ಜಯಣ್ಣ, ದರ್ಶನ್, ಮೀನಾ ತೂಗುದೀಪ, ಭೋಗೇಂದ್ರ ಮತ್ತು ದಿನಕರ್ 
ಸಿನಿಮಾ ಸುದ್ದಿ

ನನ್ನಮ್ಮನಿಗೆ, ವಿಶ್ವದ ಅತ್ಯುತ್ತಮ ನಟ ದರ್ಶನ್, ಅತ್ಯುತ್ತಮ ನಿರ್ದೇಶಕ ನಾನು: ದಿನಕರ್ ತೂಗುದೀಪ

ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ದಿನಕರ್ ತೂಗುದೀಪ್, ನನ್ನ ತಾಯಿಗೆ, ವಿಶ್ವದ ಅತ್ಯುತ್ತಮ ನಟ ದರ್ಶನ್, ಮತ್ತು ಅತ್ಯುತ್ತಮ ನಿರ್ದೇಶಕ ನಾನು ಎಂದು ಅವರು ನಗುತ್ತಾ ಹೇಳಿದರು.

ಆರು ವರ್ಷಗಳ ನಂತರ ರಾಯಲ್ ಚಿತ್ರದ ಮೂಲಕ ದಿನಕರ್ ತೂಗುದೀಪ್ ನಿರ್ದೇಶನಕ್ಕೆ ಮರಳಿದ್ದಾರೆ. ಈ ಸಿನಿಮಾ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಮೈಲಿಗಲ್ಲಾಗಿದೆ. ರಾಯಲ್ ಚಿತ್ರದ ಮೊದಲ ಪ್ರದರ್ಶನವು ಕುಟುಂಬಕ್ಕೆ ಸೀಮಿತವಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ, ಅವರ ತಾಯಿ ಮೀನಾ ತೂಗುದೀಪ, ಅವರ ಸಹೋದರಿ ಸೇರಿದಂತೆ ಕುಟುಂಬಸ್ಥರು ಸೇರಿ ಸಿನಿಮಾ ವೀಕ್ಷಿಸಿದ್ದಾರೆ.

ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ದಿನಕರ್ ತೂಗುದೀಪ್, ನನ್ನ ತಾಯಿಗೆ, ವಿಶ್ವದ ಅತ್ಯುತ್ತಮ ನಟ ದರ್ಶನ್, ಮತ್ತು ಅತ್ಯುತ್ತಮ ನಿರ್ದೇಶಕ ನಾನು ಎಂದು ಅವರು ನಗುತ್ತಾ ಹೇಳಿದರು. "ನಮ್ಮ ಮೇಲಿನ ಅವರ ಪ್ರೀತಿ ಎಷ್ಟು ಶುದ್ಧವಾಗಿದೆಯೆಂದರೆ ಅವರು ನಮ್ಮ ನ್ಯೂನತೆಗಳನ್ನು ಎಂದಿಗೂ ನೋಡುವುದಿಲ್ಲ. ನಾವು ಮಾಡುವ ಎಲ್ಲವನ್ನೂ ಅವರು ಮೆಚ್ಚುತ್ತಾರೆ ಎಂದು ದಿನಕರ್ ತಮ್ಮ ತಾಯಿಯನ್ನು ಶ್ಲಾಘಿಸಿದ್ದಾರೆ.

ದಿನಕರ್ ಅವರ ರಾಯಲ್ ಸಿನಿಮಾ ನೋಡಲು ಕುಟುಂಬಸ್ಥರ ಜೊತೆ ಅವರ ಮಗ ಸೂರ್ಯ ಆಗಮಿಸಿದ್ದರು. ಚೊಚ್ಚಲ ಪ್ರದರ್ಶನದ ನಿಜವಾದ ಹೈಲೈಟ್ ಸೂರ್ಯ ಎಂದು ದಿನಕರ್ ಬಹಿರಂಗಪಡಿಸಿದರು. "ಈ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಪಾದಾರ್ಪಣೆ ಮಾಡುತ್ತಿರುವ ನನ್ನ ಮಗ ಸೂರ್ಯ ಅವರ ಕಾರಣದಿಂದಾಗಿ ದರ್ಶನ್ ಈ ಚಿತ್ರವನ್ನು ವೀಕ್ಷಿಸಿದರು. ನಂತರ, ಅವರು, ‘ನಿಮ್ಮ ಮಗ ನಿನಗಿಂತ ಚೆನ್ನಾಗಿ ಮಾಡಿದ್ದಾನೆ ಎಂದು ಹೇಳಿದರು. ನನ್ನ ತಾಯಿ ಮತ್ತು ದರ್ಶನ್ ಸೂರ್ಯನ ಚೊಚ್ಚಲ ಪ್ರವೇಶವನ್ನು ಪರದೆಯ ಮೇಲೆ ನೋಡಿ ತುಂಬಾ ಸಂತೋಷಪಟ್ಟರು ಎಂದು ದಿನಕರ್ ವಿವರಿಸಿದರು.

ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಹೇಳಿ ಮಾಡಿಸಿದ ಕ್ಲಾಸಿಕ್ ಕಮರ್ಷಿಯಲ್ ಮನರಂಜನಾತ್ಮಕ ಸಿನಿಮಾವಾಗಿದೆ ಎಂದು ಸಿನಿಮಾ ನೋಡಿದ ದರ್ಶನ್ ತಿಳಿಸಿದ್ದಾರೆ ಎಂದು ದಿನಕರ್ ಹೇಳಿದರು. ದಿನಕರ್ ಮತ್ತೆ ನಿರ್ದೇಶನಕ್ಕೆ ಮರಳಿದ ಸಂಭ್ರಮ ಒಂದೆಡೆಯಾದರೆ ಮೊದಲ ಪ್ರದರ್ಶನವನ್ನು ನನ್ನ ಎಲ್ಲಾ ಕುಟುಂಬಸ್ಥರು ಒಟ್ಟಿಗೆ ಸೇರಿ ವೀಕ್ಷಿಸಿದ್ದು ನನಗೆ ಮತ್ತಷ್ಟು ಸಂತಸ ತಂದಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT