ನಟಿ ಕಾಜೋಲ್ ಮತ್ತು ರಾಮೋಜಿ ಫಿಲ್ಮ್ ಸಿಟಿ 
ಸಿನಿಮಾ ಸುದ್ದಿ

Ramoji Film City: ದೆವ್ವದ ಕಾಟ ಕುರಿತು ಬಾಲಿವುಡ್ ನಟಿ Kajol ಹೇಳಿದ್ದೇನು? ವಿರೋಧ.. ವಿವಾದ..!

ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಾವು ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರೂ ತಮ್ಮ ಜೊತೆಯಲ್ಲಿದ್ದವರು ಸಾಕಷ್ಟು ಕರಾಳ ಅನುಭವವನ್ನು ಹಂಚಿಕೊಂಡಿದ್ದರು. ಅಲ್ಲಿ ನಕಾರಾತ್ಮಕ ಶಕ್ತಿಗಳ ಬಗ್ಗೆ ಮಾತನಾಡುತ್ತಿದ್ದರು..

ಮುಂಬೈ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೆವ್ವದ ಕಾಟದ ಕುರಿತು ಮಾತನಾಡಿದ್ದ ಖ್ಯಾತ ಬಾಲಿವುಡ್ ನಟಿ ಕಾಜೋಲ್ ಇದೀಗ ಅವರ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಲೇ ತಮಗಾದ ಅನುಭವದ ಕುರಿತು ಮತ್ತೆ ಮಾತನಾಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಕಾಜೋಲ್ ಹೈದರಾಬಾದ್ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಮಗಾದ ಕರಾಳ ಅನುಭವಗಳ ಕುರಿತು ಮಾತನಾಡಿದ್ದರು.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಾವು ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರೂ ತಮ್ಮ ಜೊತೆಯಲ್ಲಿದ್ದವರು ಸಾಕಷ್ಟು ಕರಾಳ ಅನುಭವವನ್ನು ಹಂಚಿಕೊಂಡಿದ್ದರು. ಅಲ್ಲಿ ನಕಾರಾತ್ಮಕ ಶಕ್ತಿಗಳ ಬಗ್ಗೆ ಮಾತನಾಡುತ್ತಿದ್ದರು. ನಮಗೆ ಯಾವಾಗ ಅಲ್ಲಿ ಚಿತ್ರೀಕರಣ ಮುಗಿಯುತ್ತದೆಯೋ ಎಂದು ಕಾಯುತ್ತಿದ್ದೆವು ಎಂದು ಹೇಳಿದ್ದರು.

ಕಾಜೋಲ್ ಹೇಳಿದ್ದೇನು?

'ಹೈದರಾಬಾದ್​ನಲ್ಲಿ ರಾಮೋಜಿ ಫಿಲ್ಮ್ ಸಿಟಿ ಇದೆ. ಇಲ್ಲಿ ತೆಲುಗು ಸಿನಿಮಾಗಳ ಜೊತೆ ಕನ್ನಡ, ಹಿಂದಿ, ತಮಿಳು ಮೊದಲಾದ ಭಾಷೆಯ ಚಿತ್ರಗಳನ್ನು ಶೂಟ್ ಮಾಡಲಾಗಿದೆ. ಅಲ್ಲಿ ವಿವಿಧ ರೀತಿಯ ಸೆಟ್​ಗಳನ್ನು ನೀವು ಕಾಣಬಹುದು. ಒಮ್ಮೆ ಒಳ ಹೊಕ್ಕಿದರೆ ಸಂಪೂರ್ಣ ಶೂಟ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬರಬಹುದು. ಕಾಜೋಲ್ ಕೂಡ ಅನೇಕ ಚಿತ್ರಗಳ ಶೂಟ್​ನ ಇಲ್ಲಿ ಮಾಡಿದ್ದಾರೆ.

ಭಯ ಆಗೋ ಅನೇಕ ಸ್ಥಳಗಳು ಇವೆ. ಹೈದರಾಬಾದ್​ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಅದಕ್ಕೆ ಉತ್ತಮ ಉದಾಹರಣೆ. ಜಗತ್ತಿನಲ್ಲಿ ಹೆಚ್ಚು ಭಯಬೀಳಿಸುವ ಸ್ಥಳಗಳಲ್ಲಿ ಇದು ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ನನಗೆ ಒಳಗೆ ಹೋದಾಗ ಭಯ ಆಯಿತು ಮತ್ತು ಹೊರ ಬಂದರೆ ಸಾಕು ಎನಿಸುತ್ತಿತ್ತು' ಎಂದು ಅವರು ಹೇಳಿದ್ದರು.

ವ್ಯಾಪಕ ವಿರೋಧ, ಚಿತ್ರರಂಗದಲ್ಲೇ ಮಿಶ್ರ ಪ್ರತಿಕ್ರಿಯೆ

ಇನ್ನು ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ಮತ್ತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಲೇ ಈ ಬಗ್ಗೆ ನಟಿ ಕಾಜೋಲ್ ಯೂಟರ್ನ್ ಹೊಡೆದಿದ್ದಾರೆ. 'ನನ್ನ ಮಾ ಚಿತ್ರದ ಪ್ರಚಾರದ ಸಂದರ್ಭದಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಬಗ್ಗೆ ಹೇಳಿಕೆ ನೀಡಿದ್ದೆ.

ಅದರ ಬಗ್ಗೆ ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ನಾನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅನೇಕ ಸಿನಿಮಾಗಳ ಶೂಟ್ ಮಾಡಿದ್ದೇನೆ. ನಾನು ಹಲವು ಬಾರಿ ಅಲ್ಲಿಯೇ ಉಳಿದುಕೊಂಡಿದ್ದೇನೆ. ಸಿನಿಮಾ ನಿರ್ಮಾಣಕ್ಕೆ ಇದು ಒಳ್ಳೆಯ ಜಾಗ. ಪ್ರವಾಸಿಗರು ಇಲ್ಲಿ ಎಂಜಾಯ್ ಮಾಡೋದನ್ನು ನೋಡಿದ್ದೇನೆ. ಇದು ಉತ್ತಮ ಸ್ಥಳ. ಕುಟುಂಬಗಳು ಮತ್ತು ಮಕ್ಕಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಅಶ್ಲೀಲ ಜೋಕ್‌ಗಳು ಸ್ವೀಕಾರಾರ್ಹವಲ್ಲ; ಉದಯನಿಧಿ ವಿರುದ್ಧದ ಪೊಲೀಸರ ಕ್ರಮ ಸರಿಯಾಗಿದೆ: ನಟಿ ಕಂಗನಾ ರಣಾವತ್

PoK ಚುನಾವಣೆ ಒಂದು ನೆಪ; ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡುಗಳ ಬಳಕೆ: ಭಾರತ ಖಂಡನೆ

ಸಂಪುಟ ವಿಸ್ತರಣೆ ಸರ್ಕಸ್ ನಂತರ ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ