ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಮತ್ತು ಡಾಲಿ ಧನಂಜಯ್ ನಟನೆಯ ಹೊಯ್ಸಳ ಮುಂತಾದ ಚಿತ್ರಗಳ ನಿರ್ದೇಶಕ ವಿಜಯ್ ಎನ್ ತಮ್ಮ ಮುಂದಿನ ಆಕ್ಷನ್-ಪ್ಯಾಕ್ಡ್ ಚಿತ್ರ 'ಆಲ್ಫಾ' ಮೂಲಕ ಹೇಮಂತ್ ಕುಮಾರ್ ಅವರನ್ನು ನಾಯಕನನ್ನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣದ ಶೇ 60 ರಷ್ಟು ಪೂರ್ಣಗೊಂಡಿದ್ದು, ಇದೀಗ ಹೊಸ ವಿಚಾರವೊಂದು ತಿಳಿದುಬಂದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಮತ್ತು ಡೊಳ್ಳು ಚಿತ್ರದ ನಟ ಕಾರ್ತಿಕ್ ಮಹೇಶ್ ಇದೀಗ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿದುಬಂದಿದೆ. ಸದ್ಯ ಎವಿಆರ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ದೇಶಕ ಸುನಿ ಅವರೊಂದಿಗೆ ರಿಚಿ ರಿಚ್ ಚಿತ್ರದಲ್ಲಿ ನಟಿಸುತ್ತಿರುವ ಕಾರ್ತಿಕ್, ಆ್ಯಕ್ಷನ್-ಪ್ಯಾಕ್ಡ್ ಆಲ್ಫಾದಲ್ಲಿ ಹೇಮಂತ್ ಕುಮಾರ್ ಅವರ ಎದುರಿಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
'ಮೆನ್ ಲವ್ ವಯಲೆನ್ಸ್' ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಚಿತ್ರವು ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಕುರಿತು ಹೇಳುತ್ತದೆ. ಹೇಮಂತ್ ಕುಮಾರ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ವಿಜಯ್ ಅವರ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಅವರ ಪಾತ್ರ ಏನೆಂಬುದು ತಿಳಿಯಬೇಕಿದೆ.
LA ಬ್ಯಾನರ್ ಅಡಿಯಲ್ಲಿ ಆನಂದ್ ಕುಮಾರ್ ನಿರ್ಮಿಸಿರುವ ಆಲ್ಫಾ ಚಿತ್ರಕ್ಕೆ ಕಾರ್ತಿಕ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಾಸ್ತಿ ಅವರ ಸಂಭಾಷಣೆ ಇದೆ.