ಲಿ 'ಲವ್ 360' ಖ್ಯಾತಿಯ ನಟಿ ರಚನಾ ಇಂದರ್ ನಟನೆ

ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು 2023ರಲ್ಲಿ ತೆರೆಕಂಡ 'ಹೊಂದಿಸಿ ಬರೆಯಿರಿ' ಚಿತ್ರದ ಹಿಂದಿನ ನಿರ್ಮಾಣ ಸಂಸ್ಥೆಯಾದ ಸಂಡೇ ಸಿನಿಮಾಸ್ ಪ್ರಸ್ತುತಪಡಿಸುತ್ತಿದೆ.

ಲವ್ ಮಾಕ್‌ಟೇಲ್ ಮತ್ತು ಶಶಾಂಕ್ ನಿರ್ದೇಶನದ 'ಲವ್ 360' ಚಿತ್ರದಲ್ಲಿನ ಪಾತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ರಚನಾ ಇಂದರ್ ಇದೀಗ ರಾಮೇನಹಳ್ಳಿ ಜಗನ್ನಾಥ್ ಬರೆದು ನಿರ್ದೇಶಿಸಿದ ಮುಂಬರುವ ಚಿತ್ರ 'ತೀರ್ಥರೂಪ ತಂದೆಯವರಿಗೆ' ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಶೀರ್ಷಿಕೆ ಮತ್ತು ತಾರಾಗಣಕ್ಕಾಗಿ ತೀವ್ರ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದಲ್ಲಿ ಸಿತಾರಾ ಮತ್ತು ರಾಜೇಶ್ ನಟರಂಗ ಅವರಂತಹ ಹಿರಿಯ ಕಲಾವಿದರೂ ಇದ್ದಾರೆ.

ರಚನಾ ಅವರು ಅಕ್ಷರ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ತೆಲುಗು ಸರಣಿ ಗುಪ್ಪೆದಂತ ಮನಸ್ಸು (2020) ನಲ್ಲಿನ ಪಾತ್ರಕ್ಕಾಗಿ ಹೆಸರಾದ ನಟ ನಿಹಾರ್ ಮುಖೇಶ್ ಅವರಿಗೆ ಜೋಡಿಯಾಗಿದ್ದಾರೆ.

'ತೀರ್ಥರೂಪ ತಂದೆಯವರಿಗೆ' ಚಿತ್ರದ ಚಿತ್ರೀಕರಣವು ಸದ್ಯ ಪ್ರಗತಿಯಲ್ಲಿದ್ದು, ಚಿತ್ರತಂಡ ಈಗಾಗಲೇ ಸುಮಾರು 50 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಮೈಸೂರು, ಕೊಚ್ಚಿ ಮತ್ತು ಮೂಡಿಗೆರೆಯಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಂಕ್ರಾಂತಿ ಹಬ್ಬದ ನಂತರ ಚಿತ್ರತಂಡವು ಮೂಡಿಗೆರೆಯಲ್ಲಿ ನಾಲ್ಕನೇ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದು, ನಂತರ ಉತ್ತರ ಭಾರತದಾದ್ಯಂತ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದೆ.

ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು 2023ರಲ್ಲಿ ತೆರೆಕಂಡ 'ಹೊಂದಿಸಿ ಬರೆಯಿರಿ' ಚಿತ್ರದ ಹಿಂದಿನ ನಿರ್ಮಾಣ ಸಂಸ್ಥೆಯಾದ ಸಂಡೇ ಸಿನಿಮಾಸ್ ಪ್ರಸ್ತುತಪಡಿಸುತ್ತಿದೆ.

'ತೀರ್ಥರೂಪ ತಂದೆಯವರಿಗೆ' ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು ಆವೃತ್ತಿಯು 'ಪ್ರಿಯಮೈನ್ ನಾಂಕು' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಲಿದೆ. ಚಿತ್ರವು ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಆಗಿದ್ದು, ದೀಪಕ್ ಯರಗೇರಾ ಅವರ ಛಾಯಾಗ್ರಹಣ, ಜೋ ಕಾಸ್ಟ್ ಸಂಗೀತ ಸಂಯೋಜನೆ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ; ನಾಳೆ ವಿಚಾರಣೆ

BlackBuck: 'ಹೋಗೋರನ್ನ ತಡೆಯಲ್ಲ.. ಸರ್ಕಾರವನ್ನ ಬ್ಲ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ': DCM DK Shivakumar

ಆಳಂದದಲ್ಲಿ ಅಲ್ಪಸಂಖ್ಯಾತ, ಎಸ್‌ಸಿ ಮತ ಡಿಲೀಟ್ ಮಾಡುವ ಗುರಿ: ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್

ಕೀಪರ್ ಎಸೆದ ಚೆಂಡು ತಲೆಗೆ ಬಡಿದು ಅಂಪೈರ್ ನೋವಿನಲ್ಲಿದ್ದರೆ ನಾಚಿಕೆ ಇಲ್ಲದೆ ನಗುತ್ತಿದ್ದ Pakistan ನಾಯಕ, Video!

ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ: ದೇವಾಲಯ ಪ್ರಕರಣದ ಬಗ್ಗೆ CJI ಹೇಳಿಕೆ

SCROLL FOR NEXT