ಬೆಂಗಳೂರು: ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಿದ್ದು, ಹನುಮಂತ ಲಮಾಣಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಇದೀಗ ಬಿಗ್ ಬಾಸ್ ಮನೆಯೊಳಗಿದ್ದ ಹಲವರ ಕಥೆಗಳು ಸುದ್ದಿಗಳಾಗಿ ಬದಲಾಗುತ್ತಿವೆ. ಫಿನಾಲೆಗೆ ಒಂದು ವಾರ ಬಾಕಿ ಇರುವಾಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದ ಗೌತಮಿ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ.
ಸತ್ಯ ಧಾರಾವಾಹಿ ಮೂಲಕ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗೌತಮಿ, ಎಲ್ಲರ ಮನೆ ಮಾತಾಗಿದ್ದರು. ಸತ್ಯ ಪಾತ್ರಕ್ಕೂ ಗೌತಮಿ ನಿಜಜೀವನದಲ್ಲಿ ಇರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ಮೊದಲ ದಿನದಿಂದಲೂ ಒಂದೇ ರೀತಿಯಲ್ಲಿದ್ದ ಗೌತಮಿ ಅವರ ಪಾಸಿಟಿವ್ ವರ್ತನೆಯಿಂದಲೇ ಬಹಳಷ್ಟು ಮಂದಿಗೆ ಇಷ್ಟವಾಗಿದ್ದರು. ಆದರೆ, ಕೊನೆಯ ಒಂದು ವಾರ ಬಾಕಿ ಇರುವಾಗ ಮನೆಯಿಂದ ಹೊರಬಂದಿದ್ದು, ಅಂದಿನಿಂದಲೂ ಅವರ ಸುತ್ತ ಹಲವು ಕಥೆಗಳು ಸುತ್ತುತ್ತಿವೆ.
ಗೌತಮಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇಂಬು ನೀಡುತ್ತಿರುವುದು ಅವರ ಮಾವ ಗಣೇಶ್ ಕಾಸರಗೋಡು ಅವರು ಹಾಕಿರುವ ಫೇಸ್‌ಬುಕ್ ಪೋಸ್ಟ್. ಗಣೇಶ್ ಕಾಸರಗೋಡು ಅವರಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಅಭಿಷೇಕ್ ಕಾಸರಗೋಡು ಎರಡನೇ ಮಗ ಅಲೋಕ್. ಅಭಿಷೇಕ್ ಮತ್ತು ಗೌತಮಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಯೇ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.
ಗಣೇಶ್ ಕಾಸರಗೋಡು ಅವರು ತಮ್ಮ ಕಿರಿಯ ಪುತ್ರನ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರುವ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಗೌತಮಿ ಮತ್ತು ಅಭಿಷೇಕ್ ಫೋಟೊಗಳಿಲ್ಲ. ಇದೀಗ ಗೌತಮಿ ಜಾದವ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳಿಗೆ ಪುಷ್ಟಿ ನೀಡಿದೆ. ಇದಕ್ಕೂ ಮುನ್ನ ಗಣೇಶ್ ಕಾಸರಗೋಡು ಅವರು ತಮ್ಮ ಪತ್ನಿ, ಕಿರಿಯ ಮಗ ಮತ್ತು ಸೊಸೆಯ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದು, ಯಾವ ಸುಂಟರಗಾಳಿಯೂ ಇಲ್ಲ ಬಿರುಗಾಳಿಯೂ ಇಲ್ಲ, ಇದು ನಮ್ಮ ಹ್ಯಾಪಿ ಕುಟುಂಬ ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ 'ಅಪ್ಪ-ಅಮ್ಮನನ್ನು ಬಿಟ್ಟು ಕುರುಡು ಮೋಹಕ್ಕೆ ಮರುಳಾಗಿ ಹೆಂಡತಿಯ ಬಾಲ ಹಿಡಿದು ಹೊರಟು ಹೋಗುವ ನಿಯತ್ತಿಲ್ಲದ ಗಂಡು ಮಕ್ಕಳಿಗೆ ಅರ್ಪಣೆ...!' ಶ್ರಮ ಅರ್ಥವಾದರೆ ಅಪ್ಪ ಅರ್ಥವಾಗುತ್ತಾನೆ, ಕರುಣೆ ಅರ್ಥವಾದರೆ ತಾಯಿ ಅರ್ಥವಾಗುತ್ತಾಳೆ. ಶುಭಂ' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಅಭಿಷೇಕ್ ಗಣೇಶ್ ಕಾಸರಗೋಡ್ ಅವರ ಹಿರಿಯ ಮಗನಾಗಿದ್ದು ಅವರ ಮತ್ತು ಗೌತಮಿ ಜಾದವ್ ಅವರ ಫೋಟೊ ಹಂಚಿಕೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಹಲವರು ಹಿರಿ ಮಗ ಮತ್ತು ಸೊಸೆಯ ಬಗ್ಗೆ ವಿಚಾರಿಸಿದಾದ ಅವರನ್ನೇ ಕೇಳಿ ಎನ್ನುವ ಉತ್ತರ ಕೊಟ್ಟಿದ್ದಾರೆ.